ETV Bharat / health

ಲಿವರ್​ ಆರೋಗ್ಯಕ್ಕಾಗಿ ಈ ಆಹಾರಗಳನ್ನು ಸೇವಿಸಬೇಡಿ! - Foods to Avoid Keep Liver Healthy

author img

By ETV Bharat Health Team

Published : Aug 23, 2024, 1:43 PM IST

Updated : Aug 23, 2024, 4:02 PM IST

Liver Damage Foods: ಮದ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ಹೆಚ್ಚು ಅಪಾಯಕಾರಿ ಆಹಾರ ಪದಾರ್ಥಗಳಿವೆ. ಆ ಆಹಾರಗಳನ್ನು ತಿಂದರೆ ಯಕೃತ್ತು ಹಾಳಾಗುತ್ತದೆ ಎನ್ನುತ್ತಾರೆ ತಜ್ಞರು. ಪಿತ್ತಜನಕಾಂಗವನ್ನು ಆರೋಗ್ಯಕರವಾಗಿಡಲು ಆಹಾರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ...

LIVER DAMAGE CAUSES  LIVER DAMAGE FOOD TO AVOID  LIVER INFECTION FOODS TO AVOID  FOODS TO PREVENT LIVER DISEASE
ಸಾಂದರ್ಭಿಕ ಚಿತ್ರ (ETV Bharat)

Foods to Avoid Keep Liver Healthy: ಯಕೃತ್ತು ನಮ್ಮ ದೇಹದಲ್ಲಿನ ಅತಿದೊಡ್ಡ ಮತ್ತು ಪ್ರಮುಖ ಅಂಗವಾಗಿದೆ. ಈ ಅಂಗವು ಮುಕ್ಕಾಲು ಭಾಗದವರೆಗೆ ಹಾನಿಗೊಳಗಾದರೂ ಕೂಡ ಅದು ತಾನೇ ಸರಿಪಡಿಸಿಕೊಳ್ಳಬಲ್ಲದು. ಕಾಲು ಭಾಗ ಚೆನ್ನಾಗಿದ್ದರೆ, ಅದು ತನ್ನನ್ನು ತಾನೇ ಮರುನಿರ್ಮಾಣ ಮಾಡಬಹುದು. ಅಂತಹ ಪ್ರಮುಖ ಅಂಗಕ್ಕೆ ಹಾನಿಯಾಗಲು ಮದ್ಯಪಾನ ಮತ್ತು ಧೂಮಪಾನವು ಕಾರಣ ಎಂದು ಹಲವರು ಭಾವಿಸುತ್ತಾರೆ. ಇವೆರಡೂ ಪ್ರಮುಖ ಕಾರಣ ಆಗಿದೆ. ಇದರೊಂದಿಗೆ ನಾವು ದಿನದಲ್ಲಿ ಸೇವಿಸುವ ಹಲವು ಆಹಾರ ಪದಾರ್ಥಗಳು ಲಿವರ್ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎನ್ನುತ್ತಾರೆ ಪೌಷ್ಟಿಕ ಆಹಾರ ತಜ್ಞೆ ಡಾ.ಅಂಜಲಿ ದೇವಿ. ಯಾವೆಲ್ಲಾ ಕಾರಣಕ್ಕೆ ಯಕೃತ್ತು ಹಾನಿಯಾಗುತ್ತದೆ ಎಂಬುದನ್ನು ವೈದ್ಯರು ನೀಡಿರುವ ಸಲಹೆಗಳು ಇಲ್ಲಿವೆ ನೋಡಿ.

ಕೂಲ್ ಡ್ರಿಂಕ್ಸ್: ತಂಪು ಪಾನೀಯ ಸೇವನೆಯಿಂದ ಲಿವರ್ ಬೇಗ ಹಾಳಾಗುತ್ತದೆ. ಹೆಚ್ಚು ಸಕ್ಕರೆ ಮತ್ತು ಸಿಹಿತಿಂಡಿಗಳನ್ನು ತಿನ್ನುವುದು ಯಕೃತ್ತಿಗೆ ಒಳ್ಳೆಯದಲ್ಲ. ಇದರಿಂದಾಗಿ ಯಕೃತ್ತಿನ ಕಾರ್ಯವು ನಿಧಾನಗೊಳ್ಳುತ್ತದೆ. ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ದ್ರವಾಂಶದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಲಿವರ್ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂದು ವೈದ್ಯರಾದ ಡಾ.ಅಂಜಲಿ ದೇವಿ ತಿಳಿಸುತ್ತಾರೆ.

ಕೊಬ್ಬಿನಾಂಶವಿರುವ ಆಹಾರ: ಹೆಚ್ಚು ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸುವುದರಿಂದ ಯಕೃತ್ತಿನ ಆರೋಗ್ಯವನ್ನು ಹಾನಿಗೊಳಿಸಬಹುದು. ಬೆಣ್ಣೆ, ತುಪ್ಪ, ಚೀಸ್, ಕೆಂಪು ಮಾಂಸದಂತಹ ಆಹಾರಗಳಲ್ಲಿ ಕೊಬ್ಬಿನಾಂಶ ಸಮೃದ್ಧವಾಗಿ ಇರುತ್ತವೆ. ಹಾಗಾಗಿ ಇವುಗಳಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ವೈದ್ಯರು.

ಜಂಕ್, ಫಾಸ್ಟ್ ಫುಡ್​: ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಲಿವರ್ ಆರೋಗ್ಯವನ್ನು ಹಾಳು ಮಾಡುತ್ತವೆ. ಬಣ್ಣ ಮತ್ತು ರುಚಿಗಾಗಿ ಕೆಲವು ರಾಸಾನಿಕಗಳನ್ನು ಬಳಸಿ ತಯಾರಿಸಿದ ಆಹಾರವನ್ನು ಸೇವಿಸುವುದು ತುಂಬಾ ಅಪಾಯಕಾರಿ. ಇದಲ್ಲದೇ ತಂಪು ಪಾನೀಯಗಳಲ್ಲಿ ಬಳಸುವ ಸಕ್ಕರೆ ಮತ್ತು ಸಂಸ್ಕರಣಾ ಸಾಮಗ್ರಿಗಳು (Processing materials) ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ವಿವರಿಸುತ್ತಾರೆ.

ರಾಸಾಯನಿಕ ಹಾಕಿ ಬೆಳೆದ ಆಹಾರ: ಪಿತ್ತಜನಕಾಂಗದ ಕಾಯಿಲೆಗಳನ್ನು ತಪ್ಪಿಸಲು ರಾಸಾಯನಿಕಗಳನ್ನು ಹಾಕಿ ಬೆಳೆದ ಆಹಾರವನ್ನು ತ್ಯಜಿಸುವುದು ಉತ್ತಮ. ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಸೇವಿಸಲು ವೈದ್ಯರು ಸೂಚಿಸುತ್ತಾರೆ.

ಸಕ್ಕರೆ ಮತ್ತು ಬೇಕರಿ ಉತ್ಪನ್ನಗಳು: ಹೆಚ್ಚು ಸಕ್ಕರೆಯನ್ನು ಸೇವಿಸುವುದರಿಂದ ಹೆಚ್ಚು ಕೊಬ್ಬನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ. ಬಿಳಿ ಬ್ರೆಡ್, ಬಿಳಿ ಅಕ್ಕಿ, ಪೇಸ್ಟ್ರಿಗಳು, ಸೋಡಾ, ಪಾಸ್ಟಾ ಮತ್ತು ಸಿಹಿ ತಿಂಡಿಗಳಂತಹ ಬೇಕರಿ ಪದಾರ್ಥಗಳು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತವೆ. ಮತ್ತು ಅವುಗಳನ್ನು ತಿನ್ನದೇ ಇರುವುದು ತುಂಬಾ ಒಳ್ಳೆಯದು.

ಕಾರ್ಬೋಹೈಡ್ರೇಟ್​ಗಳು: ಕಾರ್ಬೋಹೈಡ್ರೇಟ್​ಗಳ ಹೆಚ್ಚಿನ ಸೇವನೆಯು ಯಕೃತ್ತನ್ನು ಓವರ್ಲೋಡ್ ಮಾಡಬಹುದು. ಇದರಿಂದ ಯಕೃತ್ತಿನ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ.

ಕೆಂಪು, ಸಂಸ್ಕರಿಸಿದ ಮಾಂಸ: ಪ್ರಾಣಿಗಳ ಮಾಂಸವು ಯಕೃತ್ತಿನ ಮೇಲೂ ಪರಿಣಾಮ ಬೀರುತ್ತದೆ. ರಾಸಾಯನಿಕಗಳಿಂದ ಸಂಸ್ಕರಿಸಿದ ಮಾಂಸವು ಯಕೃತ್ತಿನ ಮತ್ತಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗೆ ಸಂಪರ್ಕಿಸಬಹುದು: https://www.niddk.nih.gov/health-information/liver-disease/cirrhosis

ಓದುಗರಿಗೆ ಪ್ರಮುಖ ಸೂಚನೆ: ಇಲ್ಲಿ ನಿಮಗೆ ಒದಗಿಸಲಾದ ಎಲ್ಲಾ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

Last Updated : Aug 23, 2024, 4:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.