ನವದೆಹಲಿ: ಆರೋಗ್ಯಯುತ ಜೀವನಕ್ಕೆ ದೈಹಿಕ ಚಟುವಟಿಕೆ ಅತ್ಯಗತ್ಯ. ಆದರೆ, ಅತಿಯಾದ ದೈಹಿಕ ಚಟುವಟಿಕೆಯೂ ಕೂಡ ಪ್ರಾಣಕ್ಕೆ ಮುಳುವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 30ರಿಂದ 40ರ ನಡುವಿನ ವಯೋಮಾನದವರು ಜಿಮ್ ಅಥವಾ ಇನ್ನಿತರ ತರಹದ ಭಾರೀ ದೈಹಿಕ ಚಟುವಟಿಕೆ ಆರಂಭಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ.
ಭಾರತದಲ್ಲಿ ಕಳೆದೊಂದು ದಿನದಲ್ಲಿ ದಿಢೀರ್ ಹೃದಯಾಘಾತದಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್ 19 ಸಾಂಕ್ರಾಮಿಕದ ಬಳಿಕ ಈ ರೀತಿ ಪ್ರಕರಣ ಹೆಚ್ಚಳ ಹಿನ್ನಲೆ ಈ ಕುರಿತು ಆರೋಗ್ಯ ತಜ್ಞರು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಎಲ್ಲೆಲ್ಲಿ ಸಾವು?: ವಾರಣಾಸಿಯಲ್ಲಿ 32 ವರ್ಷದ ವ್ಯಕ್ತಿ ಜಿಮ್ನಲ್ಲಿ ಸಾವನ್ನಪ್ಪಿದರೆ, 13 ವರ್ಷದ ಬಾಲಕ ರಾಜ್ಕೋಟ್ನಲ್ಲಿ, ಹನುಮಾನ್ ಮಂದಿ ಚೌಕ್ ಪ್ರದೇಶದಲ್ಲಿ 40 ವರ್ಷದ ವ್ಯಕ್ತಿ ಹಾಗು ಗುಜರಾತ್ನಲ್ಲಿ 34 ವರ್ಷದ ವ್ಯಕ್ತಿ ಬೈಕ್ ಓಡಿಸುವಾಗ ಹೃದಯಾಘಾತದಿಂದ ಅಸುನೀಗಿದ್ದಾರೆ.
ಈ ಸಲಹೆಗಳನ್ನು ಪಾಲಿಸಿ: ಜಿಮ್ ಅಥವಾ ವ್ಯಾಯಾಮ ಶುರು ಮಾಡಿದಾಗ ನಿಧಾನವಾಗಿಯೇ ಆರಂಭಿಸಬೇಕು. ಆರಂಭದಲ್ಲಿ ಕಡಿಮೆ ಅವಧಿಯ ದೈಹಿಕ ಚಟುವಟಿಕೆ ನಡೆಸುವುದು ಉತ್ತಮ. ಕಡಿಮೆಯಿಂದ ಹೆಚ್ಚಿನ ಪ್ರಮಾಣದ ವ್ಯಾಯಾಮವಮ್ಮ ಕ್ರಮವಾಗಿ ಹಂತಹಂತವಾಗಿ ಹೆಚ್ಚಿಸಬೇಕು ಎನ್ನುತ್ತಾರೆ ಪಿಎಸ್ಆರ್ಐ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಮನೀಶ್ ಅಗರ್ವಾಲ್.
ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ರೋಗದ ಕೌಟುಂಬಿಕ ಇತಿಹಾಸ ಹೊಂದಿರುವವರು ಹೃದಯಘಾತದ ಹೆಚ್ಚಿನ ಅಪಾಯ ಹೊಂದುವ ಸಾಧ್ಯತೆ ಇದೆ. ಇದರ ಜೊತೆಗೆ ತಂಬಾಕು, ಧೂಮಪಾನ, ಅನಾರೋಗ್ಯಕರ ಜೀವನಶೈಲಿಯೊಂದಿಗೆ ಜಂಕ್ ಫುಡ್ ಸೇವನೆ, ಅನಾರೋಗ್ಯಕರ ಎಣ್ಣೆ ಮತ್ತು ಶೂನ್ಯ ವ್ಯಾಯಾಮ ಕೂಡ ಕೆಲವು ದೇಶದಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಅಂಶ.
ಕಳೆದ ವರ್ಷ ಗುಜರಾತ್ನಲ್ಲಿ ನವರಾತ್ರಿ ಗರ್ಭ ಕಾರ್ಯಕ್ರಮದಲ್ಲಿ ದಿಢೀರ್ ಹೃದಯಾಘಾತಕ್ಕೊಳಗಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಇದರಲ್ಲಿ 17 ವರ್ಷದ ಬಾಲಕ ಕೂಡ ಸಾವನ್ನಪ್ಪಿದ್ದ.(ಐಎಎನ್ಎಸ್)
ಇದನ್ನೂ ಓದಿ: ಕೋವಾಕ್ಸಿನ್ ಸುರಕ್ಷತೆಯ ದಾಖಲೆ ಹೊಂದಿದೆ: ಭಾರತ್ ಬಯೋಟೆಕ್ ಸ್ಪಷ್ಟನೆ