ETV Bharat / health

ನಿಮ್ಮ ಆಹಾರದಲ್ಲಿ ಬ್ಲ್ಯಾಕ್​ ಸಾಲ್ಟ್ ಉಪಯೋಗಿಸುತ್ತೀರಾ?: ಅದರ ಪ್ರಯೋಜನಗಳೇನೆಂಬುದು ನಿಮಗೆ ಗೊತ್ತೇ? - WHAT IS THE BLACK SALT BENEFITS

author img

By ETV Bharat Karnataka Team

Published : Jun 14, 2024, 7:15 AM IST

ಬ್ಲ್ಯಾಕ್​ ಸಾಲ್ಟ್ ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಕೊಂಚ ಮಾಹಿತಿ ನಿಮಗಾಗಿ.

Black Salt Benefits
ಬ್ಲ್ಯಾಕ್​ ಸಾಲ್ಟ್​ ಪ್ರಯೋಜನ (ETV Bharat)

'ಉಪ್ಪು' ಎಂದಾಕ್ಷಣ ನಮ್ಮಲ್ಲಿ ಬಹತೇಕರು ವೈಟ್ ಸಾಲ್ಟ್​​​ ಅನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ. ನಿಮಗೆ ಬ್ಲ್ಯಾಕ್​ ಸಾಲ್ಟ್​ ಗೊತ್ತೇ?, ನಿಮ್ಮ ಆಹಾರದಲ್ಲಿ ಕಪ್ಪು ಉಪ್ಪನ್ನು ಬಳಸುತ್ತೀರಾ?. ಈ ಕಪ್ಪು ಉಪ್ಪನ್ನು ಆಹಾರದಲ್ಲಿ ಸೇರಿಸಿದರೆ ಅಥವಾ ಪ್ರತಿದಿನ ಒಂದು ಲೋಟ ನೀರಿನಲ್ಲಿ ಚಿಟಿಕೆ ಕಪ್ಪು ಉಪ್ಪನ್ನು ಸೇರಿಸಿ ಕುಡಿದರೆ ನಿಮ್ಮ ಆರೋಗ್ಯ ವಿಚಾರದಲ್ಲಿ ಅತ್ಯುತ್ತಮ ಫಲಿತಾಂಶ ಸಿಗಲಿದೆ ಎನ್ನುತ್ತಾರೆ ತಜ್ಞರು.

ಪೋಷಕಾಂಶಗಳ ಆಗರ: ತಜ್ಞರ ಪ್ರಕಾರ, ಕಪ್ಪು ಉಪ್ಪು ಮೊದಲಿಗೆ ಕಪ್ಪು ಬಣ್ಣದ್ದಾಗಿರುತ್ತದೆ, ಒಣಗಿದಾಗ ಅಥವಾ ನಂತರ ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇದು ಬಿಳಿ ಉಪ್ಪಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಕಬ್ಬಿಣ, ಪೊಟ್ಯಾಶಿಯಂ, ಮೆಗ್ನೀಶಿಯಂ, ಸೋಡಿಯಂ ಕ್ಲೋರೈಡ್ ಸೇರಿದಂತೆ ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ದೇಹವನ್ನು ತಂಪಾಗಿಸುತ್ತದೆ: ಬ್ಲ್ಯಾಕ್​ ಸಾಲ್ಟ್​​ ದೇಹವನ್ನು ತಂಪಾಗಿಡಲು ಸಹಾಯ ಮಾಡುವಂತಹ ಅನೇಕ ಗುಣಗಳನ್ನು ಹೊಂದಿದೆ ಎನ್ನುತ್ತಾರೆ ತಜ್ಞರು. ಈ ಉಪ್ಪನ್ನು ಲೆಮನ್​ ಜ್ಯೂಸ್, ಆಮ್ ಪನ್ನಾ ಸೇರಿ ಹಲವು ಬೇಸಿಗೆ ಪಾನೀಯಗಳಲ್ಲಿಯೂ ಬಳಸುತ್ತಾರೆ. ಹಾಗಾಗಿ ಇದನ್ನು 'ಕೂಲಿಂಗ್ ಸಾಲ್ಟ್' ಅಂತಲೂ ಕರೆಯುತ್ತಾರೆ.

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ: ಬ್ಲ್ಯಾಕ್​ ಸಾಲ್ಟ್ ಹೊಟ್ಟೆಯಿಂದ ಕಲ್ಮಶಗಳನ್ನು ತೆಗೆದುಹಾಕಲು ಬಹಳ ಸಹಾಯಕವಾಗಿದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರ ನೀಡುವುದರ ಜತೆಗೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮಗೆ ಫ್ರಿಡ್ಜ್‌ ಸರಿಯಾದ ಬಳಕೆ ಗೊತ್ತಾ? ಗೋಡೆ ಮತ್ತು ಫ್ರಿಡ್ಜ್‌ ನಡುವೆ ಎಷ್ಟು ಅಂತರ ಇರಬೇಕು? ಇಲ್ಲಿದೆ ಸೇಫ್ಟಿ ಟಿಪ್ಸ್‌ - Fridge Safety Tips

2018ರಲ್ಲಿ 'ಜರ್ನಲ್ ಆಫ್ ಆಲ್ಟರ್ನೇಟಿವ್ ಅಂಡ್​ ಕಾಂಪ್ಲಿಮೆಂಟರಿ ಮೆಡಿಸಿನ್'ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬ್ಲ್ಯಾಕ್​ ಸಾಲ್ಟ್​ ಬಳಸುವುದರಿಂದ ಮಲಬದ್ಧತೆ ಸೇರಿ ಮೊದಲಾದ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಸಂಶೋಧನೆಯಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಶ್ರೀನಿವಾಸನ್ ರಾವ್ ಭಾಗಿಯಾಗಿದ್ದರು. ಕಪ್ಪು ಉಪ್ಪಿನಲ್ಲಿರುವ ಪೋಷಕಾಂಶಗಳು ಹೊಟ್ಟೆಯಿಂದ ಕಲ್ಮಶಗಳನ್ನು ತೆಗೆದುಹಾಕಲು ಮತ್ತು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಾಕಿಂಗ್​​​ನಿಂದ ಖಂಡಿತಾ ತೂಕ ಕಳೆದುಕೊಳ್ಳಬಹುದು; ಆದರೆ, ದಿನಕ್ಕೆ ಎಷ್ಟು ದೂರ ನಡೆದರೆ ಪ್ರಯೋಜನ ಗೊತ್ತಾ? - calories burn in daily walk

ಕಪ್ಪು ಉಪ್ಪು ಬೆರೆಸಿದ ನೀರನ್ನು ಕುಡಿಯುವುದಿಂದ ದೇಹದಲ್ಲಿನ ಚಯಾಪಚಯ ಪ್ರಕ್ರಿಯೆಯಲ್ಲಿ ಬೆಳವಣಿಗೆ ಕಂಡು ಬರುತ್ತದೆ. ಅಲ್ಲದೇ, ತಜ್ಞರ ಪ್ರಕಾರ ಕಪ್ಪು ಉಪ್ಪು ನೀರು ಯಕೃತ್ತಿನ ಕೆಲಸಕ್ಕೂ ಸಹಕಾರಿ. ತ್ಯಾಜ್ಯವನ್ನು ಹೊರಹಾಕಿ ಆರೋಗ್ಯವನ್ನು ರಕ್ಷಿಸುತ್ತದೆ. ಈ ನೀರು ರಕ್ತದಲ್ಲಿನ ಕಲ್ಮಶಗಳನ್ನು ಸಹ ಹೊರಹಾಕಲು ಸಹಾಯ ಮಾಡುತ್ತದೆ. ರಕ್ತ ಸೋಂಕನ್ನೂ ತಡೆಯುತ್ತದೆ.

ವಿಶೇಷ ಸೂಚನೆ: ಇಲ್ಲಿ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೃತ್ತಿಪರರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.