ETV Bharat / health

ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಮೀನು ಬೆಳೆಯಲು ಮುಂದಾದ ಸಿಎಂಎಫ್​ಆರ್​ಐ - ಕೋಶ ಕೃಷಿ ಮೂಲಕ ಮೀನಿನ ಉತ್ಪಾದನೆ

ಕೋಶ ಕೃಷಿ ಮೂಲಕ ಮೀನಿನ ಉತ್ಪಾದನೆ ಮಾಡಲು ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಮುಂದಾಗಿದೆ.

CMFRI ready to grow cultured marine fish meat in Labrotory

author img

By ETV Bharat Karnataka Team

Published : Jan 29, 2024, 1:53 PM IST

ಕೊಚ್ಚಿ: ಹೆಚ್ಚುತ್ತಿರುವ ಮಾಂಸಾಹಾರಗಳ ಬೇಡಿಕೆಯಿಂದಾಗಿ ವಿಜ್ಞಾನಿಗಳು ಕೋಶ ಕೃಷಿಗೆ ಮುಂದಾಗುತ್ತಿದ್ದಾರೆ. ಈಗಾಗಲೇ ವಿದೇಶದಲ್ಲಿ ಪ್ರಯೋಗಾಲಯದಲ್ಲಿ ಚಿಕನ್​ ಅನ್ನು ಬೆಳೆಸುವ ಕಾರ್ಯ ಯಶಸ್ಸು ಕಂಡಿದೆ. ಇದೀಗ ಅದೇ ರೀತಿಯ ಪ್ರಯೋಗವೊಂದು ಭಾರತದಲ್ಲಿ ನಡೆದಿದೆ. ಅದುವೇ ಮೀನಿನ ಕೋಶ ಕೃಷಿ.

ಕೇರಳದ ಐಸಿಎಆರ್​- ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್​​ಆರ್​ಐ) ದೇಶದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಸಂಸ್ಥೆಯು ಭಾರತದಲ್ಲೇ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಮೀನಿನ ಮಾಂಸ ಅಭಿವೃದ್ಧಿಗೆ ಮುಂದಾಗಿದೆ. ಈ ಯೋಜನೆಯ ಮೂಲಕ ಸಂಸ್ಕರಿತ ಸಮುದ್ರ ಆಹಾರದಲ್ಲಿ ಹೊಸ ದಾಪುಗಾಲು ಇಡಲು ದೇಶವು ಸಜ್ಜಾಗಿದೆ. ಅಲ್ಲದೇ ಹೆಚ್ಚುತ್ತಿರುವ ಸಮುದ್ರಾಹಾರದ ಮೇಲಿನ ಬೇಡಿಕೆ- ಪೂರೈಕೆ ತೂಗಿಸುವುದು ಮತ್ತು ವನ್ಯ ಸಂಪತ್ತಿನ ಮೇಲಿನ ಅತಿಯಾದ ಅವಲಂಬನೆ ತಪ್ಪಿಸುವುದಾಗಿದೆ.

ಮೀನು ಉತ್ಪಾದನೆ ಕೃಷಿ: ಸಂಸ್ಕರಿತ ಮೀನಿನ ಮಾಂಸ ಅಥವಾ ಪ್ರಯೋಗಾಲಯದಲ್ಲಿ ಬೆಳೆದ ಮೀನಿನ ಮಾಂಸವನ್ನು ಮೀನಿನಿಂದ ನಿರ್ದಿಷ್ಟ ಕೋಶವನ್ನು ಪ್ರತ್ಯೇಕಿಸುವ ಮೂಲಕ ಉತ್ಪಾದಿಸಲಾಗುವುದು. ಮುಕ್ತ ಮಾಧ್ಯಮದಲ್ಲಿ ಪ್ರಾಣಿಗಳ ಸಂಯುಕ್ತವನ್ನು ಬಳಕೆ ಮಾಡಿ ಪ್ರಯೋಗಾಲಯದಲ್ಲಿ ಇದನ್ನು ಬೆಳೆಸಲಾಗುವುದು. ಅಂತಿಮವಾಗಿ ಈ ಉತ್ಪಾದನೆಯೂ ಮೀನಿನ ಮೂಲದ ಸುವಾಸನೆ, ರಚನೆ ಮತ್ತು ಪೋಷಕಾಂಶದ ಗುಣಮಟ್ಟವನ್ನು ಹೊಂದಿರಲಿದೆ.

ಆರಂಭದ ಹಂತದಲ್ಲಿ ಸಂಸ್ಥೆಯು ಕಿಂಗ್​ ಫಿಶ್​​, ಪಂಫ್ರೆಟ್​​ ಮತ್ತು ಸೀರ್​ ಫಿಶ್​​ನಂತಹ ಅಧಿಕ ಮೌಲ್ಯದ ಸಮುದ್ರದ ಮೀನಿನ ಕೋಶವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಸಿಎಂಎಫ್​ಆರ್​ಐ ನೀಟ್​​ ಮೀಟ್​​ ಬಯೋಟೆಕ್​ ಎಂಬ ಸಂಸ್ಕರಿತ ಮಾಂಸ ಅಭಿವೃದ್ಧಿ ಪಡಿಸುವ ಸ್ಟಾರ್ಟ್​​ ಅಪ್​ ಜೊತೆಗೆ ಕೆಲಸ ಮಾಡಲಿದೆ. ಈ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಡೆಸಲಾಗುವುದು.

ಪಿಪಿಪಿ ಯೋಜನೆ ಭಾಗ: ಸಿಎಂಎಫ್​ಆರ್​ಐ ನಿರ್ದೇಶಕ ಡಾ ಎ ಗೋಪಾಲಕೃಷ್ಣನ್​ ಮತ್ತು ನೀಟ್​ ಮೀಟ್​​ ಬಯೋಟೆಕ್​ ಸಿಇಒ ಮತ್ತು ಸಹ ಸಂಸ್ಥಾಪಕ ಡಾ ಸಂದೀಪ್​ ಶರ್ಮಾ ಈ ಸಂಬಂಧದ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಇದರ ಅನುಸಾರ ಸಿಎಂಎಫ್​ಆರ್​ಐ ಅಧಿಕ ಮೌಲ್ಯದ ಸಮುದ್ರ ಮೀನಿನ ತಳಿಯ ಆರಂಭಿಕ ಕೋಶವನ್ನು ಮಾತ್ರ ಸಂಶೋಧನೆ ಮಾಡಲಿದೆ. ಈ ಅಧ್ಯಯನವು ಹೆಚ್ಚಿನ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀನಿನ ಕೋಶವನ್ನು ಬೇರ್ಪಡಿಸುವುದು ಮತ್ತು ಸಂಸ್ಕರಿಸುವುದನ್ನು ಒಳಗೊಂಡಿರಲಿದೆ.

ಜೊತೆಗೆ ಸಿಎಂಎಫ್​ಆರ್​ಐ ಈ ಯೋಜನೆ ಸಂಬಂಧಿತ ತಳಿ, ಜೈವಿಕ ರಾಸಾಯನಿಕ ಮತ್ತು ವಿಶ್ಲೇಷಣಾ ಕೆಲಸ ನಡೆಸಲಿದೆ. ಇದಕ್ಕಾಗಿ ಸಂಸ್ಥೆ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಕೋಶ ಸಂಸ್ಕರಿತ ಕೃಷಿ ಪ್ರಯೋಗಾಲಯದ ಸಾಧನವನ್ನು ಹೊಂದಿದೆ. ಇದು ಕೋಶಾಧಾರಿತ ಜೀವಶಾಸ್ತ್ರ ಅಧ್ಯಯನಕ್ಕೆ ಭದ್ರ ಬುನಾದಿ ಹಾಕಲಿದೆ. ನೀಟ್​ ಮೀಟ್​​​ ಕೋಶ ಸಂಸ್ಕರಣೆ ತಂತ್ರಜ್ಞಾನದಲ್ಲಿ ನೈಪುಣ್ಯತೆ ಹೊಂದಿದ್ದು, ಇದು ಅಗತ್ಯ ಸೇವೆ, ಮಾನವ ಶಕ್ತಿ, ಮತ್ತು ಯೋಜನೆಗೆ ಅಗತ್ಯವಾದ ಸಾಧನಗಳನ್ನು ನೀಡಲಿದೆ.

ಕ್ಷೇತ್ರದ ಅಭಿವೃದ್ಧಿ ಗುರಿ: ಈ ಕುರಿತು ಮಾತನಾಡಿರುವ ಸಿಎಂಎಫ್​ಆರ್​ಐ ನಿರ್ದೇಶಕ ಡಾ ಎ ಗೋಪಾಲಕೃಷ್ಣನ್​, ಈ ಕ್ಷೇತ್ರದಲ್ಲಿ ಅಭಿವೃದ್ಧಿ ವೇಗಗೊಳಿಸುವ ಗುರಿಯನ್ನು ಯೋಜನೆ ಹೊಂದಿದ್ದು, ಉದಯೋನ್ಮುಖ ಕ್ಷೇತ್ರದಲ್ಲಿ ಭಾರತವು ಹಿಂದುಳಿಯಬಾರದು ಎಂಬ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಸಿಂಗಾಪುರ್​, ಇಸ್ರೇಲ್​ ಮತ್ತ ಅಮೆರಿಕದಂತಹ ಅನೇಕ ದೇಶಗಳು ಈಗಾಗಲೇ ಪ್ರಯೋಗಾಲಯದಲ್ಲಿ ಮೀನಿನ ಮಾಂಸ ಉತ್ಪಾದನೆಯಲ್ಲಿ ಮುಂದುವರೆದಿದ್ದು, ಈ ಅಂತರವನ್ನು ಸರಿದೂಗಿಸಲು ಭಾರತದಲ್ಲಿ ಈ ಸಾರ್ವಜನಿಕ ಖಾಸಗಿ ಸಹಭಾಗಿತ್ಯ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ. ಸಿಎಂಎಫ್​ಆರ್​​ಐ - ನೀಟ್​​ ಮೀಟ್​​ ಟೆಕ್ನಾಲಾಜಿ ಜೊತೆಗಿನ ಈ ಸಂಶೋಧನೆ, ಭಾರತದಲ್ಲಿ ಭವಿಷ್ಯದಲ್ಲಿ ಸಮುದ್ರಾಹಾರ ಉತ್ಪಾದನೆ ರಕ್ಷಣೆ ಮತ್ತು ಸುಸ್ಥಿರತೆಗೆ ಪ್ರಮುಖ ಮಾರ್ಗವಾಗಲಿದೆ ಎಂದರು. (ಐಎಎನ್​ಎಸ್​​)

ಇದನ್ನೂ ಓದಿ: ಇನ್ಮೇಲೆ ಚಿಕನ್​ ಅನ್ನು ಪೌಲ್ಟ್ರಿಯಲ್ಲಿ ಅಲ್ಲ, ಪ್ರಯೋಗಾಲಯದಲ್ಲಿ ಬೆಳೆಯಬಹುದು; ಇದು ಕೋಶ ಕೃಷಿ ಕೋಳಿ ಉತ್ಪಾದನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.