Chia Seed Benefits: ಪ್ರಸ್ತುತ ದಿನಗಳಲ್ಲಿ ಜನರು ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯುತ್ತಿದ್ದಾರೆ. ಏಕೆಂದರೆ ಇದು ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣದಿಂದ. ಚಿಯಾ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಸಮೃದ್ಧವಾದ ಆಂಟಿ ಆಕ್ಸಿಡೆಂಟ್‌ಗನ್ನು ಹೊಂದಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿ ವೇಳೆ ಇದನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.
ಜೀರ್ಣಕ್ರಿಯೆಗೆ ಒಳ್ಳೆಯದು: ಚಿಯಾ ಬೀಜಗಳು ಫೈಬರ್ ಅಂಶಗಳಿಂದ ಸಮೃದ್ಧವಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಇದು ತುಂಬಾ ಸಹಕಾರಿ. ಮಲಗುವ ಮುನ್ನ ಚಿಯಾ ಸೀಡ್ ನೀರನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. "ನ್ಯೂಟ್ರಿಷನ್ ಜರ್ನಲ್" ನಲ್ಲಿ ಪ್ರಕಟವಾದ 2017 ರ ಅಧ್ಯಯನದ ಪ್ರಕಾರ, ಎರಡು ವಾರಗಳ ಕಾಲ ಮಲಗುವ ಮೊದಲು ನೀರಿನಲ್ಲಿ ಎರಡು ಚಮಚ ಚಿಯಾ ಬೀಜಗಳನ್ನು ನೆನಸಿಟ್ಟು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಬದ್ಧತೆ ಕಡಿಮೆಯಾಗುತ್ತದೆ ಎಂಬ ಅಂಶವನ್ನು ಕಂಡು ಹಿಡಿದಿದೆ. ಈ ಸಂಶೋಧನೆಯಲ್ಲಿ ಟೆಕ್ಸಾಸ್ A&M ವಿಶ್ವವಿದ್ಯಾಲಯದ ಪೌಷ್ಟಿಕಾಂಶ ಪ್ರಾಧ್ಯಾಪಕ ಡಾ. ಡೇವಿಡ್ ಜೆ. ಬ್ರೌನ್ ಭಾಗವಹಿಸಿದ್ದರು. ಚಿಯಾ ಬೀಜಗಳ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಅವರು ಹೇಳುತ್ತಾರೆ.
ನಿರ್ಜಲೀಕರಣಕ್ಕೆ ತಡೆ : ಚಿಯಾ ಬೀಜಗಳನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ದೇಹವನ್ನು ನಿರ್ಜಲೀಕರಣದಿಂದ ತಡೆಗಟ್ಟಬಹುದು. ರಾತ್ರಿ ಮಲಗುವ ಮುನ್ನ ಈ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಜಲಸಂಚಯನ ಮಟ್ಟವು ಪರಿಣಾಮಕಾರಿಯಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
ತೂಕ ನಿಯಂತ್ರಣ: ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಮಲಗುವ ಮುನ್ನ ಚಿಯಾ ಬೀಜದ ನೀರನ್ನು ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. ಇದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಅಂತಾರೆ ತಜ್ಞರು.
ಸಕ್ಕರೆ ಮಟ್ಟವನ್ನ ನಿಯಂತ್ರಿಸುತ್ತದೆ: ಮಧುಮೇಹದಿಂದ ಬಳಲುತ್ತಿರುವವರು ರಾತ್ರಿ ಮಲಗುವ ಮುನ್ನ ಚಿಯಾ ಬೀಜದ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಆರೋಗ್ಯಕರ ಮೂಳೆಗಳು: ಚಿಯಾ ಬೀಜಗಳು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಪೋಷಕಾಂಶಗಳಿಂದ ತುಂಬಿವೆ. ಮಲಗುವ ಮುನ್ನ ಚಿಯಾ ಬೀಜಗಳಲ್ಲಿ ನೆನೆಸಿದ ನೀರನ್ನು ಸೇವಿಸುವುದರಿಂದ ದೇಹಕ್ಕೆ ಈ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಎಲುಬುಗಳು ಆರೋಗ್ಯಕರವಾಗಿ ಮತ್ತು ಸದೃಢವಾಗಿರುತ್ತವೆ ಎನ್ನುತ್ತಾರೆ ತಜ್ಞರು.
ಆದಾಗ್ಯೂ, ರಾತ್ರಿಯಲ್ಲಿ ಚಿಯಾ ಬೀಜವನ್ನು ನೆನಸಿಟ್ಟ ನೀರನ್ನು ಕುಡಿಯುವುದರಿಂದ ಕೆಲವರಲ್ಲಿ ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಕೆ ಕೂಡಾ ನೀಡಿದ್ದಾರೆ
- ಚಿಯಾ ಬೀಜಗಳಲ್ಲಿ ಹೆಚ್ಚಿನ ಫೈಬರ್ ಅಂಶವು ಕೆಲವು ಜನರಲ್ಲಿ ಹೊಟ್ಟೆಯುಬ್ಬರ ಮತ್ತು ಗ್ಯಾಸ್‌ನಂತಹ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
- ಚಿಯಾ ಬೀಜಗಳನ್ನು ದೀರ್ಘಕಾಲ ನೆನೆಸದೇ ಆ ನೀರನ್ನು ಕುಡಿಯುವುದರಿಂದ ಬೇಗನೆ ಜೀರ್ಣವಾಗುವುದಿಲ್ಲ!
- ರಾತ್ರಿ ಚಿಯಾ ಬೀಜದ ನೀರನ್ನು ಕುಡಿದ ನಂತರ ಕೆಲವರು ಅಲರ್ಜಿ, ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳನ್ನು ಅನುಭವಿಸುತ್ತಾರೆ.
- ರಾತ್ರಿ ವೇಳೆ ಈ ನೀರನ್ನು ಕುಡಿಯುವುದರಿಂದ ಆಗಾಗ್ಗೆ ಮೂತ್ರ ವಿಸರ್ಜನೆಗೂ ಕಾರಣವಾಗಬಹುದು. ಇದರಿಂದ ನಿದ್ರೆಗೆ ತೊಂದರೆಯಾಗಬಹುದು.
- ಅಂತಿಮವಾಗಿ, ಆರೋಗ್ಯ ತಜ್ಞರು ಹೇಳುವಂತೆ ಚಿಯಾ ಸೀಡ್ ವಾಟರ್‌ನ ಅನೇಕ ಪ್ರಯೋಜನಗಳ ಹೊರತಾಗಿಯೂ, ಕೆಲವರಲ್ಲಿ ಕೆಲವು ಅಡ್ಡಪರಿಣಾಮಗಳು ಇರಬಹುದು. ನೀವು ಈ ನೀರನ್ನು ಕುಡಿಯಲು ಬಯಸಿದರೆ. ಪರಿಣತ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಉತ್ತಮ!
ವಿಶೇಷ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.