ETV Bharat / health

ಹಾಗಲಕಾಯಿ ತಿನ್ನೋದರಿಂದ ಇವೆ ಹಲವು ಪ್ರಯೋಜನ, ನಿತ್ಯ ಉಪಯೋಗಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ: ತಜ್ಞರು ಹೀಗೆ ಹೇಳಿದ್ದೇಕೆ? - Bitter Guard Benefits - BITTER GUARD BENEFITS

BITTER GUARD BENEFITS: ಹಾಗಲಕಾಯಿ ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಾಗಲಕಾಯಿ ವಿಶೇಷವಾಗಿ ರಕ್ತಹೀನತೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ನಮ್ಮನ್ನು ರಕ್ಷಿಸುತ್ತದೆ. ಹಲವು ಉಪಯೋಗಗಳಿದ್ದರೂ ಇದನ್ನು ದಿನನಿತ್ಯ ಸೇವಿಸಿದರೆ ಅಪಾಯವಿದೆ ಎನ್ನುತ್ತಾರೆ ತಜ್ಞರು. ಈ ಕುರಿತು ಸ್ಟೋರಿ ಇಲ್ಲಿದೆ ಸಂಫುರ್ಣವಾಗಿ ಓದಿ.

BITTER GUARD BENEFITS  Bitter gourd is rich in fiber  Helps prevent digestive problems
ಹಾಗಲಕಾಯಿ ಮಿತವಾಗಿ ಸೇವಿಸಿದರೆ ಹಲವು ಪ್ರಯೋಜನ, ಪ್ರತಿನಿತ್ಯ ಸೇವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ: ತಜ್ಞರು ಹೀಗೇಕೆ ಹೇಳಿದ್ದು? (ETV Bharat)
author img

By ETV Bharat Karnataka Team

Published : Aug 6, 2024, 9:51 AM IST

Bitter Guard Benefits: ಹಾಗಲಕಾಯಿ ಆ ​​ಹೆಸರು ಕೇಳಿದರೆ ಕೆಲವರು ತುಂಬಾ ಓಡಿ ಹೋಗುತ್ತಾರೆ. ಕಹಿಯಾಗಿರುವುದಕ್ಕೆ ಬಹುತೇಕರು ಹಾಗಲಕಾಯಿ ಸಮೀಪಕ್ಕೂ ಸುಳಿಯುವುದಿಲ್ಲ. ಹಾಗಲಕಾಯಿಯಲ್ಲಿ ನಿಜವಾಗಿಯು ಒಳ್ಳೆಯ ಪ್ರಯೋಜನಗಳು ಅಡಗಿವೆ. ಹಾಗಲಕಾಯಿಯಲ್ಲಿ ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಸಿ ಜೊತೆಗೆ ಫೈಬರ್, ಪೊಟ್ಯಾಸಿಯಮ್, ಸೋಡಿಯಂ, ಮ್ಯಾಂಗನೀಸ್, ಮೆಗ್ನೀಸಿಯಮ್, ಫಾಸ್ಫರಸ್, ಕ್ಯಾಲ್ಸಿಯಂ, ರೈಬೋಫ್ಲಾವಿನ್, ತಾಮ್ರ, ಸತು ಮತ್ತು ಕಬ್ಬಿಣದ ಖನಿಜಗಳಿವೆ.

ಹಾಗಲಕಾಯಿಯನ್ನು ಖನಿಜಗಳ ಗಣಿ ಎಂದೂ ಹೇಳಬಹುದು. ಹಾಗಲಕಾಯಿಯಲ್ಲಿ ನಾರಿನಂಶ ಹೇರಳವಾಗಿದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು ದೇಹದಲ್ಲಿ ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುತ್ತದೆ. ತೂಕ ನಿಯಂತ್ರಣಕ್ಕೂ ಹಾಗಲ ಉಪಯುಕ್ತ. ಹಾಗಲಕಾಯಿಯಲ್ಲಿ C ಮತ್ತು A ಜೀವಸತ್ವಗಳು, ಫೋಲೇಟ್, ಪೊಟ್ಯಾಸಿಯಮ್, ಸತು ಮತ್ತು ಕಬ್ಬಿಣದ ಖನಿಜಗಳು ಸಮೃದ್ಧವಾಗಿವೆ. ಇದು ಮುಖ್ಯವಾಗಿ ವಿಟಮಿನ್-ಸಿ ಯಲ್ಲಿ ಸಮೃದ್ಧವಾಗಿದೆ. ರೋಗ ನಿರೋಧಕ ಶಕ್ತಿಯನ್ನು ಕೂಡಾ ಹೆಚ್ಚಿಸುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ತಡೆಯಲು ಇದು ತುಂಬಾ ಸಹಾಯ ಮಾಡುತ್ತದೆ.

ಚರ್ಮ ರೋಗಕ್ಕೆ ಹಾಗಲಕಾಯಿ ರಾಮಬಾಣ: ವಿಟಮಿನ್ ಎ ಹೇರಳವಾಗಿರುವ ಹಾಗಲಕಾಯಿ ತಿನ್ನುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ದೃಷ್ಟಿಯನ್ನು ಸುಧಾರಿಸುವುದರ ಜೊತೆಗೆ, ಫೋಲೇಟ್ ಮಕ್ಕಳ ಬೆಳವಣಿಗೆಗೆ ಉಪಯುಕ್ತವಾಗಿದೆ. ಮಧುಮೇಹಿಗಳಿಗೆ ಹಾಗಲಕಾಯಿಯು ಪ್ರಕೃತಿ ನೀಡಿದ ವರದಾನವೆಂದೇ ಹೇಳಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಇನ್ಸುಲಿನ್ ಅನ್ನು ಒದಗಿಸುತ್ತದೆ. ಜಠರ, ಕರುಳು, ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳ ವಿರುದ್ಧ ಹೋರಾಡುವ ಗುಣಗಳನ್ನು ಹಾಗಲಕಾಯಿ ಹೊಂದಿದೆ ಎಂದು ಹಲವು ಸಂಶೋಧನೆಗಳು ಬಹಿರಂಗಪಡಿಸಿವೆ.

ರೋಗ ನಿರೋಧಕ ಹೆಚ್ಚಿಸುವ ಮಾತ್ರೆ ಇದ್ದಂತೆ: ಹಾಗಲಕಾಯಿಯನ್ನು ಆಹಾರದ ಭಾಗವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ದೇಹದಲ್ಲಿನ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. ಗಾಯಗಳು ಬೇಗ ಗುಣವಾಗುತ್ತವೆ. ಕೂದಲು ಪೋಷಣೆಯಾಗುತ್ತದೆ ಮತ್ತು ಕೂದಲು ಬಲವಾಗಿರುತ್ತದೆ. ದೃಷ್ಟಿ ಸುಧಾರಿಸುತ್ತದೆ. ಚರ್ಮವು ಹೊಳೆಯುತ್ತದೆ. ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ. ಹಾಗಲಕಾಯಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.

ಬಾಣಸಿಗರು ಹೇಳುವುದಿಷ್ಟು: ಸ್ಥೂಲಕಾಯತೆಯನ್ನು ತಡೆಯುತ್ತದೆ ಮತ್ತು ರಕ್ತ ಮತ್ತು ಯಕೃತ್ತನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತದೆ. ಇದು ಉಸಿರಾಟದ ಕಾಯಿಲೆಗಳು ಮತ್ತು ಅಸ್ತಮಾದಂತಹ ಸಮಸ್ಯೆಗಳನ್ನು ತಡೆಗಟ್ಟುವ ಜೊತೆಗೆ ಹಾಗಲಕಾಯಿ ವಿವಿಧ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ರಕ್ತಹೀನತೆಯನ್ನು ತಡೆಯುತ್ತದೆ ಮತ್ತು ಕೆಲವು ರೀತಿಯ ಕ್ಯಾನ್ಸರ್ ಅನ್ನು ಸಹ ತಡೆಯುತ್ತದೆ. ಮಧುಮೇಹಿಗಳು ಪ್ರತಿದಿನ ಅರ್ಧ ಚಮಚ ಹಾಗಲಕಾಯಿ ರಸವನ್ನು ಕುಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ. ಶುಂಠಿ, ಬೆಳ್ಳುಳ್ಳಿ, ಎಳ್ಳು, ಪಲ್ಯ, ತೆಂಗಿನಕಾಯಿಯಂತಹ ಆಹಾರ ಪದಾರ್ಥಗಳ ಜೊತೆ ಸೇರಿಸಿ ಹಾಗಲಕಾಯಿ ಸೇವಿಸಿದರೆ ಅದ್ಭುತ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ಬಾಣಸಿಗರು.

ಕಷ್ಟಪಟ್ಟು ತಿನ್ನುವುದು ಡೇಂಜರ್​: ಹಾಗಲಕಾಯಿಯಲ್ಲಿ ಅನೇಕ ಸದ್ಗುಣಗಳಿದ್ದರೂ ಅತಿಯಾಗಿ ಬಲವಂತವಾಗಿ ತಿನ್ನುವುದು ವ್ಯರ್ಥ. ಹಾಗೆ ಮಾಡಿದರೆ ವಾಂತಿ, ಭೇದಿಯಂತಹ ಸಮಸ್ಯೆಗಳು ಬರುವ ಅಪಾಯವಿದೆ. ಅದರಲ್ಲೂ ಗರ್ಭಿಣಿಯರು ಹಾಗಲಕಾಯಿ ತಿನ್ನದಿರುವುದು ಒಳ್ಳೆಯದು. ಇವುಗಳಲ್ಲಿರುವ ಮೆಮೊಚೆರಿನ್ ಮಕ್ಕಳ ಆರೋಗ್ಯಕ್ಕೆ ತುಂಬಾ ಆಗುತ್ತದೆ. ನಿತ್ಯ ಹಾಗಲಕಾಯಿಯನ್ನು ಸೇವಿಸುವುದರಿಂದ ಹೊಟ್ಟೆನೋವು ಅಥವಾ ಇತರ ಸಮಸ್ಯೆಗಳನ್ನು ತಡೆಯಬಹುದು. ಹಾಗಲಕಾಯಿಯನ್ನು ದಿನವೂ ಸೇವಿಸಬೇಡಿ, ಆಗಾಗ ಸೇವಿಸಿದರೆ ಉತ್ತಮ. ಬಿಟ್ಟುಬಿಡದೇ ನಿತ್ಯ ಸೇವನೆ ಮಾಡಿದರೆ ಹಾಗಲಕಾಯಿಯಲ್ಲಿನ ಲೆಕ್ಟಿನ್ ಯಕೃತ್ತಿಗೆ ಹಾನಿಯನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.

ಓದುಗರ ಗಮನಕ್ಕೆ: ಈ ಲೇಖನದಲ್ಲಿ ನಿಮಗೆ ಒದಗಿಸಲಾದ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳು ನಿಮ್ಮ ತಿಳಿವಳಿಕೆಗೆ ಮಾತ್ರ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ತಲುಪಿಸಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಕಡಿಮೆ ಉಪ್ಪು ತಿನ್ನಿ ಹಾಳಾದ ಕಿಡ್ನಿ ಮೊದಲಿನಂತೆ ಮಾಡಿಕೊಳ್ಳಿ: ವೈದ್ಯರ ಸಂಶೋಧನೆಯಲ್ಲಿ ಬಹಿರಂಗ - Kidney Health Tips

ETV Bharat Logo

Copyright © 2024 Ushodaya Enterprises Pvt. Ltd., All Rights Reserved.