ETV Bharat / health

ಎಚ್ಚರ! ಕಿವುಡುತನಕ್ಕೆ ಕಾರಣವಾಗಬಹುದು ಇಯರ್​ಫೋನ್​, ಇಯರ್​ಬಡ್ಸ್ ಅತಿಯಾದ ಬಳಕೆ ​ - earpods prolonged usage problem

author img

By ETV Bharat Karnataka Team

Published : Aug 13, 2024, 11:02 AM IST

ನಿತ್ಯ ಅಧಿಕ ಮಟ್ಟದ ಶಬ್ಧದೊಂದಿಗೆ ಕೇಳುವಿಕೆಯ ಅಭ್ಯಾಸವೂ ಕಿವಿಯ ಸೂಕ್ಷ್ಮ ವಿನ್ಯಾಸದ ಮೇಲೆ ಹಾನಿ ಮಾಡುತ್ತದೆ. ಇದು ಸರಿಪಡಿಸಲಾಗದ ಕಿವುಡುತನಕ್ಕೆ ಕಾರಣವಾಗುತ್ತದೆ.

earphones and earpods prolonged usage can significantly damage your ear health
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ದೀರ್ಘಕಾಲದಿಂದ ಇಯರ್​ಬಡ್ಸ್​ ಅಥವಾ ಇಯರ್​ಫೋನ್ಸ್​​ ಬಳಕೆಯು ಕಿವಿಯ ಆರೋಗ್ಯದ ಮೇಲೆ ಗಣನೀಯ ಪ್ರಮಾಣದಲ್ಲಿ ಹಾನಿ ಉಂಟು ಮಾಡುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಇಯರ್​ ಫೋನ್​ಗಳ ಮೂಲಕ ಅಧಿಕ ಶಬ್ಧಕ್ಕೆ ಒಡ್ಡಿಕೊಳ್ಳುವುದರಿಂದ ಶಾಶ್ವತ ಕಿವುಡುತನಕ್ಕೆ ಕಾರಣವಾಗಬಹುದು. ಪ್ರತಿನಿತ್ಯ ಅಧಿಕ ಮಟ್ಟದ ಶಬ್ಧದೊಂದಿಗೆ ಕೇಳುವಿಕೆಯ ಅಭ್ಯಾಸವು ಕಿವಿಯ ಸೂಕ್ಷ್ಮ ವಿನ್ಯಾಸದ ಮೇಲೆ ಹಾನಿ ಮಾಡುತ್ತದೆ. ಇದು ಶಾಶ್ವತ ಕಿವುಡುತನಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಶಬ್ಧದ ಮಟ್ಟವನ್ನು ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದ್ದು, ಕಿವಿಯ ಆರೋಗ್ಯದ ಬಗ್ಗೆ ರಕ್ಷಣಾ ಕ್ರಮ ಅಗತ್ಯ ಎಂದಿದ್ದಾರೆ.

ನಿಯಮಿತ ಬಳಕೆದಾರರಲ್ಲಿ ತಪಾಸಣೆ ಅವಶ್ಯ: ಈ ಅಪಾಯವು ಯುವಜನತೆಯಲ್ಲಿ ಹೆಚ್ಚಿದೆ. ಕಾರಣ ಇವರು ಪದೇ ಪದೇ ಹೆಚ್ಚು ಅವಧಿಯವರಗೆ ಇಂತಹ ಸಾಧನಗಳನ್ನು ಬಳಸುತ್ತಾರೆ. ಜೊತೆಗೆ ಶಬ್ಧ ರದ್ದು (ನಾಯ್ಸ್​ ಕ್ಯಾನ್ಸಲಿಂಗ್​) ನಂತಹ ಹೆಡ್​ಫೋನ್​ಗಳನ್ನು ಸುಧಾರಿತ ಶಬ್ಧಗಳಲ್ಲಿ ಬಳಸುವುದರಿಂದ ಧ್ವನಿಯನ್ನು ಹೆಚ್ಚಿಸುವ ಅಗತ್ಯ ಕಡಿಮೆ ಮಾಡಿ, ಕಿವಿಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದು ಕಿವಿ ಆರೋಗ್ಯವನ್ನು ಮತ್ತಷ್ಟು ರಕ್ಷಿಸುತ್ತದೆ. ಅಧಿಕ ಮಟ್ಟದಲ್ಲಿ ಈ ಸಾಧನ ಬಳಕೆ ಮಾಡುವವರು ನಿಯಮಿತ ಶ್ರವಣ ತಪಾಸಣೆಗೆ ಒಳಗಾಗುವುದು ಸೂಕ್ತ ಎಂದು ಶಿಫಾರಸು ಮಾಡಲಾಗಿದೆ.

ಅಧಿಕ ಶಬ್ಧ ಮಟ್ಟ (130 ಡೆಸಿಬಲ್​​ಗಿಂತ ಹೆಚ್ಚಿನ ಶಬ್ಧವು ಕಿವಿ ನೋವಿಗೆ ಕಾರಣವಾಗಿ ಹಾನಿ ಉಂಟುಮಾಡುತ್ತದೆ) ಕಿವಿಯ ಒಳಾಂಗಣದಲ್ಲಿರುವ ಸಣ್ಣ ಕೂದಲು ಜೀವಕೋಶ ಹಾನಿ ಮಾಡುತ್ತದೆ. ಜೀವಕೋಶಗಳು ಪುನರುತ್ಪಾದಿಸಲು ಸಾಧ್ಯವಾಗುವುದಿಲ್ಲ. ಸುರಕ್ಷಿತ ಕೇಳುವಿಕೆ ಅಭ್ಯಾಸ ನಡೆಸದೇ ಹೋದಲ್ಲಿ ಇದು ಭಾಗಶಃ ಹಾನಿ ಅಥವಾ ಸಂಪೂರ್ಣ ಕಿವುಡತನಕ್ಕೆ ಕಾರಣವಾಗುತ್ತದೆ.

ಶಬ್ಧದ ಮಟ್ಟದ ಬಗ್ಗೆ ಇರಲಿ ಎಚ್ಚರ: 130 ಡೆಸಿಬಲ್‌ಗಳನ್ನು ಮೀರಿ ಶಬ್ಧದ ಕೇಳುವಿಕೆ ಕಿವಿ ನೋವು ಉಂಟಾಗುತ್ತದೆ ಮತ್ತು ಅಧಿಕ ಬಾಸ್​​ನ ಇಯರ್‌ಫೋನ್‌ಗಳು ಹಾನಿಯನ್ನುಂಟುಮಾಡುತ್ತವೆ. ಅನೇಕ ಬಾರಿ ಇಯರ್​ ಫೋನ್ ಅನ್ನು ಬೇರೆಯರೊಂದಿಗೆ​ ಹಂಚಿಕೊಳ್ಳುವಿಕೆ ಸೋಂಕಿಗೆ ಕೂಡ ಕಾರಣವಾಗುತ್ತದೆ. ಇದನ್ನು ತಪ್ಪಿಸಬೇಕು ಎನ್ನುತ್ತಾರೆ ಇಎನ್​ಟಿ ತಜ್ಞ ಡಾ ರಾಕೇಶ್​ ವರ್ಮಾ.

ಶುಚಿತ್ವಕ್ಕೆ ಆದ್ಯತೆ ನೀಡಿ: ಇಯರ್‌ಫೋನ್ ಬಳಕೆಯು ಶಬ್ಧ ಪ್ರೇರಿತ ಕಿವುಡತನ, ಟಿನ್ನಿಟಸ್ ಮತ್ತು ಹೈಪರಾಕ್ಯುಸಿಸ್‌ ಹಾನಿಗೆ ಕಾರಣವಾಗುತ್ತದೆ. ಅಲ್ಲದೇ ಇಯರ್​ ಫೋನ್​ ಅಥವಾ ಇಯರ್​ಬಡ್ಸ್​ನ ಕಳಪೆ ಶುಚಿತ್ವ ಕಿವಿ ಸೋಂಕುಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆ ಇದರ ಬಳಕೆ ಮಿತಗೊಳಿಸುವ ಜೊತೆಗೆ ಅದರ ಶುಚಿತ್ವ ಮತ್ತು ಶಬ್ಧ ರದ್ದು ಆಯ್ಕೆಗೆ ಶಿಫಾರಸು ಮಾಡುತ್ತಾರೆ ತಜ್ಞರು.

ಗುರುಗ್ರಾಮನ ಸಿಕೆ ಬಿರ್ಲಾ ಆಸ್ಪತ್ರೆಯ ಇಎನ್​ಟಿ ತಜ್ಞರಾದ ಡಾ ವಿಜಯ್​ ವರ್ಮಾ ಮಾತನಾಡಿ, ದೀರ್ಘ ಕಾಲ ಇಯರ್​ಫೋನ್​ ಅಥವಾ ಇಯರ್​ಪಾಡ್ಸ್​​ ಬಳಕೆ, ಶಬ್ಧ ಪ್ರೇರಿತ ಕಿವುಡುತನ, ಟಿನ್ನಿಟಸ್ ಮತ್ತು ಹೈಪರಾಕ್ಯುಸಿಸ್‌ ಹಾನಿಗೆ ಕಾರಣವಾಗಬಹುದು. ಕಳಪೆ ನೈರ್ಮಲ್ಯ ಅಭ್ಯಾಸ ಒಟಿಟಿಸ್ ಎಕ್ಸ್‌ಟರ್ನಾನಂತಹ ಕಿವಿ ಸೋಂಕುಗಳಿಗೆ ಕಾರಣವಾಗಬಹುದು ಎಂದಿದ್ದಾರೆ.

ಸುರಕ್ಷತೆಗೆ ಹೀಗೆ ಮಾಡಿ; ಇಯರ್​ಫೋನ್​ಗಳಲ್ಲಿ ಕಡಿಮೆ ಮಟ್ಟದ ಶಬ್ಧ, ಶುಚಿತ್ವ ನಿರ್ವಹಣೆ ಜೊತೆಗೆ ಶಬ್ಧ ರದ್ದತಿ ಆಯ್ಕೆ ಮೂಲಕ ಕಿವಿ ಆರೋಗ್ಯ ಕಾಪಾಡಬಹುದಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಏನಿದು ಹಠಾತ್​ ಕಿವುಡುತನ: ಈ ಸಮಸ್ಯೆಗೆ ಕಾರಣವೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.