ಹೈದರಾಬಾದ್: ಕಿರುನೆಲ್ಲಿಕಾಯಿ ಅಥವಾ ನೆಲ ನೆಲ್ಲಿಕಾಯಿ ಗಿಡ (ಫಿಲಾಂಥಸ್ ನಿರೂರಿ) ಅನ್ನು ಸಂಸ್ಕೃತದಲ್ಲಿ 'ಡುಕಾಂಗ್ ಅನಕ್' ಮತ್ತು 'ಭೂಮಿ ಅಮಲಕಿ' ಎಂದೂ ಕರೆಯಲಾಗುತ್ತದೆ. ನೆಲ ನೆಲ್ಲಿಕಾಯಿ ಸಸ್ಯವು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈ ಸಸ್ಯವು ಆಯುರ್ವೇದದ ಔಷಧಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಸಸ್ಯ ತುಂಬಾ ಚಿಕ್ಕದಾಗಿದ್ದರೂ, ಇದರ ಲಾಭಗಳು ಅನೇಕ ಇವೆ. ಈ ಸಸ್ಯವು ಮಳೆಗಾಲದಲ್ಲಿ ವಿವಿಧೆಡೆ ತಾನಾಗಿಯೇ ಬೆಳೆಯುತ್ತದೆ. ಈ ಸಸ್ಯವು ವರ್ಷವಿಡೀ ನೆರಳಿನ ಮತ್ತು ತೇವಾಂಶವುಳ್ಳ ಸ್ಥಳಗಳಲ್ಲಿ ಕಂಡು ಬರುತ್ತದೆ. ಗಿಡ ಎಲೆಗಳನ್ನು ಒಣಗಿಸಿದ ನಂತರವೂ ಬಳಸಲಾಗುತ್ತದೆ. ಗಿಡಮೂಲಿಕೆಗಳ ಅಂಗಡಿಗಳಲ್ಲಿಯೂ ಇದು ದೊರೆಯುತ್ತದೆ.
ನೆಲ ನೆಲ್ಲಿಕಾಯಿ ಯಕೃತ್ತಿನ ಅಸ್ವಸ್ಥತೆಗಳಿಗೆ ರಾಮಬಾಣವಾಗಿದೆ. ಯಕೃತ್ತಿಗೆ ಎದುರಾಗುವ ಕಾಯಿಲೆಗಳು ತಡೆಯಲು ಸಹಾಯ ಮಾಡುತ್ತದೆ ಮತ್ತು ಅದರ ಹೆಪಟೊಪ್ರೊಟೆಕ್ಟಿವ್, ಆ್ಯಂಟಿಆಕ್ಸಿಡೆಂಟ್ ಮತ್ತು ಆ್ಯಂಟಿವೈರಲ್ನಿಂದ ಯಕೃತ್ತಿಗೆ ಯಾವುದೇ ಹಾನಿಯನ್ನು ಸರಿಪಡಿಸುತ್ತದೆ. ನೆಲ ನೆಲ್ಲಿಕಾಯಿ ಹೈಡ್ರೋಕ್ಲೋರಿಕ್ ಆ್ಯಸಿಡ್ (ಗ್ಯಾಸ್ಟ್ರಿಕ್ ಆಮ್ಲ) ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಅತಿಯಾದ ಗ್ಯಾಸ್ಟ್ರಿಕ್ ಆಮ್ಲದಿಂದ ಉಂಟಾಗುವ ಹಾನಿಯಿಂದ ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ. ನೆಲ ನೆಲ್ಲಿಕಾಯಿ ಅದರ ಮೂತ್ರವರ್ಧಕ ಗುಣಲಕ್ಷಣಗಳಿಂದಾಗಿ ಮೂತ್ರಪಿಂಡದ ಕಲ್ಲು ರಚನೆಯ ಅಪಾಯವನ್ನು ಕಡಿಮೆ ಮಾಡಬಹುದು. ಮೂತ್ರಪಿಂಡದ ಕಲ್ಲುಗಳನ್ನು ರೂಪಿಸುವ ಲವಣಗಳನ್ನು (ಪ್ರಾಥಮಿಕವಾಗಿ ಆಕ್ಸಲೇಟ್ ಸ್ಫಟಿಕಗಳು) ತೆಗೆದುಹಾಕುವಿಕೆಯನ್ನು ಉತ್ತೇಜಿಸುತ್ತದೆ.
ಆಯುರ್ವೇದದ ಪ್ರಕಾರ, ನೆಲ ನೆಲ್ಲಿಕಾಯಿಯನ್ನು ಅದರ ಪಿತ್ತರಸ ಸಮತೋಲನದ ಗುಣಲಕ್ಷಣಗಳಿಂದಾಗಿ ಅಜೀರ್ಣ ಮತ್ತು ಆಮ್ಲೀಯತೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಮಧುಮೇಹಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಕಹಿ ಆಗಿರುವುದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಿಂದ ತಯಾರಿಸಿದ ಔಷಧವನ್ನು ಅತ್ಯುತ್ತಮ ಲಿವರ್ ಟಾನಿಕ್ ಎನ್ನಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು. ಇದು ಪಿತ್ತಜನಕಾಂಗವನ್ನು ಆರೋಗ್ಯಕರವಾಗಿರಿಸುವುದು ಮಾತ್ರವಲ್ಲದೇ ಅದರ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಕಾಮಾಲೆಯಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ನೆಲ ನೆಲ್ಲಿಕಾಯಿಯನ್ನು ಬಳಸುವುದರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ನೆಲ ನೆಲ್ಲಿಕಾಯಿದಲ್ಲಿದೆ ವಿಟಮಿನ್-ಸಿ: ನೆಲ ನೆಲ್ಲಿಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇರುವುದರಿಂದ, ಇದು ದೇಹವನ್ನು ಸಂಪೂರ್ಣವಾಗಿ ಆರೋಗ್ಯಕರವಾಗಿರಿಸುತ್ತದೆ. ಪಿತ್ತಜನಕಾಂಗದ ತೊಂದರೆಗಳು, ಜ್ವರ ಮತ್ತು ಕಾಮಾಲೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ. ಇವುಗಳಲ್ಲಿರುವ ಉರಿಯೂತ ನಿವಾರಕ, ಆ್ಯಂಟಿ ಬಯೋಟಿಕ್ ಮತ್ತು ಅಸ್ತಮಾ ನಿವಾರಕ ಗುಣಗಳು ಉಸಿರಾಟದ ತೊಂದರೆಗಳನ್ನು ತಡೆಯುತ್ತದೆ. ಇದರಿಂದ ಶೀತ, ಗಂಟಲು ನೋವು, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳು ಬರುವುದಿಲ್ಲ. ಇದು ಎದೆ ಮತ್ತು ಮೂಗಿನ ಕುಳಿಗಳ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಮತ್ತು ಸುಲಭವಾಗಿ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ ಮತ್ತು ಚರ್ಮದ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ನೆಲ ನೆಲ್ಲಿಕಾಯಿ ಬಹುತೇಕ ಜನರ ದೇಹಕ್ಕೆ ಹೊಂದಿಕೊಳ್ಳುತ್ತದೆ. ನಿಮ್ಮ ಆರೋಗ್ಯದ ದಿನಚರಿಯಲ್ಲಿ ನೆಲ ನೆಲ್ಲಿಕಾಯಿಯನ್ನು ಸೇರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ. ಅದರಲ್ಲೂ ವಿಶೇಷವಾಗಿ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ಪಡೆಯಬೇಕು.
ರಕ್ತವನ್ನು ಶುದ್ಧೀಕರಿಸುವ ಗುಣ: ವೈದ್ಯರ ಪ್ರಕಾರ, ಭೂಮಿ ಆಮ್ಲಾದ 1-2 ಮಾತ್ರೆಗಳು ಅಥವಾ ಕ್ಯಾಪ್ಸುಲ್ಸ್ ಅನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿರುವ ಚರ್ಮದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ. ಭೂಮಿ ಆಮ್ಲಾ ಪೌಡರ್ ಅನ್ನು ನೀರಿನೊಂದಿಗೆ ಸೇವಿಸುವುದರಿಂದ ಕೂದಲು ಉದುರುವುದನ್ನು ತಡೆಯಲು ಮತ್ತು ಕೂದಲು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ.
ಯಕೃತ್ತಿನ ಅಸ್ವಸ್ಥತೆ: ಯಕೃತ್ತಿನ ಉರಿಯೂತ, ಕಾಮಾಲೆ ಮತ್ತು ದುರ್ಬಲ ಯಕೃತ್ತಿನ ಕ್ರಿಯೆಯಂತಹ ಯಕೃತ್ತಿನ ಸಮಸ್ಯೆಗಳ ನಿರ್ವಹಣೆಗೆ ಭೂಮಿ ಆಮ್ಲಾ ಅತ್ಯುತ್ತಮ ಮೂಲಿಕೆಯಾಗಿದೆ. ಭೂಮಿ ಆಮ್ಲಾ ಯಕೃತ್ತನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಅಜೀರ್ಣ ಮತ್ತು ಆಮ್ಲೀಯತೆ: ನೆಲ ನೆಲ್ಲಿಕಾಯಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ಗುಣಲಕ್ಷಣಗಳಿಂದಾಗಿ ಅಜೀರ್ಣ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣ ಹೊಂದಿದೆ.
ಹೆಚ್ಚಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತೆ: ನೆಲ ನೆಲ್ಲಿಕಾಯಿ ತನ್ನ ಹುಳಿ, ಕಹಿ ಮತ್ತು ಸಂಕೋಚಕ ಗುಣಲಕ್ಷಣಗಳಿಂದಾಗಿ ಹೆಚ್ಚಿನ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ. ಇದು ಚಯಾಪಚಯವನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚರ್ಮದ ಅಸ್ವಸ್ಥತೆ ತಗ್ಗಿಸುತ್ತೆ: ಚರ್ಮದ ಕಾಯಿಲೆಗಳನ್ನು ಹೋಗಲಾಡಿಸಲು ಮತ್ತು ರಕ್ತ ಶುದ್ಧೀಕರಿಸಲು ಪೂರಕವಾಗಿದೆ. ಹುಳಿ, ಕಹಿ ರಸ ಪಿತ್ತದ ಸಮತೋಲನಕ್ಕೆ ಪೂರಕವಾಗಿದೆ. ಚರ್ಮದ ಅಸ್ವಸ್ಥತೆಗಳನ್ನು ಕಡಿಮೆ ಮಾಡುತ್ತದೆ.
ಕೆಮ್ಮು ಮತ್ತು ಶೀತ ಕಡಿಮೆ ಮಾಡುತ್ತೆ: ನೆಲ ನೆಲ್ಲಿಕಾಯಿ ಕೆಮ್ಮು ಮತ್ತು ಶೀತ ಕಫವನ್ನು ಸಮತೋಲನಗೊಳಿಸುವ ಗುಣವನ್ನು ಹೊಂದಿದೆ. ಇದರ ಪರಿಣಾಮವಾಗಿ ಇದು ಕೆಮ್ಮು, ಅಸ್ತಮಾ, ಉಸಿರಾಟದ ತೊಂದರೆ ಮತ್ತು ಬಿಕ್ಕಳಿಕೆ ಕಡಿಮೆ ಮಾಡುತ್ತದೆ.
ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತೆ: ನೆಲ ನೆಲ್ಲಿಕಾಯಿ ಜ್ವರ ಕಡಿಮೆ ಮಾಡುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ.
ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ಗೆ ಸಂಪರ್ಕಿಸಬಹುದು: https://www.ncbi.nlm.nih.gov/pmc/articles/PMC6092661/
ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.