Health Benefits of Apricots: ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ, ನಾವು ಪ್ರತಿದಿನ ಆರೋಗ್ಯಕರ ಆಹಾರ ಸೇವನೆ ಜೊತೆಗೆ ವ್ಯಾಯಾಮ ಮಾಡಬೇಕಾಗುತ್ತದೆ. ಇಂದಿನ ಒತ್ತಡ ಬದುಕಿನಲ್ಲಿ ಅನೇಕರು ನಾನಾ ಕಾರಣಗಳಿಂದ ವ್ಯಾಯಾಮ ಮಾಡದೇ ಜಂಕ್ ಫುಡ್ಗಳನ್ನು ಅತಿಯಾಗಿ ಸೇವಿಸುತ್ತಿದ್ದಾರೆ. ಇಂತಹ ಆಹಾರವನ್ನು ಸೇವಿಸುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಾಡುತ್ತವೆ.
ತಜ್ಞರು ಕೂಡ ಆರೋಗ್ಯಕರ ಹಣ್ಣುಗಳು ಹಾಗೂ ಒಣ ಹಣ್ಣುಗಳನ್ನು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಅದರಲ್ಲೊಂದು ಏಪ್ರಿಕಾಟ್ ಹಣ್ಣು, ಇದು ವಿಶೇಷ ಗುಣಗಳನ್ನು ಹೊಂದಿದೆ. ಪ್ರತಿನಿತ್ಯ ಬೆಳಗ್ಗೆ ಈ ಹಣ್ಣನ್ನು ಸೇವಿಸುವುದರಿಂದ ಅನೇಕ ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ತಜ್ಞರು. ಪ್ರತಿನಿತ್ಯ ಬೆಳಗ್ಗೆ ಇವುಗಳನ್ನು ತಿಂದರೆ ಯಾವೆಲ್ಲಾ ಲಾಭಗಳು ದೊರೆಯುತ್ತವೆ ಎಂಬುದನ್ನು ಈಗ ನೋಡೋಣ.
ಜೀರ್ಣಕ್ರಿಯೆ ಸುಧಾರಿಸುತ್ತೆ: ಏಪ್ರಿಕಾಟ್ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಜೀರ್ಣಾಂಗವ್ಯೂಹ ಸ್ವಚ್ಛವಾಗುತ್ತದೆ. ಇವುಗಳನ್ನು ತಿಂದರೆ ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳು ಶುಚಿಯಾಗಿ ಗ್ಯಾಸ್ ಮತ್ತು ಅಸಿಡಿಟಿಯಿಂದ ಮುಕ್ತಿ ಸಿಗುತ್ತದೆ. ಇದಲ್ಲದೇ ಹೊಟ್ಟೆ ಉಬ್ಬರ ಮತ್ತು ಅಜೀರ್ಣವೂ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಚರ್ಮದ ಆರೋಗ್ಯಕ್ಕೆ ಉತ್ತಮ: ಏಪ್ರಿಕಾಟ್ನಲ್ಲಿ ವಿಟಮಿನ್ ಎ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ. ಇವು ತ್ವಚೆಯ ಕೋಶಗಳನ್ನು ರಿಪೇರಿ ಮಾಡುತ್ತವೆ. ಇದರಿಂದ ತ್ವಚೆಯ ಶುಷ್ಕತೆ ಕಡಿಮೆಯಾಗುತ್ತದೆ. ಅಲ್ಲದೇ ಚರ್ಮವನ್ನು ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ತೂಕ ನಷ್ಟಕ್ಕೆ ಒಳ್ಳೆಯದು: ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಹೆಚ್ಚಿನ ತೂಕದಿಂದ ಬಳಲುತ್ತಿರುವ ಅನೇಕ ಜನರಿದ್ದಾರೆ. ಆದರೆ, ಅಂತಹವರಿಗೆ ಏಪ್ರಿಕಾಟ್ ತುಂಬಾ ಪ್ರಯೋಜನಕಾರಿ. ಇವುಗಳನ್ನು ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಸೇರುತ್ತದೆ. ಅವರು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಹೊಂದಿರುತ್ತಾರೆ. ಇದರಿಂದಾಗಿ ಕಡಿಮೆ ಆಹಾರ ಸೇವಿಸುತ್ತಾರೆ. ಇದರ ಪರಿಣಾಮವಾಗಿ, ತೂಕ ನಷ್ಟಕ್ಕೆ ಸಹಾಯ ಮಾಡಲು ಸೂಚಿಸಲಾಗುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಬೆಳಗ್ಗೆ ಏಪ್ರಿಕಾಟ್ ತಿಂದರೆ ಫಲ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಬಿಪಿ ನಿಯಂತ್ರಣ: ಏಪ್ರಿಕಾಟ್‌ಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ನ್ನು ಕರಗಿಸುತ್ತವೆ. ಇದರಲ್ಲಿರುವ ಪೊಟ್ಯಾಸಿಯಮ್ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ ಬಿಪಿಯನ್ನು ನಿಯಂತ್ರಿಸುತ್ತದೆ ಎಂದು ವೈದ್ಯಕೀಯ ತಜ್ಞರು.
ಕಣ್ಣಿನ ದೃಷ್ಟಿ ಸುಧಾರಿಸುತ್ತೆ: ಏಪ್ರಿಕಾಟ್ ಸೇವನೆಯಿಂದ ಕಣ್ಣಿನ ದೃಷ್ಟಿ ಸುಧಾರಿಸಲು ಸಾಧ್ಯವಾಗುತ್ತದೆ. ಏಪ್ರಿಕಾಟ್ನಲ್ಲಿ ಬೀಟಾ ಕ್ಯಾರೋಟಿನ್ ಹೇರಳವಾಗಿದೆ. ಈ ಹಣ್ಣುಗಳನ್ನು ತಿಂದರೆ ಅದರಲ್ಲಿರುವ ಬೀಟಾ ಕ್ಯಾರೋಟಿನ್ ನಮ್ಮ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ. ದೃಷ್ಟಿ ಸುಧಾರಿಸುವುದರ ಜೊತೆಗೆ ಒಣ ಕಣ್ಣುಗಳನ್ನು ಕಡಿಮೆ ಮಾಡುತ್ತದೆ. ಕಣ್ಣಿನ ಒತ್ತಡವೂ ಕಡಿಮೆಯಾಗುತ್ತದೆ. ಕಣ್ಣಿನ ಸಮಸ್ಯೆಯೂ ಬರುವುದಿಲ್ಲ ಎನ್ನುತ್ತಾರೆ ತಜ್ಞರು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ತಂಡದ ಸದಸ್ಯರು ಬೀಟಾ ಕ್ಯಾರೋಟಿನ್ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದೆ (ವರದಿಗಾಗಿ ಕ್ಲಿಕ್ ಮಾಡಿ).
ದೇಹಕ್ಕೆ ಬರುತ್ತೆ ಶಕ್ತಿ: ಕೆಲವರು ಬೆಳಿಗ್ಗೆ ಎದ್ದ ಕ್ಷಣದಿಂದ ದಣಿವು ಹಾಗೂ ಆಲಸ್ಯವನ್ನು ಅನುಭವಿಸುತ್ತಾರೆ. ಅಂತಹವರು ಬೆಳಗ್ಗೆ ಏಪ್ರಿಕಾಟ್ ತಿಂದರೆ ದೇಹಕ್ಕೆ ಶಕ್ತಿ ಬರುವುದರ ಜೊತೆಗೆ ಇಡೀ ದಿನ ಲವಲವಿಕೆಯಿಂದ ಕೂಡಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನೂ ವೀಕ್ಷಿಸಬಹುದು: https://pmc.ncbi.nlm.nih.gov/articles/PMC3693724/
ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.