ನವದೆಹಲಿ: ಗರ್ಭಾವಸ್ಥೆ ಸಮಯದಲ್ಲಿ ಪ್ಲಾಸ್ಟಿಕ್ ಕೆಮಿಕಲ್ ಬಿಸ್ಪೆನಾಲ್ ಎ (ಬಿಪಿಎ)ಗೆ ಹೆಚ್ಚು ತೆರೆದುಕೊಳ್ಳುವುದರಿಂದ ಗಂಡು ಮಕ್ಕಳಲ್ಲಿ ಆಟಿಸಂ ಅಪಾಯ ಹೆಚ್ಚುತ್ತದೆ ಎಂದು ಹೊಸ ಅಧ್ಯಯನ ಪತ್ತೆ ಮಾಡುತ್ತದೆ.
ಫ್ಲಾರೆ ಇನ್ಸುಟಿಟ್ಯೂಟ್ ಆಫ್ ನ್ಯೂರೋಸೈನ್ಸ್ ಮತ್ತು ಮೆಂಟಲ್ ಹೆಲ್ತ್ನ ವಾ ಚಿನ್ ಬೂನ್ ಮತ್ತು ಪ್ರೊ ಅನ್ನೆ ಲೂಯಿಸ್ ಪೊನ್ಸೊನ್ಬೆ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿದೆ. ಇವರು ಗರ್ಭದಲ್ಲಿರುವ ಮಗುವು ಪ್ಟಾಸ್ಟಿಕ್ಗೆ ಒಡ್ಡಿಕೊಳ್ಳುವುದು ಮತ್ತು ಆಟಿಸಂ ನಡುವಿನ ಸಂಬಂಧಗಳ ಕುರಿತು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಬಾರವಾನ್ ಇನ್ಫಾಂಟ್ ಅಧ್ಯಯನ (ಬಿಐಎಸ್) ಮತ್ತು ಯುಎಸ್ಎಯಲ್ಲಿನ ಕೊಲಂಬಿಯಾ ಸೆಂಟರ್ ಫಾರ್ ಚಿಲ್ಡ್ರನ್ ಹೆಲ್ತ್ ಮತ್ತು ಎನ್ವರ್ನಮೆಂಟ್ ದೊಡ್ಡ ಸಮೂಹ ವಿಶ್ಲೇಷಣೆ ನಡೆಸಿದೆ. ಗರ್ಭಾವಸ್ಥೆಯ ಸಮಯದಲ್ಲಿ ಪ್ಲಾಸ್ಟಿಕ್ ರಾಸಾಯನಿಕಗಳಿಗೆ ತೆರೆದುಕೊಳ್ಳುವಿಕೆ ಆಟಿಸಂ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ ಎಂದು ಕೆಲವು ಅಧ್ಯಯನಗಳು ಈಗಾಗಲೇ ಸಾಬೀತು ಮಾಡಿವೆ.
ಅಷ್ಟಕ್ಕೂ ಏನಿದು ಬಿಪಿಎ: ಬಿಸ್ಫೆನಾಲ್ ಎ (BPA) ಪ್ರಾಥಮಿಕವಾಗಿ ಪಾಲಿಕಾರ್ಬೊನೇಟ್ ಪ್ಲಾಸ್ಟಿಕ್‌ಗಳ ಉತ್ಪಾದನೆಯಲ್ಲಿ ಬಳಸಲು ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುವ ರಾಸಾಯನಿಕವಾಗಿದೆ. ಇದು ಕನ್ನಡಕಗಳು, ನೀರಿನ ಬಾಟಲಿಗಳು ಮತ್ತು ಕೆಲವು ಲೋಹದ ಆಹಾರದ ಕ್ಯಾನ್‌ಗಳು, ಬಾಟಲ್ ಟಾಪ್‌ಗಳು ಮತ್ತು ನೀರು ಸರಬರಾಜಿನ ಪೈಪ್‌ಗಳಿಗೆ ಲೇಪಿಸುವ ಎಪಾಕ್ಸಿ ರೆಸಿನ್‌ಗಳು ಸೇರಿದಂತೆ ವಿವಿಧ ಉತ್ಪನ್ನಗಳಲ್ಲಿ ಕಂಡು ಬರುತ್ತದೆ. ಇದುವೆ ಹುಟ್ಟುವ ಮಕ್ಕಳಲ್ಲಿ ಅಪಾಯವನ್ನುಂಟು ಮಾಡಲಿದೆ ಅಂತಿವೆ ಸಂಶೋಧನೆಗಳು
ಏನೆಲ್ಲ ಸಮಸ್ಯೆಗೆ ಕಾರಣವಾಗುತ್ತೆ ಈ ಬಿಪಿಎ: ಜೈವಿಕ ಯಾತ್ರಿಕೃತ ಸಾಮರ್ಥ್ಯದ ಒಳಗೊಳ್ಳುವಿಕೆಯೊಂದಿಗೆ ಇದನ್ನು ತೋರಿಸುವುದು ಅಗತ್ಯವಾಗಿದೆ. ಬಿಪಿಎ ಗಂಡು ಭ್ರೂಣದ ನರ ಅಬಿವೃದ್ಧಿಯಲ್ಲಿನ ಹಾರ್ಮೋನ್ ನಿಯಂತ್ರಣದ ಮೇಲೆ ಹಲವು ವಿಧದಲ್ಲಿ ಅಡ್ಡಿ ಮಾಡುತ್ತದೆ. ಗಂಡು ಮಗುವಿನ ಮಿದುಳಿನ ಬೆಳವಣಿಗೆಗೆ ಬೇಕಾದ ಅರೊಮೇಟ್ಸ್, ಕಿಣ್ವಗಳು ಅಗತ್ಯವಾಗಿದ್ದು, ಇವುಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ ಕೊಲಂಬಿಯಾ ಸೆಂಟರ್ ಫಾರ್ ಚಿಲ್ಡ್ರನ್ ಹೆಲ್ತ್ ಮತ್ತು ಎನ್ವರ್ನಮೆಂಟ್
ಮಿದುಳಿನಲ್ಲಿ ಟೆಸ್ಟೋಸ್ಟೆರಾನ್ ಅನ್ನು ನ್ಯೂರೋಈಸ್ಟ್ರೊಜೆನ್ ಆಗಿ ಪರಿವರ್ತಿಸುವ ಕಿಣ್ವ ಅರೋಮ್ಯಾಟೇಸ್‌ನ ಕಡಿಮೆ ಮಟ್ಟದ ಮಕ್ಕಳನ್ನು ಅಧ್ಯಯನದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಬಿಪಿಎ ಮತ್ತು ಆಟಿಸಂ ನಡುವಿನ ಸಂಬಂಧವು ನಿರ್ದಿಷ್ಟವಾಗಿ ಈ ರಾಸಾಯನಿಕದ ಒಳಹರಿವಿನ ಅಡ್ಡಿಪಡಿಸುವ ಗುಣಲಕ್ಷಣಗಳ ದುರ್ಬಲತೆ ಈ ಅಧ್ಯಯನದ ವೇಳೆ ಸ್ಪಷ್ಟವಾಗಿ ಕಂಡು ಬಂದಿದೆ. ಮಕ್ಕಳ ತಾಯಂದಿರು ತಮ್ಮ ಕೊನೆ ಹಂತದ ಗರ್ಭಾವಸ್ಥೆಯಲ್ಲಿ ಬಿಪಿಎಗೆ ತೆರೆದುಕೊಳ್ಳುವಿಕೆಯ ಹೆಚ್ಚಿನ ಅಂಶಗಳನ್ನು ಹೊಂದಿದ್ದಾರೆ. ಈ ಮಕ್ಕಳು ತಮ್ಮ 2ನೇ ವಯಸ್ಸಿನಲ್ಲಿ ಆಟಿಸಂಗೆ ಒಳಗಾಗುತ್ತಾರೆ. ಮೂರುವರೆ ವರ್ಷದಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ. 11ನೇ ವಯಸ್ಸಿನಲ್ಲಿ ರೋಗ ನಿರ್ಣಯ ಹೊಂದುತ್ತಾರೆ.
ಜನನ ಸಮೂಹ ಅಧ್ಯಯನದಲ್ಲಿ ಬಿಪಿಎ ಮಟ್ಟ ಅಧಿಕವಾಗಿದ್ದು, ಇವು ಕಿಣ್ವ ಅರೋಮ್ಯಾಟೇಸ್ ಎಪಿಜೆನಿಟಿಕ್ ಕುಗ್ಗುವಿಕೆಯೊಂದಿಗೆ ಸಂಬಂಧ ಹೊಂದಿವೆ. ಪ್ರಯೋಗಾಲಯದ ಕಾರ್ಯದಲ್ಲಿ ಡಾ ಬೂನ್ ಪತ್ತೆ ಮಾಡಿದಂತೆ ಇದು ಅನಟೊಮಿಕಲ್, ನರ ಸಮಸ್ಯೆ ಮತ್ತು ನಡುವಳಿಕೆ ಬದಲಾವಣೆಗಳು ಗಂಡು ಇಲಿಗಳಲ್ಲಿ ಕಂಡು ಬಂದಿದೆ.
ಮೊದಲ ಬಾರಿಗೆ ಜೈವಿಕ ಮಾರ್ಗದ ಮೂಲಕ ಆಟಿಸಂ ಮತ್ತು ಬಿಪಿಎ ನಡುವಿನ ಸಂಬಂಧದ ಕುರಿತು ಪರಿಶೀಲನೆ ನಡೆಸಲು ಸಹಾಯ ಮಾಡಿದೆ. ಪ್ಲಾಸ್ಟಿಕ್ ನಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ಪ್ರೊ ಅನ್ನೆ ಲೂಯಿಸ್ ಪೊನ್ಸೊನ್ಬೆ ತಿಳಿಸಿದ್ದಾರೆ.
ಇದನ್ನೂ ಓದಿ: ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಮಕ್ಕಳಿಗೆ ಸ್ಟೆಮ್ ಥೆರಪಿಗೆ ಅನುಮತಿಸಿದ ದೆಹಲಿ ಹೈ ಕೋರ್ಟ್