ETV Bharat / health

ತುಪ್ಪದಲ್ಲಿ ನೆನೆಸಿಟ್ಟ ಖರ್ಜೂರ ತಿಂದರೆ, ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಎಂಬುದು ನಿಮಗೆ ಗೊತ್ತಾ? - HEALTH TIPS - HEALTH TIPS

ಖರ್ಜೂರ ತಿನ್ನುವುದು ಆರೋಗ್ಯ ಉತ್ತಮ ಎಂಬುದು ತಿಳಿದಿದೆ. ಅದರ ಪ್ರಯೋಜನಗಳನ್ನು ದುಪ್ಪಟ್ಟು ಮಾಡಲು ಈ ವಿಧಾನವನ್ನು ಅನುಸರಿಸಿ.

ತುಪ್ಪದಲ್ಲಿ ನೆನೆಸಿಟ್ಟ ಖರ್ಜೂರ
ತುಪ್ಪದಲ್ಲಿ ನೆನೆಸಿಟ್ಟ ಖರ್ಜೂರ (ETV Bharat)
author img

By ETV Bharat Karnataka Team

Published : May 30, 2024, 9:11 PM IST

ಆಯುರ್ವೇದದ ಪ್ರಕಾರ ಖರ್ಜೂರ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಒಳ್ಳೆಯದು. ಅದರಲ್ಲಿ ಕಾರ್ಬೋಹೈಡ್ರೇಟ್‌, ಪ್ರೋಟೀನ್‌ ಮತ್ತು ಫೈಬರ್ ಯಥೇಚ್ಛವಾಗಿ ದೊರೆಯುತ್ತದೆ. ಇದರ ಸಿಹಿಯೂ ಎಲ್ಲರಿಗೂ ಅಚ್ಚುಮೆಚ್ಚು. ಇದನ್ನು ಹಾಗೆಯೇ ತಿನ್ನುವ ಬದಲು ತುಪ್ಪದಲ್ಲಿ ನೆನೆಸಿ ತಿಂದರೆ ಡಬಲ್​ ಉಪಯೋಗ ಎಂಬುದು ನಿಮಗೆ ಗೊತ್ತಾ?.

ಮಾನವನ ದೇಹಕ್ಕೆ ಬೇಕಾದ ಉತ್ತಮ ಅಂಶಗಳು ಖರ್ಜೂರದಲ್ಲಿ ಇದ್ದರೂ, ಅದನ್ನು ತಿನ್ನುವ ರೀತಿಯಿಂದಲೂ ಹೆಚ್ಚುವರಿ ಲಾಭವನ್ನು ಪಡೆಯಬಹುದು. ವಿಶೇಷವಾಗಿ ಅದನ್ನು ತುಪ್ಪದಲ್ಲಿ ನೆನೆಸಿ ತಿಂದರೆ, ಆಹಾ ಅದರ ಮಾತೇ ಬೇರೆ. ಇದರಿಂದ ಕಫ, ವಾತ, ಪಿತ್ತ ಸಮಸ್ಯೆಗಳೂ ದೂರವಾಗುತ್ತವೆ. ತುಪ್ಪ ಮತ್ತು ಖರ್ಜೂರದ ಮಿಶ್ರಣದಿಂದ ಒತ್ತಡ, ಆತಂಕ ಮತ್ತು ಹೃದಯದ ಸಮಸ್ಯೆಯೂ ಕಡಿಮೆಯಾಗುತ್ತದೆ. ಈ ಸೂಪರ್ ಫುಡ್​ಮೂಳೆಗಳು ಮತ್ತು ಹೃದಯದ ಆರೋಗ್ಯವನ್ನು ಬೂಸ್ಟ್​ ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಎನರ್ಜಿ ಬೂಸ್ಟರ್​: ಖರ್ಜೂರವು ನೈಸರ್ಗಿಕ ಸಕ್ಕರೆ ಅಂಶವನ್ನು ಹೊಂದಿದೆ. ತುಪ್ಪವು ಆರೋಗ್ಯಕರ ಕೊಬ್ಬಿನ ಕಣಜ. ಈ ಎರಡನ್ನೂ ಒಟ್ಟಿಗೆ ತಿಂದರೆ ದೇಹಕ್ಕೆ ಶಕ್ತಿ ಹೆಚ್ಚುತ್ತದೆ. ಖರ್ಜೂರದಲ್ಲಿರುವ ನೈಸರ್ಗಿಕ ಸಕ್ಕರೆಗಳಾದ ಗ್ಲೂಕೋಸ್, ಫ್ರಕ್ಟೋಸ್, ಸುಕ್ರೋಸ್ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಹೀಗಾಗಿಯೇ ಅನೇಕರು ಉಪವಾಸದ ವೇಳೆ ಇದನ್ನು ತಿನ್ನುತ್ತಾರೆ. ಈ ಸಕ್ಕರೆ ಅಂಶ ಸುಲಭವಾಗಿ ಜೀರ್ಣವಾಗುತ್ತವೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸುವ ಶಕ್ತಿಯನ್ನೂ ಹೊಂದಿದೆ. ಈ ಹಣ್ಣಿನಲ್ಲಿ ಇರುವ ನಾರಿನಂಶವೂ ಪ್ರಯೋಜನಕಾರಿ.

ಓದಿ: ಖರ್ಜೂರ ಪ್ರೋಟಿನ್​ಗಳ ಆಗರ.. ತಿಂದ್ರೆ ಆರೋಗ್ಯಕ್ಕೆ ಹಲವು ಲಾಭ..

ಪಚನಕ್ರಿಯೆಗೆ ಒಳ್ಳೆಯದು: ತುಪ್ಪದಲ್ಲಿರುವ ಕಿಣ್ವಗಳು ಪಚನಕ್ರಿಯೆಗೆ ಸಹಕಾರಿ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದರಲ್ಲಿನ ಕೊಬ್ಬಿನ ಅಂಶವೂ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಹಕಾರಿ. ತುಪ್ಪವು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಒಳಗೊಂಡಂತೆ ಅನೇಕ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ಮಲಬದ್ಧತೆ ತಡೆಯಲು ತುಂಬಾ ಉಪಯುಕ್ತ.

2018 ರಲ್ಲಿ 'ದಿ ಜರ್ನಲ್ ಆಫ್ ನ್ಯೂಟ್ರಿಯನ್ಸ್​'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಖರ್ಜೂರವನ್ನು ಸೇವಿಸಿದವರಲ್ಲಿ ಮಲಬದ್ಧತೆ ಕಡಿಮೆಯಾಗಿದೆ. ಜೀರ್ಣಕ್ರಿಯೆ ಸುಧಾರಿಸಿದೆ ಹೇಳಿದೆ. ಇರಾನ್‌ನ ವಿಶ್ವವಿದ್ಯಾಲಯದ ಖ್ಯಾತ ಪೌಷ್ಟಿಕತಜ್ಞ ಡಾ.ಮೊಹಮ್ಮದ್ ಅಲಿ ಈ ಸಂಶೋಧನೆ ನಡೆಸಿದ್ದರು. ತುಪ್ಪದಲ್ಲಿ ನೆನೆಸಿದ ಖರ್ಜೂರವನ್ನು ತಿನ್ನುವುದು ಜೀರ್ಣಕ್ರಿಯೆಗೆ ಅತ್ಯುತ್ತಮ ಎಂದು ಅವರು ಪತ್ತೆ ಮಾಡಿದ್ದಾರೆ.

ಓದಿ: ರಂಜಾನ್​ ವೇಳೆ ಹೆಚ್ಚಿದ ಖರ್ಜೂರದ ಬೇಡಿಕೆ: ಮಾರುಕಟ್ಟೆಯಲ್ಲಿದೆ ಬಗೆ ಬಗೆಯ ಖರ್ಜೂರ

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ : ತುಪ್ಪದಲ್ಲಿ ನೆನೆಸಿದ ಖರ್ಜೂರವನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಆಯುರ್ವೇದ ತಜ್ಞರ ವಿವರಣೆ. ಇದು ನಮ್ಮ ದೇಹದ ಹಾನಿಗೊಳಗಾದ ಅಂಗಾಂಶಗಳನ್ನು ಸರಿಪಡಿಸುತ್ತದೆ. ಎರಡರಲ್ಲೂ ಆ್ಯಂಟಿ ಆಕ್ಸಿಡೆಂಟ್​ಗಳಿವೆ. ಇದು ಒತ್ತಡ ಕಡಿಮೆಯಾಗಲು ಸಹಾಯ ಮಾಡುತ್ತದೆ. ತುಪ್ಪದಲ್ಲಿ ನೆನೆಸಿದ ಖರ್ಜೂರವು ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಶೇಷವಾಗಿ ಗರ್ಭಿಣಿಯರು ಇದನ್ನು ತಿನ್ನುವುದರಿಂದ ಗರ್ಭಾಶಯವು ಆರೋಗ್ಯಕರ ಮತ್ತು ಮೃದುವಾಗಿರುತ್ತದೆ. ಇದರಿಂದ ಸುಗಮವಾಗಿ ಹೆರಿಗೆಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಆಯುರ್ವೇದ ತಜ್ಞರು ತಿಳಿಸಿದ್ದಾರೆ.

ಇದರ ಬಳಕೆ ಹೇಗೆ?: ಮೊದಲು 10 ರಿಂದ 12 ಬೀಜರಹಿತ ಖರ್ಜೂರಗಳನ್ನು ತೆಗೆದುಕೊಂಡು ಒಣಗಿಸಿ. ನಂತರ ಒಲೆಯ ಮೇಲೆ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ. ಬಿಸಿಯಾದ ನಂತರ, ಖರ್ಜೂರವನ್ನು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ನಂತರ ಅವುಗಳನ್ನು ತಣ್ಣಗಾಗಿಸಿ ಗಾಜಿನ ಬಾಟಲಿಯಲ್ಲಿ ತುಪ್ಪದೊಂದಿಗೆ ಶೇಖರಿಸಿಡಬೇಕು. ಪ್ರತಿದಿನ ಎರಡು ಅಥವಾ ಮೂರು ಎಸಳನ್ನು ತಿನ್ನಿರಿ.

ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಯನ್ನು ಆಧರಿಸಿ ಈ ಮಾಹಿತಿ ಸಿದ್ಧಪಡಿಸಲಾಗಿದೆ. ಇದನ್ನು ಅನುಸರಿಸುವ ಮೊದಲು ನಿಮ್ಮ ಆಪ್ತ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ; Dates: ಖರ್ಜೂರ ಸೇವಿಸಿ, ರೋಗಗಳಿಂದ ದೂರವಿರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.