Ayurvedic Home Remedy To Reduce Indigestion: ಹೊಟ್ಟೆಯ ಸಮಸ್ಯೆ ಕೆಲವೊಮ್ಮೆ ತುಂಬಾ ತ್ರಾಸದಾಯಕವಾಗಿರುತ್ತದೆ. ಅದರಲ್ಲೂ ಅಜೀರ್ಣವಾದರೆ ಹೇಳಲಾಗದಷ್ಟು ನೋವು. ಊಟ ಮಾಡಿದ ನಂತರ ಹೊಟ್ಟೆ ಉಬ್ಬರಿಸಿಕೊಂಡು ಕಲ್ಲಿನಂತಾಗುತ್ತದೆ. ಇದರಿಂದ ಓಡಾಡಲೂ ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡುವುದೂ ಕಷ್ಟವೆನಿಸುತ್ತದೆ.
ಆದರೆ, ಆಯುರ್ವೇದದಲ್ಲಿ ಈ ಸಮಸ್ಯೆಗೆ ಉತ್ತಮ ಪರಿಹಾರವಿದೆ ಎನ್ನುತ್ತಾರೆ ಪ್ರಮುಖ ಆಯುರ್ವೇದ ವೈದ್ಯೆ ಗಾಯತ್ರಿ ದೇವಿ. ಆಹಾರ ಸೇವನೆಯ ಬಳಿಕ ಆಗುವ ಅಜೀರ್ಣದಿಂದ ಮುಕ್ತಿ ಪಡೆಯಬಹುದು ಎಂದು ಅವರು ಹೇಳುತ್ತಾರೆ. ಈ ಔಷಧಿಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನವನ್ನು ತಿಳಿಯೋಣ.
ಔಷಧ ಸಿದ್ಧಪಡಿಸಲು ಬೇಕಾಗುವ ಪದಾರ್ಥಗಳು:
- 250 ಗ್ರಾಂ ಹಸಿ ಶುಂಠಿ ಪೇಸ್ಟ್
- 275 ಗ್ರಾಂ ಕಲ್ಲು ಸಕ್ಕರೆ ಪುಡಿ
- 5 ಗ್ರಾಂ ಒಣ ಶುಂಠಿ ಪುಡಿ
- 10 ಗ್ರಾಂ ಕಡಲೆ ಪುಡಿ
- 10 ಗ್ರಾಂ ಕಾಳು ಮೆಣಸಿನ ಪುಡಿ
- 5 ಗ್ರಾಂ ಏಲಕ್ಕಿ ಪುಡಿ
- ಜೇನು
ಔಷಧ ಸಿದ್ಧಪಡಿಸುವುದು ಹೇಗೆ?:
- ಸ್ಟವ್ ಹೊತ್ತಿಸಿ ಒಂದು ಪಾತ್ರೆಯಲ್ಲಿ ಹಸಿ ಶುಂಠಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಬೇಯಿಸಿ.
- ನಂತರ ಕಲ್ಲು ಸಕ್ಕರೆ ಪುಡಿ ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಮಿಶ್ರಣ ಮಾಡಿ.
- ಒಣ ಶುಂಠಿ ಪುಡಿ, ಮೆಣಸು, ಏಲಕ್ಕಿ ಪುಡಿ ಮತ್ತು ಪಿಪ್ಪಲ್ ಪುಡಿ ಸೇರಿಸಿ.
- ಈ ಎಲ್ಲಾ ಪುಡಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ, ಸ್ಟೌವ್ ಆಫ್ ಮಾಡಿ ಮತ್ತು ಈ ಮಿಶ್ರಣವನ್ನು ಪಕ್ಕಕ್ಕಿರಿಸಿ. ಇದಕ್ಕೆ ಜೇನುತುಪ್ಪ ಸೇರಿಸಿ.
- ಅಜೀರ್ಣದಿಂದ ಬಳಲುತ್ತಿರುವವರು ಹಾಗೂ ಮಲಬದ್ಧತೆ ಇರುವವರು ಈ ಔಷಧಿಯನ್ನು ಸೇವಿಸಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.
- ಅಜೀರ್ಣ ಸಮಸ್ಯೆಯನ್ನು ತೊಡೆದುಹಾಕಲು ಆಹಾರಕ್ಕೆ 10 ನಿಮಿಷಗಳ ಮೊದಲು ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚ ಸೇವಿಸಲು ಸೂಚಿಸಲಾಗುತ್ತದೆ.
ಔಷಧಕ್ಕೆ ಬಳಸಲಾಗಿರುವ ಪದಾರ್ಥಗಳಿಂದ ದೊರೆಯುವ ಲಾಭಗಳೇನು?:
ಶುಂಠಿ: ನಮ್ಮ ಹಿರಿಯರು ಸಾಮಾನ್ಯವಾಗಿ ಅಜೀರ್ಣವಾದಾಗ ಶುಂಠಿ ತಿನ್ನಲು ಹೇಳುತ್ತಾರೆ. ಏಕೆಂದರೆ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಕಡಲೆ: ಕಡಲೆಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಗುಣಗಳಿವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದರಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ.
ಕಾಳುಮೆಣಸು: ಕಾಳುಮೆಣಸನ್ನು ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಸೋಂಕುಗಳನ್ನು ಕಡಿಮೆ ಮಾಡಲು ಮತ್ತು ದೇಹದಿಂದ ಕಲ್ಮಶಗಳನ್ನು ತೆಗೆದುಹಾಕಲು ಅವುಗಳನ್ನು ಬಳಸಲಾಗುತ್ತದೆ. ಇದು ಅಜೀರ್ಣದ ಸಮಸ್ಯೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಏಲಕ್ಕಿ: ಆಯುರ್ವೇದ ತಜ್ಞರು ಹೇಳುವಂತೆ ಮಸಾಲೆ ಏಲಕ್ಕಿ ಅಜೀರ್ಣ ಚಿಕಿತ್ಸೆಗೆ ಒಳ್ಳೆಯದು.