Best Foods to reduce Sleeplessness: ಇಂದಿನ ಆಧುನಿಕ ಯುಗದ ಬದಲಾದ ಜೀವನಶೈಲಿಯಿಂದಾಗಿ ಅನೇಕ ಜನರು ನೆಮ್ಮದಿಯಿಂದ ನಿದ್ರೆ ಮಾಡುವುದನ್ನೇ ಬಿಟ್ಟಿದ್ದಾರೆ. ನಿದ್ರೆಯ ಕೊರತೆಯಿಂದಾಗಿ ಜನರು ಅಧಿಕ ತೂಕ, ಬಿಪಿ ಮತ್ತು ಮಧುಮೇಹದಂತಹ ಅನೇಕ ರೀತಿಯ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ, ರಾತ್ರಿ ವೇಳೆ ಹೆಚ್ಚು ಫೋನ್ ವೀಕ್ಷಿಸಿಸುವುದು, ಒತ್ತಡ, ಆತಂಕ.. ಇವೆಲ್ಲವೂ ಕೂಡ ನಿದ್ರಾಹೀನತೆಗೆ ಕಾರಣವಾಗಿವೆ. ಆದರೆ, ಇವುಗಳಷ್ಟೇ ಅಲ್ಲ ನಾವು ಸೇವಿಸುವ ಆಹಾರ ಸಹ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.
ಪೌಷ್ಠಿಕ ವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಡಾ.ಎರಿಕಾ ಜಾನ್ಸನ್ ಅವರು, ''ನಿರ್ದಿಷ್ಟವಾಗಿ ದೈನಂದಿನ ಆಹಾರ ಪದ್ಧತಿಯು ನಿದ್ರಾಹೀನತೆಗೆ ಕಾರಣವಾಗುತ್ತದೆ. ಮತ್ತು ದೀರ್ಘಾವಧಿಯಲ್ಲಿ ನಿದ್ರಾಹೀನತೆ ಮತ್ತು ನಿದ್ರೆಯ ಸಮಯದಲ್ಲಿ ಉಸಿರುಕಟ್ಟುವಿಕೆಯಂತಹ ಅಸ್ವಸ್ಥತೆಗಳನ್ನು ಉಂಟುಮಾಡುತ್ತದೆ'' ಎಂದು ಬಹಿರಂಗಪಡಿಸಿದ್ದಾರೆ. ಮಿಚಿಗನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯಿಂದ ನಡೆದ ಅಧ್ಯಯನದಲ್ಲಿ ಇದು ಸ್ಪಷ್ಟವಾಗಿ ತಿಳಿದಿದೆ. ನಿದ್ರಾಹೀನತೆ ದೂರ ಮಾಡುವ ನಿಟ್ಟಿನಲ್ಲಿ ಸೂಚಿಸಲಾದ ಕ್ರಮಗಳದಲ್ಲಿ ತೆಗೆದುಕೊಳ್ಳುವ ಆಹಾರಗಳಿಂದ ನೀವು ಆರಾಮಾಗಿ ಮಲಗಬಹುದು ಎಂದು ವಿವರಿಸಲಾಗಿದೆ. ವೈದ್ಯರು ಸೂಚಿಸಿದ ಆಹಾರದ ಪದ್ಧತಿಯ ಕುರಿತ ಮಾಹಿತಿಯನ್ನು ತಿಳಿಯೋಣ.
ಅಮೆರಿಕದಲ್ಲಿ 18 ವರ್ಷದ ಯುವಕರ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ಸ್ವಲ್ಪ ಪ್ರಮಾಣದ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿದವರು ಕಡಿಮೆ ಸಮಯ ನಿದ್ರೆ ಮಾಡುತ್ತಾರೆ. ಮತ್ತು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿದವರು ನಿರಾಳವಾಗಿ ನಿದ್ದೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ಸರಿಯಾದ ಆಹಾರ ಸೇವನೆ ಮತ್ತು ನಿದ್ರೆ ಕೂಡ ಪರಸ್ಪರ ಅವಲಂಬಿತವಾಗಿದೆ ಎಂದು ವಿವರಿಸಲಾಗಿದೆ. ಉತ್ತಮ ಆಹಾರ ಸೇವನೆ ಮಾಡುವವರು ನೆಮ್ಮದಿಯಾಗಿ ಮಲಗಬಹುದು ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿದೆ.
ತಿನ್ನಬಾರದಂತಹ ಆಹಾರಗಳು:
- ಸಂಸ್ಕರಿಸಿದ ಆಹಾರ
- ವೆಪ್ಸ್
- ಬರ್ಗರ್ಸ್
- ಸ್ಯಾಚುರೇಟೆಡ್ ಕೊಬ್ಬುಗಳು
- ಬಿಳಿ ಬ್ರೆಡ್
- ಪಾಸ್ತಾ
- ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು
- ಮದ್ಯ
- ಕೆಫೀನ್
- ರಾಸಾಯನಿಕಗಳಿಂದ ಬೆಳೆಸಿದ ಆಹಾರಗಳು
ಉತ್ತಮ ನಿದ್ರೆಗಾಗಿ ಸೇವಿಸಬೇಕಾದ ಆಹಾರಗಳು:
- ಫೈಬರ್ನಲ್ಲಿ ಸಮೃದ್ಧವಾಗಿರುವ ಆಹಾರಗಳು
- ಗ್ರೀನ್ಸ್
- ಆಲಿವ್ ಎಣ್ಣೆ
- ಮಾಂಸ
- ಮೀನು
- ಡೈರಿ ಪದಾರ್ಥಗಳು
- ಕಿವಿ ಹಣ್ಣುಗಳು
- ಚೆರ್ರಿಗಳು
- ಬೆರ್ರಿ ಹಣ್ಣುಗಳು
- ಕಬ್ಬಿಣ ಮತ್ತು ವಿಟಮಿನ್ ಇರುವ ಆಹಾರ
ರಾತ್ರಿ ತಡವಾಗಿ ತಿನ್ನುವುದು ಮಾತ್ರವಲ್ಲ, ಸಂಸ್ಕರಿಸಿದ ಆಹಾರವನ್ನು ಸೇವಿಸುವುದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆರಾಮಾಗಿ ಮಲಗಲು ವಿಶೇಷವಾದ ಆಹಾರ ಪಾನೀಯಗಳಿಲ್ಲ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಬದಲಾವಣೆಯಿಂದ ಮಾತ್ರ ಸಾಧ್ಯ. ಆಲ್ಕೋಹಾಲ್ ಮತ್ತು ಕೆಫೀನ್‌ನಂತಹ ಆಹಾರಗಳನ್ನು ತ್ಯಜಿಸಬೇಕು. ಮಲಗುವ 3 ಗಂಟೆಗಳ ಮೊದಲು ಹೆಚ್ಚು ಆಹಾರವನ್ನು ಸೇವಿಸಬಾರದು ಎಂದು ಸೂಚಿಸಲಾಗುತ್ತದೆ. ಇದಲ್ಲದೇ ರಾತ್ರಿ ವೇಳೆ ಫೋನ್, ಕಂಪ್ಯೂಟರ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಬಾರದು ಎಂದು ಡಾ.ಎರಿಕಾ ಜಾನ್ಸನ್ ಸಲಹೆ ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ಗೆ ಸಂಪರ್ಕಿಸಬಹುದು:
https://sph.umich.edu/pursuit/2024posts/best-diet-for-healthy-sleep.html
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.