ETV Bharat / health

ಔಷಧಗಳ ಅಡ್ಡ ಪರಿಣಾಮ ವೈದ್ಯರು ತಿಳಿಸಬೇಕೆಂದು ಅರ್ಜಿ​; ಪಿಐಎಲ್​ ವಜಾ ಮಾಡಿದ ದೆಹಲಿ ಹೈಕೋರ್ಟ್​​​ - PIL - PIL

ವೈದ್ಯರು ತಾವು ಶಿಫಾರಸು ಮಾಡಿದ ಔಷಧಿಗಳ ಅಡ್ಡಪರಿಣಾಮಗಳು ಮತ್ತು ಸಂಭವನೀಯ ಅಪಾಯಗಳನ್ನು ತಿಳಿಸುವಂತೆ ನಿರ್ದೇಶಿಸಬೇಕು ಎಂದು ಪಿಐಎಲ್​ ಸಲ್ಲಿಕೆ ಮಾಡಲಾಗಿತ್ತು.

Delhi HC dismisses PIL seeking directions to medical professionals to reveal side effects of medicines
ಪಿಐಎಲ್​ ವಜಾ ಮಾಡಿದ ದೆಹಲಿ ಹೈಕೋರ್ಟ್​​​ (File photo)
author img

By ETV Bharat Karnataka Team

Published : May 21, 2024, 10:44 AM IST

ನವದೆಹಲಿ: ವೈದ್ಯರು ರೋಗಿಗಳಿಗೆ ಔಷಧಗಳನ್ನು ಸೂಚಿಸುವಾಗ, ಈ ಔಷಧಗಳಿಂದ ಆಗುವ ಅಡ್ಡ ಪರಿಣಾಮಗಳ ಕುರಿತು ವಿವರಣೆ ನೀಡುವ ಮತ್ತೊಂದು ಸ್ಲಿಪ್​ ಅನ್ನು ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್​ ವಜಾ ಮಾಡಿದೆ.

ಅರ್ಜಿ ಕುರಿತು ಆದೇಶ ನೀಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ನೇತೃತ್ವದ ಪೀಠ, ಔಷಧ ತಯಾರಕರು ಸುಂಕ ವಿಧಿಸುವ ಆಯ್ಕೆಯನ್ನು ಶಾಸಕಾಂಗ ಹೊಂದಿದೆ. ಈಗಾಗಲೇ ಈ ಸಂಬಂಧ ಶಾಸಕಾಂಗ ಕೆಲವು ರಕ್ಷಣಾ ಕ್ರಮವನ್ನು ಹೊಂದಿದೆ. ಈ ಹಿನ್ನೆಲೆ ಈ ಕುರಿತು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್​ ಅರ್ಜಿ ವಜಾಗೊಳಿಸಿದೆ.

ರೋಗಿಯು ಔಷಧಗಳ ತಿಳುವಳಿಕೆ ಪಡೆಯುವ ಆಯ್ಕೆಯ ಹಕ್ಕನ್ನು ಹೊಂದಿದ್ದಾನೆ. ಈ ಹಿನ್ನೆಲೆ ವೈದ್ಯರು ತಾವು ಶಿಫಾರಸು ಮಾಡಿದ ಔಷಧಿಗಳ ಅಡ್ಡಪರಿಣಾಮಗಳು ಮತ್ತು ಸಂಭವನೀಯ ಅಪಾಯಗಳನ್ನು ಕಡ್ಡಾಯವಾಗಿ ವಿವರಿಸಬೇಕು. ಈ ಸಂಬಂಧ ಮತ್ತೊಂದು ಸ್ಲಿಪ್​ ಅನ್ನು ನೀಡುವಂತೆ ವೈದ್ಯರಿಗೆ ನ್ಯಾಯಾಲಯ ನಿರ್ದೇಶನ ನೀಡಬೇಕು.

ಇದರಿಂದ ವೈದ್ಯರು ಶಿಫಾರಸು ಮಾಡಿದ ಔಷಧಿಯ ಅಡ್ಡಪರಿಣಾಮಗಳ ಬಗ್ಗೆ ಅರಿವು ಪಡೆದ ಬಳಿಕ, ರೋಗಿಯು ಅದನ್ನು ಸೇವಿಸಬೇಕೇ ಅಥವಾ ಬೇಡವೇ ಎಂಬ ತಿಳುವಳಿಕೆಯುಕ್ತ ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ಪಿಐಎಲ್​ನಲ್ಲಿ ಮನವಿ ಮಾಡಲಾಗಿದೆ.

ಅರ್ಜಿ ವಿಚಾರಣೆ ನಡೆಸಿದ ಪೀಠ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1945 ರ ಪ್ರಕಾರ, ಔಷಧಿ ತಯಾರಕರು ಅಥವಾ ಅವರ ಏಜೆಂಟ್​​ಗಳು ಔಷಧಿಗಳ ಅಡ್ಡ ಪರಿಣಾಮಗಳ ಕುರಿತ ವಿವರಗಳನ್ನು ಪ್ಯಾಕೇಜ್ ಮಾಹಿತಿಯಲ್ಲಿ ಒದಗಿಸುತ್ತಾರೆ. ಹೆಚ್ಚುವರಿಯಾಗಿ, ಫಾರ್ಮಸಿ ಪ್ರಾಕ್ಟೀಸ್ ರೆಗ್ಯುಲೇಷನ್ಸ್, 2015 ರ ಪ್ರಕಾರ ನೋಂದಾಯಿತ ಔಷಧಿಕಾರರು ಔಷಧಿಗಳ ಸಂಭವನೀಯ ಅಡ್ಡ ಪರಿಣಾಮಗಳ ಬಗ್ಗೆ ರೋಗಿಗಳಿಗೆ ತಿಳಿಸುತ್ತಾರೆ.

ತಯಾರಕರು ಮತ್ತು ಔಷಧಿಕಾರರ ಮೇಲೆ ರೋಗಿಗಳಿಗೆ ಔಷಧದ ಅಡ್ಡಪರಿಣಾಮಗಳ ಬಗ್ಗೆ ತಿಳಿಸುವ ಕರ್ತವ್ಯವನ್ನು ಶಾಸಕಾಂಗ ಹೊಂದಿರುವ ಹಿನ್ನೆಲೆ ನ್ಯಾಯಾಲಯವು ಈ ಸಂಬಂಧ ಹೆಚ್ಚಿನ ನಿರ್ದೇಶನಗಳನ್ನು ನೀಡುವ ಅಗತ್ಯವಿಲ್ಲ. ಹಾಗೆ ಮಾಡುವುದು ತನ್ನ ವ್ಯಾಪ್ತಿಯಲ್ಲಿಲ್ಲ. ಇದು ಶಾಸಕಾಂಗದ ಅತಿಕ್ರಮವಾಗುತ್ತದೆ. ಈ ಹಿನ್ನೆಲೆ ಈ ಅರ್ಜಿಯಲ್ಲಿ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಎಚ್​ಐವಿ ಸೋಂಕಿತ ತಾಯಂದಿರು ಮಗುವಿಗೆ ನೀಡಬಹುದು ಸ್ತನ್ಯಪಾನ; ಅಮೆರಿಕ ಮಕ್ಕಳ ತಜ್ಞರ ಗುಂಪಿನ ಶಿಫಾರಸು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.