ETV Bharat / health

ವಯಸ್ಸಿನಲ್ಲಿ ಕಿರಿಯರಿದ್ದರೂ ಮುದುಕರಂತೆ ಕಾಣ್ತೀರಾ?: ಜಪಾನೀಸ್ ಆಹಾರ ಪದ್ಧತಿ ಅನುಸರಿಸಿ ನೋಡಿ - BENEFITS OF JAPANESE FOOD HABITS

Benefits of Japanese Food Habits: ಅನೇಕ ಕಾರಣಗಳಿಂದಾಗಿ ಚಿಕ್ಕ ವಯಸ್ಸಿನ ಕೆಲವರು ತುಂಬಾ ವಯಸ್ಸಾದಂತೆ ಕಾಣಿಸುತ್ತಾರೆ. ಈ ವಿಧಾನಗಳನ್ನು ಅನುಸರಿಸಿದರೆ, ಈ ಸಮಸ್ಯೆಯು ಕಡಿಮೆಯಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

JAPANESE FOOD HABITS IN KANNADA  JAPANESE DIET VS WESTERN DIET STUDY  BENEFITS OF JAPANESE FOOD HABITS  JAPANESE DIET VS WESTERN DIET
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Lifestyle Team

Published : Dec 6, 2024, 8:03 PM IST

Benefits of Japanese Food Habits: ಕೆಲವೇ ಜನರು ವಯಸ್ಸಾದಾಗಲೂ ಯುವಕರಂತೆ ಕಾಣುತ್ತಾರೆ. ಕೆಲವರ ವಯಸ್ಸಾದ ಚಿಕ್ಕದಿದ್ದರೂ ಮುದುಕರಂತೆ ಕಾಣುತ್ತಾರೆ. ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ, ಜೆನೆಟಿಕ್ಸ್, ದೈಹಿಕ ಚಟುವಟಿಕೆಯ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ಆದರೆ, ವಯಸ್ಸಾದ ನಂತರವೂ ಯಂಗ್ ಆಗಿ ಹಾಗೂ ಫಿಟ್ ಆಗಿ ಕಾಣಲು ಜಪಾನೀಸ್ ಆಹಾರ ವಿಧಾನಗಳನ್ನು ಅನುಸರಿಸಿ ನೋಡಿ ಎನ್ನುತ್ತಾರೆ ತಜ್ಞರು. ಏಕೆಂದರೆ ಜಪಾನಿನ ವಿಧಾನಗಳನ್ನು ವಿಶ್ವದ ಅತ್ಯುತ್ತಮ ಆಹಾರ ನಿಮಯಗಳಿಗೆ ಉತ್ತಮ ಖ್ಯಾತಿಯನ್ನು ಪಡೆದಿದೆ. ವಿಜ್ಞಾನಿಗಳು ಕೂಡ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಜಪಾನಿ ಪದ್ಧತಿಯಲ್ಲಿ ಆಹಾರ ಸೇವಿಸಿದರೆ ಆರೋಗ್ಯದ ಜೊತೆಗೆ ಯಂಗ್ ಆಗಿ ಕಾಣುತ್ತೀರಿ ಎಂದು ಸಂಶೋಧಕರು ಮಾಹಿತಿ ನೀಡುತ್ತಾರೆ.

ಸಂಶೋಧನೆ ಏನು ಹೇಳುತ್ತೆ?: ನಿಮ್ಮ ಮನೆಯವರ ದೇಹದ ವಯಸ್ಸು ನಿಮ್ಮ ಅಡುಗೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಜಪಾನೀಸ್ ಶೈಲಿಯು ವಿಶ್ವದ ಅತ್ಯುತ್ತಮ ಆಹಾರ ಪದ್ಧತಿಗಳಲ್ಲಿ ಒಂದಾಗಿದೆ. ಅಮೆರಿಕ, ಹಂಗೇರಿ ಮತ್ತು ಜಪಾನ್‌ನ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ವಿಷಯವು ಮತ್ತೊಮ್ಮೆ ಸಾಬೀತುಪಡಿಸಲಾಗಿದೆ.

ಈ ಸಂಶೋಧನೆಯಲ್ಲಿ ಪಾಶ್ಚಿಮಾತ್ಯ ದೇಶಗಳ ಆಹಾರ ಪದ್ಧತಿಯನ್ನು ಹೋಲಿಕೆ ಮಾಡಲಾಗಿದೆ. ಅಂದರೆ, ಅವರು ಹೆಚ್ಚಿನ ಶೇಕಡಾವಾರು ಮಾಂಸ, ಸಂಸ್ಕರಿಸಿದ ಮಾಂಸ ಉತ್ಪನ್ನಗಳು, ಮೊಟ್ಟೆಗಳು ಮತ್ತು ಮೇಯನೇಸ್ ಸಂಬಂಧಿತ ಉತ್ಪನ್ನಗಳನ್ನು ಸೇವಿಸುವವರನ್ನು ಹಾಗೂ ಜಪಾನೀಸ್ ಆಹಾರ ಪದ್ಧತಿ ಪ್ರಕಾರವಾಗಿ, ಬಹಳಷ್ಟು ತರಕಾರಿಗಳು, ಹಣ್ಣುಗಳು, ಸಮುದ್ರಾಹಾರ ಮತ್ತು ಸೋಯಾ ಉತ್ಪನ್ನಗಳನ್ನು ಸೇವಿಸುವವರನ್ನು ಜೊತೆಗೆ ಹೋಲಿಕೆ ಮಾಡಲಾಗಿದೆ. ಅವರ ದೈಹಿಕ ವಯಸ್ಸನ್ನು ಪರಿಗಣಿಸಿದಾಗ, ಜಪಾನಿನ ಆಹಾರವನ್ನು ಅನುಸರಿಸುವವರು ತಮ್ಮ ನಿಜವಾದ ವಯಸ್ಸಿಗಿಂತ ಚಿಕ್ಕವರಾಗಿ ಕಾಣುತ್ತಾರೆ. ಅಧಿಕ ತೂಕ ಹೊಂದಿರುವ ಹಾಗೂ ವ್ಯಾಯಾಮ ಮಾಡದವರಿಗೆ ಆಹಾರವು ಒಳ್ಳೆಯದು ಎಂದು ಕಂಡುಬಂದಿದೆ ಎಂದು ಸಂಶೋಧನೆಯಲ್ಲಿ ವಿವರಿಸಲಾಗಿದೆ.

ಜಪಾನಿಯರ ಆಹಾರ ಪದ್ಧತಿ ಹೇಗಿರುತ್ತೆ?:

ಮೀನು: ಸಾಲ್ಮನ್ ಹಾಗೂ ಟ್ಯೂನ್ ಮೀನುಗಳಲ್ಲಿ ಒಮೆಗಾ- 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇವು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಒಮೆಗಾ -3 ಕೊಬ್ಬಿನಾಮ್ಲಗಳು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. NIH ಸದಸ್ಯರ ಸಮಿತಿಯು ಕೂಡ ಇದನ್ನು ಸ್ಪಷ್ಟಪಡಿಸಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಸೋಯಾ ಉತ್ಪನ್ನಗಳು: ತೋಫು ಮತ್ತು ಎಡಮೇಮ್​ನಂತಹ ಸೋಯಾ ಉತ್ಪನ್ನಗಳು ಪ್ರೋಟೀನ್ ಮತ್ತು ಕಬ್ಬಿಣ ಸೇರಿದಂತೆ ಇತರ ಪ್ರಮುಖ ಪೋಷಕಾಂಶಗಳ ಉತ್ತಮ ಮೂಲಗಳಾಗಿವೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ತರಕಾರಿ, ಹಣ್ಣುಗಳು: ಜಪಾನಿನ ಜನರು ಪ್ರತಿದಿನ ತಮ್ಮ ಆಹಾರದ ಭಾಗವಾಗಿ ವಿವಿಧ ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸುತ್ತಾರೆ. ವಿಶೇಷವಾಗಿ ಪಾಲಕ್​ ಸೇರಿದಂತೆ ಹಸಿರು ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ದೇಹದ ಜೀವಕೋಶಗಳನ್ನು ರಕ್ಷಿಸುತ್ತವೆ. ಜೊತೆಗೆ ವಯಸ್ಸಾಗುವುದನ್ನು ತಡೆಯುತ್ತವೆ ಎಂದು ತಜ್ಞರು ತಿಳಿಸುತ್ತಾರೆ.

ಸಮುದ್ರ ಪಾಚಿ: ಸಮುದ್ರದ ಪಾಚಿಯನ್ನು ಕಡಲಕಳೆ ಎಂದು ಕರೆಯಲಾಗುತ್ತದೆ. ಇದು ತುಂಬಾ ಶಕ್ತಿಯುತ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಎ, ಸಿ, ಇ, ಕ್ಯಾರೊಟಿನಾಯ್ಡ್‌ಗಳು ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಈ ಉತ್ಕರ್ಷಣ ನಿರೋಧಕಗಳು ದೇಹವನ್ನು ಜೀವಕೋಶದ ಹಾನಿಯಿಂದ ರಕ್ಷಣೆ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://pmc.ncbi.nlm.nih.gov/articles/PMC5400241/

ಓದುಗರಿಗೆ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಆಹಾರ ಪದ್ಧತಿ ಮತ್ತು ಸಾವಿನ ಅಪಾಯ: ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು?- ಹೀಗಿದೆ ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.