ಹೈದರಾಬಾದ್: ಪುರುಷರಲ್ಲಿ 50 ವರ್ಷದ ಬಳಿಕ ಪ್ರಾಸ್ಟೇಟ್ ಹಿಗ್ಗುವಿಕೆ ಲಕ್ಷಣಗಳು ಗೋಚರಿಸುತ್ತದೆ. ಇದು ಯಾವುದೇ ರೀತಿಯ ಕ್ಯಾನ್ಸರ್ ಅಲ್ಲ. ಅನೇಕ ಮಂದಿ ಇದು ಪ್ರಾಸ್ಟೇಟ್ ಕ್ಯಾನ್ಸರ್ಗೆ ಕಾರಣವಾಗುತ್ತದೆ ಎಂಬ ಭಯದಲ್ಲಿ ಇರುತ್ತಾರೆ. ಆದರೆ, ಇದು ನಿಜವಲ್ಲ. ಪ್ರಾಸ್ಟೇಟ್ ಹಿಗ್ಗುವಿಕೆಗೆ ನಿಖರವಾದ ಕಾರಣ ತಿಳಿದಿಲ್ಲ. ಆದರೆ, ಮೂತ್ರಕೋಶದ ಕೆಳಗೆ, ನಂತರ ಕ್ರಮೇಣ ಮೂತ್ರನಾಳದ ಸುತ್ತಲೂ ಬೆಳೆಯುತ್ತದೆ. ಇದು ಮೂತ್ರ ಕೋಶ ಮತ್ತು ಮೂತ್ರನಾಳದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಫಲಿತಾಂಶವಾಗಿ ಮೂತ್ರನಾಳದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಪದೇ ಪದೆ ಮೂತ್ರ ವಿಸರ್ಜನೆಯಂತಹ ಸಮಸ್ಯೆಗಳು ಕಾಣುತ್ತದೆ. ಈ ರೀತಿಯ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡದೇ, ವೈದ್ಯರ ಸಂಪರ್ಕಕ್ಕೆ ಬರಬೇಕು. ಕೆಲವು ಪರೀಕ್ಷೆಗಳು ಈ ಸಮಸ್ಯೆಗೆ ಪರಿಹಾರವಾಗಬಹುದು.
ಇನ್ನು ಈ ಪ್ರಾಸ್ಟೇಟ್ ಹಿಗ್ಗುವಿಕೆ ಸಮಸ್ಯೆ ಕಾಡುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದ್ದರೆ, ಅವುಗಳ ಲಕ್ಷಣಗಳನ್ನು ಆಧಾರಿಸಿ ಮುನ್ನೆಚ್ಚರಿಕೆ ವಹಿಸಬಹುದು. ಈ ಸಂಬಂಧ ವೈದ್ಯರನ್ನು ಸಂಪರ್ಕಿಸಿ, ಸಮಸ್ಯೆಗೆ ಪರಿಹಾರ ಕಾಣಬಹುದು. ಇನ್ನು ಅದರ ಹೊರತಾಗಿ ಈ ಮುನ್ನೆಚ್ಚರಿಕೆ ವಹಿಸುವ ಮೂಲಕ ಸಮಸ್ಯೆ ಕಡಿಮೆ ಮಾಡಬಹುದು.
ಹೀಗಿದೆ ಇವುಗಳ ಲಕ್ಷಣ
- ಮೂತ್ರ ವಿಸರ್ಜನೆ ಆರಂಭಿಸಲು ಸಮಸ್ಯೆ ಉಂಟಾಗುವುದು
- ಮೂತ್ರ ವಿಸರ್ಜಿಸಲು ಕಷ್ಟಪಡುವುದು.
- ಮೂತ್ರದ ದುರ್ಬಲ ಹರಿವನ್ನು ಹೊಂದಿರುವುದು.
- ಪದೇ ಪದೆ ಮೂತ್ರ ವಿಸರ್ಜಿಸುವಂತಾಗುವುದು.
- ಮೂತ್ರ ವಿಸರ್ಜನೆಗೆ ರಾತ್ರಿಯಲ್ಲಿ ಪದೇ ಪದೆ ಎಚ್ಚರವಾಗುವುದು.
- ಮೂತ್ರದ ಅಸಂಯಮ.
ಇದಕ್ಕೆ ಈ ರೀತಿ ಪರಿಹಾರ ಕ್ರಮ ನಡೆಸಬಹುದು
- ಮಲಗುವು ಎರಡು ಅಥವಾ ಒಂದು ಗಂಟೆ ಮುನ್ನ ನೀರು, ದ್ರವ ರೂಪದ ಆಹಾರವನ್ನು ಸೇವಿಸದೇ ಇರುವುದು.
- ಹೊರಗೆ ಅಥವಾ ಪ್ರಯಾಣ ನಡೆಸುವಾಗ ದ್ರವಾಹಾರವನ್ನು ಸಾಧಾರಣ ಪ್ರಮಾಣದಲ್ಲಿ ಸೇವಿಸುವುದು.
- ಮೂತ್ರ ವಿಸರ್ಜನೆಗೆ ಹೋಗಬೇಕು ಎನ್ನಿಸಿದಾಕ್ಷಣಕ್ಕೆ ಶೌಚಾಲಯಕ್ಕೆ ಹೋಗುವುದು.
- ಮೂತ್ರ ವಿಸರ್ಜನೆಗೆ ಸಮಯವನ್ನು ನಿರ್ಣಯಿಸಿ. ಮೂತ್ರ ವಿಸರ್ಜನೆಯ ಭಾವ ವ್ಯಕ್ತವಾಗದಿದ್ದರೂ ನಿಗದಿತ ಸಮಯಕ್ಕೆ ಶೌಚಾಲಯಕ್ಕೆ ತೆರಳುವ ಅಭ್ಯಾಸ ರೂಢಿಸಿಕೊಳ್ಳಿ.
- ಶೀತಗಳು, ಮೂಗು ಕಟ್ಟುವ ಮತ್ತು ಅಲರ್ಜಿಗಳನ್ನು ನಿವಾರಿಸಲು ಬಳಸುವ ಆಂಟಿಹಿಸ್ಟಮೈನ್‌ಗಳಂತಹ ಔಷಧಗಳ ಸಂದರ್ಭದಲ್ಲಿ ಸ್ವಲ್ಪ ಎಚ್ಚರಿಕೆಯ ಅಗತ್ಯವಿದೆ. ಇವು ಮೂತ್ರದ ಹರಿವನ್ನು ಇನ್ನಷ್ಟು ಸಣ್ಣ ಮಾಡಬಹುದು. ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗುವುದನ್ನು ತಡೆಯಬಹುದು.
ಅನೇಕ ಬಾರಿ ಈ ಸಮಸ್ಯೆಗಳ ಲಕ್ಷಣಗಳು ಸೌಮ್ಯವಾಗಿದ್ದರೂ ಇದು ಗಂಭೀರವಾಗಿ ಪರಿಗಣಿಸುವ ಅಂಶವಾಗಿದೆ. ಈ ಹಿನ್ನೆಲೆ ಈ ಸಂಬಂಧಿತ ಸಮಸ್ಯೆಗಳಿಗೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಅವಶ್ಯವಾಗಿದೆ.
ಇದನ್ನೂ ಓದಿ: ಆತ್ಮ ವಿಶ್ವಾಸ ವೃದ್ಧಿಸಲು, ಮೆದುಳು ಚುರುಕಾಗಿಸಲು ಈ ಆಹಾರ ಸೇವಿಸಿ