ETV Bharat / health

ಎಡಿಎಚ್​​ಡಿ ಹೊಂದಿರುವ ಮಕ್ಕಳಿಗೆ ಔಷಧದ ಜತೆಗೆ ಬೇಕು ಮಾನಸಿಕ ಚಿಕಿತ್ಸೆ - Children With ADHD - CHILDREN WITH ADHD

ಎಡಿಎಚ್​ಡಿ ಹೊಂದಿರುವ ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಏಕಾಗ್ರತೆಯ ಕೊರತೆ ಕಾಣಬಹುದು.

Children with ADHD Needs Medication and psychosocial treatment

author img

By ETV Bharat Karnataka Team

Published : Mar 27, 2024, 10:31 AM IST

Updated : Mar 27, 2024, 1:49 PM IST

ನವದೆಹಲಿ: ಅಟೆನ್ಶನ್ ಡೆಫಿಸಿಟ್ ಹೈಪರ್‌ ಆ್ಯಕ್ಟಿವಿಟಿ ಡಿಸಾರ್ಡರ್ (ಎಡಿಎಚ್‌ಡಿ) ಅಂದರೆ ಚಂಚಲತೆ ಮತ್ತು ಅತಿಯಾದ ಚಟುವಟಿಕೆಯಿಂದ ಇರುವುದು. 3ರಿಂದ 5 ವರ್ಷದ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ನರ ಸಂಬಂಧಿತ ಆರೋಗ್ಯ ಸಮಸ್ಯೆ ಇದಾಗಿದೆ. ಈ ಸಮಸ್ಯೆಯ ನಿವಾರಣೆಗೆ ಔಷಧದೊಂದಿಗೆ ಮಾನಸಿಕ ಚಿಕಿತ್ಸೆಯೂ ಅವಶ್ಯಕತೆಯೂ ಇದೆ ಎಂದು ಅಧ್ಯಯನ ತಿಳಿಸಿದೆ.

ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಸಂಶೋಧಕರು ಎಡಿಎಚ್‌ಡಿ ಕುರಿತು 23,000ಕ್ಕೂ ಹೆಚ್ಚು ಅಧ್ಯಯನಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂಶೋಧನೆಯ ಫಲಿತಾಂಶವನ್ನು ಪೀಡಿಯಾಟ್ರಿಕ್ಸ್ ಜರ್ನಲ್‌ನಲ್ಲಿ ಎರಡು ಕಂಪ್ಯಾನಿಯನ್ ಪೇಪರ್‌ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಎಡಿಎಚ್​ಡಿ ಪತ್ತೆ ಮತ್ತು ಚಿಕಿತ್ಸೆಯ ಪರಿಣಾಮಕಾರಿ ಮಾದರಿಯನ್ನು ಬಹಿರಂಗಪಡಿಸಲಾಗಿದೆ. ಇದರ ಜತೆಗೆ ಕಾಲಾನಂತರದಲ್ಲಿ ಈ ಸಮಸ್ಯೆಯ ನಿರ್ವಹಣೆಯ ಪ್ರಗತಿ ಕುರಿತು ಕೂಡ ವಿಮರ್ಶೆ ನಡೆದಿದೆ.

ಎಡಿಎಚ್​ಡಿ ಕುರಿತು ಸಾಕ್ಷ್ಯ ಆಧಾರಿತ ಮಾಹಿತಿಯನ್ನು ಶಿಕ್ಷಕರು, ಪೋಷಕರು ಹೊಂದುವ ಅಗತ್ಯವಿದೆ. ನಾವು ದೃಢವಾದ ವಿಮರ್ಶೆ ಮಾಡಿದ್ದೇವೆ. ಇದು ನಮಗೆ ಬಲವಾದ ಸಾಕ್ಷ್ಯ ನೀಡಿದೆ ಎಂದು ಯುಎಸ್​ಸಿಯ ಕೆಕ್​ ಸ್ಕೂಲ್​ನ ಪ್ರೊ.ಸುಸಾನೆ ಹೆಂಪೆಲ್​ ತಿಳಿಸಿದ್ದಾರೆ.

ಸದ್ಯ ಎಡಿಎಚ್​ಡಿ ಸಮಸ್ಯೆಯನ್ನು ಮಕ್ಕಳಲ್ಲಿ ಪತ್ತೆ ಮಾಡಲು ಅನೇಕ ಸಾಧನಗಳ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ಪೋಷಕರು ಮತ್ತು ಶಿಕ್ಷಕರ ರೇಟಿಂಗ್​ ಸ್ಕೇಲ್​, ರೋಗಿಯ ಸ್ವಯಂ ವರದಿ, ನರ ಮಾನಸಿಕ ಸಮಸ್ಯೆ, ಇಇಜಿ ವಿಧಾನ, ಬಯೋಮಾರ್ಕ್ಸ್​​, ಚಟುವಟಿಕೆಯ ನಿರ್ವಹಣೆ ಮತ್ತು ವೀಕ್ಷಣೆ ಮಾಡಲಾಗುತ್ತದೆ.

ಎಡಿಎಚ್​ಡಿ ಸಂಬಂಧ ಅನೇಕ ಔಷಧಿಗಳನ್ನು ಕಟ್ಟುನಿಟ್ಟಾಗಿ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಉತ್ತೇಜಕ ಮತ್ತು ಉತ್ತೇಜಕೇತರ ಅಂಶಗಳು ಸೇರಿವೆ. ಮಾಸಿಕ ವಿಧಾನ ಮತ್ತು ನಡವಳಿಕೆಯ ಮಾರ್ಪಡು ಹೊಂದಿದೆ. ಅರಿವಿನ ತರಬೇತಿ, ನ್ಯೋರೋಫೀಡ್​ಬ್ಯಾಕ್​, ದೈಹಿಕ ವ್ಯಾಯಾಮ, ಪೋಷಣೆ ಮತ್ತು ಪೋಷಕರ ಬೆಂಬಲ, ಶಾಲೆಗಳು ಮಧ್ಯಸ್ಥಿಕೆ ಮತ್ತು ಇತರೆ ಔಷಧೇತರ ಚಿಕಿತ್ಸೆಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.

ಚಿಕಿತ್ಸೆ ಮತ್ತು ಔಷಧಗಳು ಎಡಿಚ್​ಡಿ ಲಕ್ಷಣಗಳ ಸುಧಾರಣೆ ಮಾತ್ರವಲ್ಲದೇ ಎಡಿಎಚ್​ಡಿ ಜತೆಗೆ ಆಗಾಗ್ಗೆ ಬರುವ ಸಮಸ್ಯೆಗಳನ್ನೂ ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಬ್ರಡ್ಲೆ ಪೀಟರ್ಸನ್​ ಹೇಳಿದ್ದಾರೆ.

ಎಡಿಎಚ್​ಡಿ ಎಂಬುದು ಚಿಕಿತ್ಸೆ ನೀಡಬಹುದಾದ ಸಮಸ್ಯೆಯಾಗಿದ್ದು, ಮಕ್ಕಳು ಇದರಿಂದ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿವೆ. ಎಡಿಎಚ್‌ಡಿಗಾಗಿ ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಎಎಪಿ) ಕ್ಲಿನಿಕಲ್ ಅಭ್ಯಾಸ ಮಾರ್ಗಸೂಚಿ ನವೀಕರಿಸಲು ಈ ಅಧ್ಯಯನ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಲ್ಲಿ ಎಡಿಎಚ್​ಡಿ ಅಪಾಯದ ಅಂಶಗಳು; ಅಧ್ಯಯನ

Last Updated : Mar 27, 2024, 1:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.