ETV Bharat / health

ಗರ್ಭಕಂಠ ಕ್ಯಾನ್ಸರ್​ ತಡೆಗೆ ಲಸಿಕೆ; ಸರ್ಕಾರದ ಕ್ರಮಕ್ಕೆ ವೈದ್ಯರಿಂದ ಮೆಚ್ಚುಗೆ - ಗರ್ಭಕಂಠ ಕ್ಯಾನ್ಸರ್​ ತಡೆಗೆ ಲಸಿಕೆ

ಭಾರತವು ಶೇ 21ರಷ್ಟು ಗರ್ಭಕಂಠ ಕ್ಯಾನ್ಸರ್​ ಹೊರೆ ಹೊಂದಿದ್ದು, ಈ ನಿಟ್ಟಿನಲ್ಲಿ ಲಸಿಕೆ ದೊಡ್ಡ ಹೆಜ್ಜೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

Doctor welcomes government for promoting cervical cancer vaccination

author img

By ETV Bharat Karnataka Team

Published : Feb 2, 2024, 2:25 PM IST

ನವದೆಹಲಿ: ಗರ್ಭಕಂಠದ ಕ್ಯಾನ್ಸರ್​​ ತಡೆಯುವ ನಿಟ್ಟಿನಲ್ಲಿ 9ರಿಂದ 14 ವರ್ಷದ ಹೆಣ್ಣು ಮಕ್ಕಳಿಕೆ ಲಸಿಕೆ ನೀಡುವ ಸರ್ಕಾರದ ಕ್ರಮವನ್ನು ವೈದ್ಯರು ಶ್ಲಾಘಿಸಿದ್ದಾರೆ. ಮಧ್ಯಂತರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ದೇಶದಲ್ಲಿರುವ ಗರ್ಭಕಂಠ ಕ್ಯಾನ್ಸರ್​ ತಡೆಯುವ ನಿಟ್ಟಿನಲ್ಲಿ ಲಸಿಕೆ ನೀಡುವ ಕುರಿತು ಮಾತನಾಡಿ, ಎಲ್ಲಾ ಅರ್ಹ ವರ್ಗದ ಬಾಲಕಿಯರಿಗೆ ಈ ಲಸಿಕೆ ನೀಡುವುದನ್ನು ಪ್ರೋತ್ಸಾಹಿಸುವುದಾಗಿ ತಿಳಿಸಿದ್ದರು. ಕೇಂದ್ರದ ಈ ಕ್ರಮ ಉತ್ತಮವಾಗಿದ್ದು, ಭಾರತದಲ್ಲಿ ಇತ್ತೀಚಿನ ದಿನದಲ್ಲಿ ಮಹಿಳೆಯರನ್ನು ಕಾಡುತ್ತಿರುವ ಗರ್ಭಕಂಠ ಕ್ಯಾನ್ಸರ್​ ತಡೆಯುವ ಪ್ರಯತ್ನ ನಡೆಯಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗರ್ಭಕಂಠದ ಕ್ಯಾನ್ಸರ್​ ತಡೆಗಟ್ಟಬಹುದಾದ ಕ್ಯಾನ್ಸರ್​ ಆಗಿದ್ದು, ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್​ನಲ್ಲಿ ಎರಡನೇ ಸ್ಥಾನ ಹೊಂದಿದೆ. ಈ ಕ್ಯಾನ್ಸರ್​ನಿಂದ ಜೀವ ಉಳಿಸುವಲ್ಲಿ ಲಸಿಕೆಗಳು ಪ್ರಮುಖ ಪಾತ್ರವಹಿಸಲಿದೆ.

ಪ್ರಮುಖ ಹೆಜ್ಜೆ: ಈ ಕುರಿತು ಮಾತನಾಡಿರುವ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯ ಕನ್ಸಲ್ಟೆಂಟ್​​, ಡಾ.ಅನುರಾಧ ವಿನೋದ್​​, ಇದೊಂದು ಉತ್ತಮ ಕರೆ. ಭಾರತದಲ್ಲಿ ಹೆಚ್ಚುತ್ತಿರುವ ಗರ್ಭಕಂಠ ಕ್ಯಾನ್ಸರ್​ ತಡೆಯಲು ಇದು ಅತ್ಯಗತ್ಯ ಹೆಜ್ಜೆ ಎಂದರು.

ಗರ್ಭಕಂಠ ಕ್ಯಾನ್ಸರ್​​ ತಡೆಯುವಲ್ಲಿ ಲಸಿಕೆಗಳು ಹೆಚ್ಚು ಸಾಮರ್ಥ್ಯದಾಯಕವಾಗಿದೆ ಎಂದು ಸಾಬೀತಾಗಿದೆ. ಲಸಿಕೆ ಪಡೆಯದವರಿಗಿಂತ ಲಸಿಕೆ ಪಡೆದವರಲ್ಲಿ ಇದರ ಪರಿಣಾಮಗಳು ಹೇಗಿರಲಿದೆ ಎಂಬುದು ಸಾಬೀತಾಗಿದೆ. ಎಚ್​ಪಿವಿ ಲಸಿಕೆಯ ಶೇ 88ರಷ್ಟು ಯಶಸ್ಸಿನ ದರ ಹೊಂದಿದೆ. ಈ ಲಸಿಕೆಯನ್ನು ಎರಡು ಬಾರಿ ನೀಡಲಾಗುವುದು. ಮೊದಲ ಡೋಸ್​ 15 ವರ್ಷಕ್ಕಿಂತ ಮೊದಲು ಎರಡು ಬಾರಿ ಬಳಿಕ 26 ವರ್ಷದೊಳಗೆ 3 ಡೋಸ್​​ ನೀಡಲಾಗುವುದು. ಹದಿವಯಸ್ಸಿನ ಗುಂಪಿನಲ್ಲಿ ಎಚ್​ಪಿವಿ ಸೋಂಕಿಗೆ ತೆರೆದುಕೊಳ್ಳುವ ಮುನ್ನವೇ ಈ ಲಸಿಕೆ ನೀಡುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

ಹದಿಹರೆಯದ ವಯಸ್ಸಿನ ಅಂದರೆ 9ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಈ ಲಸಿಕೆ ಅಗತ್ಯ. ಇದು ರೋಗ ತಡೆಗಟ್ಟುವ ಪ್ರಾಥಮಿಕ ಕ್ರಮವಾಗಿದೆ ಎಂದಿದ್ದಾರೆ ಗುರುಗ್ರಾಮದ ಫೋರ್ಟಿಸ್​ ಆಸ್ಪತ್ರೆಯ ಗೈನೊ ಅಂಕೋಲಾಜಿ ವಿಭಾಗದ ನಿರ್ದೇಶಕರಾದ ಡಾ.ರಾಮಾ ಜೋಶಿ.

ಕ್ಯಾನ್ಸರ್​ ಹೊರೆ: ಭಾರತದ 5ರಲ್ಲಿ 1 ಅಥವಾ ಶೇ 21ರಷ್ಟ ಗರ್ಭಕಂಠ ಕ್ಯಾನ್ಸರ್​ ಹೊರೆಯನ್ನು ಹೊಂದಿದೆ. ಜಾಗತಿಕ ಗರ್ಭಕಂಠ ಕ್ಯಾನ್ಸರ್​ ಪ್ರಮಾಣದಲ್ಲಿ ಭಾರದ ಪ್ರಮಾಣ ಶೇ 18ರಷ್ಟಿದೆ. ಅಲ್ಲದೇ, ಈ ಕ್ಯಾನ್ಸರ್​ನಿಂದಾಗಿ ಪ್ರತಿ ನಾಲ್ಕರಲ್ಲಿ ಒಬ್ಬರು ಅಥವಾ ಶೇ 23ರಷ್ಟು ಸಾವಿನ ದರ ಹೊಂದಿದೆ ಎಂದು ದಿ ಲ್ಯಾನ್ಸೆಟ್​ ಗ್ಲೋಬಲ್​ ಹೆಲ್ತ್​​ ತಿಳಿಸಲಾಗಿದೆ.

27ರಿಂದ 45 ವರ್ಷದ ವಯೋಮಾನದ ಮಹಿಳೆಯರು ಈ ಎಚ್​ಪಿವಿ ಲಸಿಕೆಯನ್ನು ಪಡೆಯಬಹುದಾಗಿದೆ. ಈ ವಯಸ್ಸಿನಲ್ಲಿ ಪಡೆಯುವ ಲಸಿಕೆ ಕಡಿಮೆ ಪರಿಣಾಮಕಾರಿಯಾಗಿದ್ದು, ಸ್ತ್ರೀರೋಗ ತಜ್ಞರ ಸಲಹೆ ಮೇರೆಗೆ ಚಿಕಿತ್ಸೆಗೆ ಶಿಫಾರಸು ಪಡೆಯಬಹುದು ಎಂದು ಇಂಡಿಯನ್​ ಅಕಾಡೆಮಿ ಆಫ್​​​ ಪಿಡಿಯಾಟ್ರಿಕ್ಸ್​​ ಸಲಹೆ ನೀಡಿದೆ.

ಪ್ರಸ್ತುತ ಅನೇಕ ರೀತಿಯ ಎಚ್​ಪಿವಿ ಲಸಿಕೆಗಳು ಸೋಂಕಿನ ವಿರುದ್ಧ ರಕ್ಷಣೆಗೆ ಲಭ್ಯವಿದೆ. ಭಾರತದ ಸ್ವದೇಶಿ ಲಸಿಕೆಯಾದ ಸೆರಾಂ ಇನ್ಸುಟಿಟ್ಯೂಟ್​ ಉತ್ಪಾದಿತ ಲಸಿಕೆ ಕೂಡ ಲಭ್ಯವಿದ್ದು, ಇದು ಡಿಸಿಜಿಐ ಅನುಮೋದನೆ ಪಡೆದಿದೆ. (ಐಎಎನ್​ಎಸ್​)

ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.