ಹೈದರಾಬಾದ್: ದೀರ್ಘಾವಧಿಯ ಬೆನ್ನು ನೋವು ಅನೇಕರನ್ನು ಕಾಡುವ ಸಮಸ್ಯೆ. ಈ ಬೆನ್ನು ನೋವು ನಿವಾರಣೆಗೆ ಅನೇಕ ಪರಿಹಾರಗಳು ಲಭ್ಯವಿದೆ. ಇದರ ಚೇತರಿಕೆಯಲ್ಲಿ ಅನೇಕ ಸಂಕೀರ್ಣತೆಗಳೂ ಇವೆ. ಬೆನ್ನು ನೋವಿಗೆ ಕಾರಣವೇನು? ಇದರಿಂದಾಗುವ ಅಪಾಯಗಳೇನು? ಈ ವಿಚಾರಗಳನ್ನು ಅರಿಯುವುದು ಅವಶ್ಯಕ.
ಬೆನ್ನು ನೋವಿನಲ್ಲಿ ಹರ್ನಿಯೇಟೆಡ್ ಕಶೇರುಖಂಡವೂ ಒಂದು. ಸ್ಲಿಪ್ಡ್ ಡಿಸ್ಕ್ ಆದ ಇದು ಕಶೇರುಖಂಡ ಮತ್ತು ನರಗಳ ಮೇಲೆ ಒತ್ತಡ ಉಂಟುಮಾಡಿ ಸ್ನಾಯುಗಳ ಸಮಸ್ಯೆಗೆ ಕಾರಣವಾಗುತ್ತದೆ. ಕಾಲಿನಲ್ಲಿ ನೋವು ಉಂಟಾಗುತ್ತಿದ್ದರೆ ಅದರ ಹಿಂದೆ ಕೂಡ ನರದ ಡಿಸ್ಕ್ ಸಮಸ್ಯೆ ಕಂಡುಬರುತ್ತದೆ. ಇದರಿಂದಾಗಿ ಕಾಲಿನಲ್ಲಿ ಸೆಳೆತದ ಅನುಭವವಾಗುತ್ತದೆ. ಇದಕ್ಕೆ ಅನೇಕ ಬಾರಿ ಇರುವ ಪರಿಹಾರ ಸರ್ಜರಿ.
ದೀರ್ಘಕಾಲದಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರೆ ಸ್ಟಿರಾಯಿಡ್ ಇಂಜೆಕ್ಷನ್ಗಳು ಪರಿಹಾರ ನೀಡುತ್ತದೆ. ಇದು 8 ವಾರದಿಂದ 3 ತಿಂಗಳವರೆಗೆ ಬೆನ್ನು ನೋವಿನ ಸಮಸ್ಯೆಯಿಂದ ದೂರವಿಡುತ್ತದೆ. ಇತ್ತೀಚಿಗೆ ಇದಕ್ಕೆ ಹೊಸ ಚಿಕಿತ್ಸೆ ಲಭ್ಯವಾಗಿದ್ದು, ಅದುವೇ ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ (ಪಿಆರ್‌ಪಿ). ಈ ಚಿಕಿತ್ಸೆಯಲ್ಲಿ ರಕ್ತದಿಂದ ಪ್ಲೆಟ್ಲೆಟ್ನಲ್ಲಿರುವ ಪ್ಲಾಸ್ಮಾ ದ್ರವ ಪ್ರತ್ಯೇಕಿಸಿ ಅದನ್ನು ಸಿರಿಂಜ್ ಮೂಲಕ ಇಂಜೆಕ್ಟ್ ಮಾಡಲಾಗುತ್ತದೆ. ಇದು ಬೆಳವಣಿಗೆಯ ಅಂಶವನ್ನು ಹೊಂದಿರುತ್ತದೆ. ಇದು ಹಾನಿಗೊಂಡ ಭಾಗದಲ್ಲಿ ಶೀಘ್ರ ಚೇತರಿಕೆಗೆ ಸಹಾಯ ಮಾಡುತ್ತದೆ.
ಆದಾಗ್ಯೂ ಈ ಚಿಕಿತ್ಸೆ ಇನ್ನೂ ಸಂಶೋಧನಾ ಹಂತದಲ್ಲಿದೆ. ಡಿಸ್ಕ್ ಡಿಜೆನರೇಶನ್‌ನ ಆರಂಭಿಕ ಹಂತಗಳಲ್ಲಿ ನೀಡಿದರೆ ಕಾರ್ಯನಿರ್ವಹಿಸುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಅಲ್ಲದೇ ಇದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಕೆಲವು ಅಧ್ಯಯನಗಳು ಹೇಳಿವೆ. ಇದರಿಂದ ತಕ್ಷಣಕ್ಕೆ ನೋವಿನಿಂದ ಪರಿಹಾರ ಕಾಣಬೇಕೆಂದರೆ, ಈ ಚಿಕಿತ್ಸೆಗಳನ್ನು ಪಡೆಯುವುದು ಉತ್ತಮ. ಸಂಶೋಧನೆಯ ಭಾಗವಾಗಿ ಪಿಆರ್‌ಪಿ ಚಿಕಿತ್ಸೆ ತೆಗೆದುಕೊಂಡರೆ ಇದನ್ನು ಪ್ರಯತ್ನಿಸಬಹುದು. ಇದು ಕೆಲಸ ಮಾಡುತ್ತದೆಯೇ? ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಇದರ ಸಾಮರ್ಥ್ಯವು ದೊಡ್ಡ ಪ್ರಮಾಣದ ಪ್ರಯೋಗಗಳಲ್ಲಿ ಮಾತ್ರ ಬಹಿರಂಗಗೊಳ್ಳುತ್ತದೆ. ಆ ಬಳಿಕವಷ್ಟೇ ಮಾರ್ಗಸೂಚಿ ರೂಪಿಸಿ ಚಿಕಿತ್ಸೆ ಅಗತ್ಯ ಹೊಂದಿರುವವರಿಗೆ ನೀಡಲು ಸಾಧ್ಯ ಎನ್ನುತ್ತಾರೆ ಹೈದರಾಬಾದ್ನ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಮೂಳೆರೋಗ ತಜ್ಞ ಡಾ.ಕೊಲ್ಲ ಸಾಕೆತ್.
ಇದನ್ನೂ ಓದಿ: ದೈಹಿಕ - ಮಾನಸಿಕ ಯೋಗಕ್ಷೇಮವು ಭಾರತೀಯರ ಪ್ರಮುಖ ಆದ್ಯತೆ: ವರದಿ