ETV Bharat / health

ಆಲ್ಕೋಹಾಲ್​ ಮಾತ್ರವಲ್ಲ, ಅತಿಯಾದ ಸಕ್ಕರೆ, ಎಣ್ಣೆ ಪದಾರ್ಥ ಸೇವನೆ ಕೂಡ ಲಿವರ್​ಗೆ ಅಪಾಯ - excess sugar oil are as dangerous

ಅಧಿಕ ಸಕ್ಕರೆ ಮತ್ತು ಎಣ್ಣೆಗಳ ಸೇವನೆಯಿಂದ ಯಕೃತ್​ನ ಅಂಗಾಂಶದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚು ಮಾಡುತ್ತದೆ. ಇದು ಯಕೃತ್​ ಹಾನಿಗೆ ಕಾರಣವಾಗುತ್ತದೆ.

author img

By ETV Bharat Karnataka Team

Published : Apr 18, 2024, 4:29 PM IST

Updated : Apr 18, 2024, 6:00 PM IST

consuming-foods-rich-in-sugar-and-oil-bad-for-liver-health

ನವದೆಹಲಿ: ಯಕೃತ್​ ಹಾನಿಯಾಗಲು ಪ್ರಮುಖ ಕಾರಣ ಮದ್ಯ ಸೇವನೆ. ಆದರೆ, ತಜ್ಞರ ಪ್ರಕಾರ ಅತಿಯಾದ ಸಕ್ಕರೆ ಮತ್ತು ಎಣ್ಣೆ ಪದಾರ್ಥ ಸೇವನೆ ಕೂಡ ಲಿವರ್​ಗೆ ಅಪಾಯವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲದೇ, ಇದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ.

ವಿಶ್ವ ಯಕೃತ್​ ದಿನದ ಹಿನ್ನೆಲೆ ಈ ಕುರಿತು ಮಾತನಾಡಿರುವ ಆರೋಗ್ಯ ತಜ್ಞರು, ದೇಹದ ಸಾಮಾನ್ಯ ಕಾರ್ಯಾಚರಣೆಯಲ್ಲಿ ಆರೋಗ್ಯವಂತ ಲಿವರ್​ನ ಪ್ರಾಮುಖ್ಯತೆ ಅಗತ್ಯ. ಯಕೃತ್​​​ ದೇಹದ ಉಗ್ರಾಣದಂತೆ ಕಾರ್ಯಾಚರಣೆ ಮಾಡುತ್ತದೆ. ಅತಿ ಹೆಚ್ಚಿನ ಕ್ಯಾಲೋರಿ ಸೇವನೆ ಮಾಡಿದಾಗ ಅದು ಯಕೃತ್​ನಲ್ಲಿ ಸೇರಿ, ಫ್ಯಾಟಿ ಲಿವರ್​​ ಸಮಸ್ಯೆಗೆ ಕಾರಣವಾಗುತ್ತದೆ. ಇದು ಮಧುಮೇಹ ಮತ್ತು ಇತರೆ ಚಯಾಪಚಯ ಕ್ರಿಯೆಯಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ.

ಆಲ್ಕೋಹಾಲ್​ ಹೊರತಾದ ಲಿವರ್​​ ಸಮಸ್ಯೆಗಳು ಗಂಭೀರವಾಗಿದ್ದು, ಇವು ಸಕ್ಕರೆ ಮತ್ತು ಕೊಬ್ಬಿನ ಹೆಚ್ಚಿನ ಕ್ಯಾಲೋರಿ ಆಹಾರಗಳ ಸೇವನೆಯಿಂದ ಉಂಟಾಗುತ್ತವೆ. ಇದು ಕೂಡ ಆಲ್ಕೋಹಾಲ್​​​ ಯಕೃತ್​ ಮೇಲೆ ಬೀರುವ ಲಿವರ್​ ಸಿರೋಸಿಸ್​ನಂತಹ ತೀವ್ರ ಸಮಸ್ಯೆ ಉಂಟುಮಾಡುತ್ತದೆ. ಈ ಸಮಸ್ಯೆಗೆ ಪರಿಹಾರ ಎಂದರೆ ಯಕೃತ್​ ಕಸಿ ಎಂದು ಅಪೋಲೋ ಪ್ರೊಹೆಲ್ತ್​​ನ ವೈದ್ಯಕೀಯ ನಿರ್ದೇಶಕರಾದ ಡಾ ಶ್ರೀ ವಿದ್ಯಾ ತಿಳಿಸಿದ್ದಾರೆ.

ಅಧಿಕ ಸಕ್ಕರೆ ಮತ್ತು ಎಣ್ಣೆಗಳ ಸೇವನೆಯಿಂದ ಯಕೃತ್​ನ ಅಂಗಾಂಶದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಾಗುತ್ತದೆ. ಇದರಿಂದ ಯಕೃತ್​ ಉರಿಯೂತವಾಗಿ ಗಾಯಕ್ಕೆ ಕಾರಣವಾಗಿ ಕಡೆಗೆ ಯಕೃತ್​​ ವೈಫಲ್ಯಕ್ಕೆ ಗುರಿಯಾಗಬಹುದು ಎಂದು ಮಹಿಮ್​ನ ಹಿಂದೂಜಾ ಆಸ್ಪತ್ರೆಯ ಗ್ಯಾಸ್ಟ್ರೊಎಟರ್ನೊಲಾಜಿಯ ಜೂನಿಯರ್​ ಕನ್ಸಲ್ಟಂಟ್​ ಡಾ. ಪವನ್​ ದೊಬ್ಲೆ ತಿಳಿಸುತ್ತಾರೆ.

ಅಧಿಕ ಸಕ್ಕರೆ ಮತ್ತು ಎಣ್ಣೆ ಪದಾರ್ಥಗಳ ಸೇವನೆ ಸ್ಥೂಲಕಾಯಕ್ಕೆ ಕಾರಣವಾಗುವ ಜೊತೆಗೆ ಇದು ಆಲ್ಕೋಹಾಲ್​​ ಹೊರತಾದ ಫ್ಯಾಟಿ ಲಿವರ್​​ ಸಮಸ್ಯೆಗೆ (ಎನ್​ಎಎಫ್​​ಎಲ್​ಡಿ) ಕಾರಣವಾಗುತ್ತದೆ. ದತ್ತಾಂಶವು ತೋರಿಸುವಂತೆ ಪ್ರತಿ ನಾಲ್ವರು ವಯಸ್ಕರಲ್ಲಿ ಒಬ್ಬರು ಸ್ಥೂಲಕಾಯ ಅಥವಾ ಅಧಿಕ ತೂಕ ಉಳ್ಳವರು ಈ ರೀತಿ ಯಕೃತ್​ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ.

ಏಮ್ಸ್​​ನಿಂದ ಈ ಅಧ್ಯಯನ ನಡೆಸಿದ್ದು, ತಂಡವು ಭಾರತದಲ್ಲಿನ ಎನ್​​ಎಎಫ್​ಎಲ್​ಡಿ ಪ್ರಕರಣವನ್ನು ವಿಶ್ಲೇಷಣೆ ನಡೆಸಿದೆ. ಇದು ಭಾರತದಲ್ಲಿ ಮೂರನೇ ಒಂದರಷ್ಟು ಮಂದಿ ಅಂದರೆ ಶೇ 38ರಷ್ಟು ಜನ ಫ್ಯಾಟಿ ಲಿವರ್​ ಸಮಸ್ಯೆ ಹೊಂದಿದ್ದಾರೆ. ಜೊತೆಗೆ ಈ ಪ್ರವೃತ್ತಿ ಮಕ್ಕಳಲ್ಲಿ ಕೂಡ ಶೇ 35ರಷ್ಟು ಪ್ರಮಾಣದಲ್ಲಿ ಕಾಣಬಹುದಾಗಿದೆ ಎಂದು ಅಧ್ಯಯನ ತಿಳಿಸಿದೆ. ಕ್ಲಿನಿಕಲ್​ ಅಂಡ್​ ಎಕ್ಸಿಪಿರಿಯನ್ಸ್​ ಹೆಪಟೊಲೊಜಿ ಅಧ್ಯಯನವು ಆರಂಭಿಕ ವಯಸ್ಸಿನಲ್ಲಿನ ಜೀವನಶೈಲಿ ಆರೋಗ್ಯ ಸಮಸ್ಯೆ ಕುರಿತು ಗಮನ ಸೆಳೆಯುತ್ತದೆ.

ಯಕೃತ್​ ಕಾಯಿಲೆ ಭಾರತದಲ್ಲಿ ಕಾಳಜಿದಾಯಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣ ತೋರದ ಹಿನ್ನೆಲೆ ಕೊನೆಯ ಹಂತದವರೆಗೆ ಈ ಎನ್​ಎಎಫ್​​​ಎಲ್​ಡಿ ಪತ್ತೆಗೆ ಬರುವುದಿಲ್ಲ. ಇದು ಅನೇಕ ಯಕೃತ್​ ಸಮಸ್ಯೆ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಹೌರಾದ ಆರ್​​ಎನ್​ ಠಾಗೋರ್​​ ಆಸ್ಪತ್ರೆ ಮತ್ತು ನಾರಾಯಣ ಆಸ್ಪತ್ರೆಯ ಯಕೃತ್​ ಕಸಿ ವೈದ್ಯ ಡಾ. ರಾಹುಲ್​ ರಾಯ್​ ತಿಳಿಸಿದ್ದಾರೆ.

ಪಾಶ್ಚಿಮಾತ್ಯದ ಆಹಾರ ಪದ್ಧತಿಗಳಾದ ಫಾಸ್ಟ್​ಫುಡ್​ ಸೇವನೆ, ಹಣ್ಣು ಮತ್ತು ತರಕಾರಿ ಸೇವನೆ ಕೊರತೆ ಈ ಫ್ಯಾಟಿ ಲಿವರ್​​ ಸಮಸ್ಯೆಗೆ ಕಾರಣವಾಗಲಿದೆ.

ಇದನ್ನೂ ಓದಿ: ಕುಡಿತ ತ್ಯಜಿಸುವುದು ಯಕೃತ್​ಗೆ ಒಳ್ಳೆಯದು; ಒಮ್ಮೆಲೇ ಎಣ್ಣೆ ಬಿಡುವುದರಿಂದ ಕಾಣಿಸಿಕೊಳ್ಳುವ​ ಲಕ್ಷಣಗಳೇನು?

Last Updated : Apr 18, 2024, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.