Chapati Benefits for Weight Loss: ನಮ್ಮಲ್ಲಿ ಹೆಚ್ಚಿನವರು ಚಪಾತಿ ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಭೋಜನಕ್ಕೆ ಅನ್ನವನ್ನು ಬಿಟ್ಟು ಚಪಾತಿ ತಿಸೇವಿಸುತ್ತಾರೆ. ಆದರೆ, ರಾತ್ರಿಯ ಊಟದ ಭಾಗವಾಗಿ ಚಪಾತಿ ಮಾಡುವುದರಿಂದ ತೂಕ ಇಳಿಸುವುದರ ಜೊತೆಗೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ರಾತ್ರಿ ಸಮಯದಲ್ಲಿ ಮಾತ್ರವಲ್ಲ, ದಿನಕ್ಕೆ ಒಂದು ಬಾರಿ ಚಪಾತಿ ತಿನ್ನುವುದರಿಂದ ಉತ್ತಮ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಈಗ ಚಪಾತಿಯಲ್ಲಿ ಅಡಗಿರುವ ಆರೋಗ್ಯದ ರಹಸ್ಯಗಳನ್ನು ತಿಳಿದುಕೊಳ್ಳೋಣ.
2019ರ Journal of Food Science and Technology ಅಧ್ಯಯನದ ಪ್ರಕಾರ, ಚಪಾತಿ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ದೆಹಲಿ ವಿಶ್ವವಿದ್ಯಾನಿಲಯದ ಸಂಶೋಧಕ ಅಮಿತ್ ಕುಮಾರ್ ಅವರು Whole grain chapati consumption improves cardiovascular risk factors in healthy adults ಎಂಬ ಅಧ್ಯಯನದಲ್ಲಿ ಭಾಗವಹಿಸಿದ್ದರು. ಚಪಾತಿಯಲ್ಲಿ ಕೊಬ್ಬನ್ನು ಕಡಿಮೆ ಮಾಡುವ ಅಂಶ ಸೇರಿದೆ ಎಂದು ಅವರು ವಿವರಿಸಿದ್ದಾರೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ಅದರಲ್ಲೂ ತೂಕ ಇಳಿಸಲು ಚಪಾತಿಯು ಉತ್ತಮವಾದ ಆಹಾರವಾಗಿದೆ ಎನ್ನುತ್ತಾರೆ ಸಂಶೋಧಕರು. ದಿನಕ್ಕೆ ಎರಡು ಸಾಮಾನ್ಯ ಗಾತ್ರದ ಚಪಾತಿಗಳನ್ನು ಸೇವಿಸುವುದರಿಂದ ಹೆಚ್ಚಿನ ಫೈಬರ್ ಅಂಶವು ದೇಹಕ್ಕೆ ಲಭಿಸುತ್ತದೆ. ಇದು ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿರುವಂತೆ ಮಾಡುತ್ತದೆ. ಇದರಿಂದ ಹಸಿವಾಗದಂತೆ ಮತ್ತು ಬೇರೆ ತಿಂಡಿಗಳತ್ತ ಮನಸ್ಸು ಮಾಡದಂತೆ ಎಚ್ಚರಿಕೆ ವಹಿಸಲು ಕೂಡ ಸಾಧ್ಯವಾಗುತ್ತದೆ.
ಇದಲ್ಲದೆ ಇತರ ಪದಾರ್ಥಗಳಿಗೆ ಹೋಲಿಸಿದರೆ, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ನೀವು ಸುರಕ್ಷಿತವಾಗಿ ತೂಕ ಕಳೆದುಕೊಳ್ಳಲು ತುಂಬಾ ಸಹಾಯವಾಗುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮಲಬದ್ಧತೆ, ಡಿಸ್ಪೆಪ್ಸಿಯಾ, ಗ್ಯಾಸ್ ಇತ್ಯಾದಿ ಜೀರ್ಣಕ್ರಿಯೆಯ ಸಮಸ್ಯೆ ಹೊಂದಿರುವವರು ತಜ್ಞರ ಸಲಹೆ ಪ್ರಕಾರ ಚಪಾತಿಯನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿ ಮಾಡಿಕೊಳ್ಳಬಹುದು.
ಪೋಷಕಾಂಶಗಳ ಕಣಜ:
- ಚಪಾತಿಯನ್ನು ಪೌಷ್ಟಿಕಾಂಶಗಳ ಸಂಯೋಜನೆಯಾಗಿದೆ. ವಿಟಮಿನ್ ಬಿ ಮತ್ತು ಇ ಜೊತೆಗೆ ಕ್ಯಾಲ್ಸಿಯಂ, ಸತು, ತಾಮ್ರ, ಅಯೋಡಿನ್, ಸಿಲಿಕಾನ್, ಪೊಟ್ಯಾಸಿಯಮ್, ಮ್ಯಾಂಗನೀಸ್ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿ ದೊರೆಯುತ್ತವೆ. ಇವೆಲ್ಲವೂ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ದಿನನಿತ್ಯದ ಸಣ್ಣ ಪ್ರಮಾಣದಲ್ಲಿ ಬದಲಿಸುತ್ತವೆ ಎಂದು ಸಂಶೋಧಕರು ವಿವರಿಸುತ್ತಾರೆ.
- ಚಪಾತಿಯಲ್ಲಿರುವ ಹೆಚ್ಚಿನ ಕಬ್ಬಿಣಾಂಶವು ದೇಹದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದ ರಕ್ತಹೀನತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಬಹಿರಂಗಪಡಿಸಿದ್ದಾರೆ.
- ಚಪಾತಿಯಲ್ಲಿರುವ ಸೆಲೆನಿಯಂ ದೇಹವನ್ನು ಕಾರ್ಸಿನೋಜೆನಿಕ್ ಏಜೆಂಟ್‌ಗಳಿಂದ ರಕ್ಷಿಸುತ್ತದೆ.
- ಚಪಾತಿಯಲ್ಲಿರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಿಂದ ಅದು ದಿನವಿಡೀ ದೇಹಕ್ಕೆ ಶಕ್ತಿ ಲಭಿಸುವಂತೆ ಮಾಡುತ್ತದೆ.
- ಚಪಾತಿಯಲ್ಲಿರುವ ಸತು ಹಾಗೂ ಇತರ ಖನಿಜಗಳು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆರೋಗ್ಯಕರ ಚಪಾತಿ ಮಾಡುವುದು ಹೇಗೆ?: ಹೆಚ್ಚು ಎಣ್ಣೆ ಮತ್ತು ತುಪ್ಪವನ್ನು ಸೇರಿಸಿ ಚಪಾತಿ ಮಾಡುವುದರಿಂದ ದೇಹಕ್ಕೆ ಅನಗತ್ಯ ಕೊಬ್ಬು ಸೇರಿಕೊಳ್ಳುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಕಡಿಮೆ ತುಪ್ಪ ಹಾಗೂ ಎಣ್ಣೆ ಬಳಸಬೇಕು. ಸಾಧ್ಯವಾದರೆ ಈ ಎರಡನ್ನು ಬಳಸದೆ ಹಿಟ್ಟು ಹಚ್ಚಿ ಮಾಡಿದ ಚಪಾತಿ ತುಂಬಾ ಒಳ್ಳೆಯದು ಎನ್ನುತ್ತಾರೆ ತಜ್ಞರು.
ಮಾರುಕಟ್ಟೆಯಲ್ಲಿ ಸಿಗುವ ಗೋಧಿ ಹಿಟ್ಟಿನಲ್ಲಿ ಮೈದಾ ಇರುತ್ತದೆ. ಇದರಿಂದ ಹಸಿ ಗೋಧಿಯನ್ನು ತೆಗೆದುಕೊಂಡು ನೀವೇ ಹಿಟ್ಟನ್ನು ರೆಡಿ ಮಾಡಿಸಿಕೊಳ್ಳಬೇಕಾಗುತ್ತದೆ. ನೀವೇ ಸಿದ್ಧಪಡಿಸುವಂತಹ ಹಿಟ್ಟಿನಿಂದ ಚಪಾತಿ ಮಾಡುವುದು ಉತ್ತಮ.
ಚಪಾತಿ ಜೊತೆಗೆ ಗಟ್ಟಿಯಾದ ಬೇಳೆ ಪಲ್ಯ ಹಾಗೂ ಆಲೂಗೆಡ್ಡೆ ಪಲ್ಯವನ್ನು ಹೊರತುಪಡಿಸಿ ಎಲ್ಲಾ ತರಹದ ತರಕಾರಿಗಳಿಂದ ಮಾಡಿದ ಪಲ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ಸಕಲ ಪೋಷಕಾಂಶಗಳು ಒದಗುತ್ತವೆ. ಗೋಧಿ ಹಿಟ್ಟು ಕಲಸಿಕೊಳ್ಳುವಾಗ ಬೀನ್ಸ್, ಕ್ಯಾರೆಟ್ ತುಂಡುಗಳು, ವಿವಿಧ ಸೊಪ್ಪುಗಳನ್ನು ಸೇರಿಸಿ ಚಪಾತಿ ಮಾಡಿದರೆ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ರಾಗಿ, ಸೋಯಾಬೀನ್ ಹಾಗೂ ಸಣ್ಣ ಕಾಳುಗಳೊಂದಿಗೆ ಗೋಧಿ ಹಿಟ್ಟನ್ನು ಬೆರೆಸಿ ಚಪಾತಿ ತಯಾರಿಸಬಹುದು. ಇಲ್ಲದಿದ್ದರೆ, ಹೊರಗೆ ಲಭ್ಯವಿರುವ ಬಹುಧಾನ್ಯದ ಹಿಟ್ಟನ್ನು ಬಳಸಬಹುದು ಎಂದು ಸಂಶೋಧಕರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ವೀಕ್ಷಿಸಬಹುದು: https://pmc.ncbi.nlm.nih.gov/articles/PMC4908315/#:~:text=Conclusions%20This%20meta%2Danalysis%20provides,cardiovascular%2C%20non%2Dcancer%20causes.