ETV Bharat / health

ಇಡ್ಲಿ ಮತ್ತು ದೋಸೆ ಹಿಟ್ಟು ಫ್ರಿಡ್ಜ್ ನಲ್ಲಿಟ್ಟರೂ ಹಾಳಾಗುತ್ತಿದೆಯಾ?; ಹಾಗಾದರೆ ಈ ಸಲಹೆಗಳನ್ನು ಪಾಲಿಸಿ ನೋಡಿ - Over Fermentation of Idli and Dosa - OVER FERMENTATION OF IDLI AND DOSA

Control Fermentation Of Idli Dosa Batter: ಅನೇಕರು ಒಂದು ವಾರಕ್ಕೆ ಸಾಕಾಗುವಷ್ಟು ಇಡ್ಲಿ ಮತ್ತು ದೋಸೆ ಹಿಟ್ಟು ರುಬ್ಬಿ ಫ್ರಿಡ್ಜ್​ನಲ್ಲಿಡುತ್ತಾರೆ. ಆದರೂ ಕೆಲವೊಮ್ಮೆ ಫ್ರಿಡ್ಜ್​​ ನಲ್ಲಿರುವ ಹಿಟ್ಟು ಹುಳಿಯಾಗುತ್ತದೆ. ಈ ರೀತಿ ಹಿಟ್ಟು ಹಾಳಾಗದಂತೆ ತಪ್ಪಿಸಲು ಈ ಸಲಹೆಗಳನ್ನು ಪಾಲಿಸಿ ಎನ್ನುತ್ತಾರೆ ತಜ್ಞರು.

CONTROL FERMENTATION OF IDLI DOSA  TIPS FOR IDLI DOSA BATTER  AVOID OVER FERMENTATION OF IDLY  IDLI DOSA BATTER TIPS IN KANNADA
ಇಡ್ಲಿ ಮತ್ತು ದೋಸೆ ಹಿಟ್ಟು (ETV Bharat)
author img

By ETV Bharat Karnataka Team

Published : Jul 16, 2024, 7:17 PM IST

How to Avoid Over Fermentation of Idli and Dosa Batter : ಸಮಯದ ಅಭಾವದಿಂದಲೋ ಅಥವಾ ಮತ್ತೆ ಮತ್ತೆ ಮಾಡುವ ತಾಳ್ಮೆಯ ಕೊರತೆಯಿಂದಲೋ ಅನೇಕ ಮಹಿಳೆಯರು ವಾರಕ್ಕೆ ಸಾಕಾಗುವಷ್ಟು ಇಡ್ಲಿ ಮತ್ತು ದೋಸೆ ಹಿಟ್ಟನ್ನು ರೆಡಿ ಮಾಡಿ ಫ್ರಿಡ್ಜ್​ನಲ್ಲಿಡುತ್ತಾರೆ. ಫ್ರಿಡ್ಜ್​ನಲ್ಲಿ ಇಟ್ಟ ಹಿಟ್ಟು ಹಲವು ದಿನ ಫ್ರೆಶ್ ಆಗಿರುತ್ತದೆ. ಆದರೆ, ಹಿಟ್ಟನ್ನು ಫ್ರಿಡ್ಜ್​ನಲ್ಲಿಟ್ಟರೂ ದಿನಗಟ್ಟಲೆ ಬಳಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಏಕೆಂದರೆ ಹಿಟ್ಟನ್ನು ಫ್ರಿಡ್ಜ್​​​​ನಲ್ಲಿಟ್ಟರೂ ಹುಳಿಯಾಗುವ ಅಥವಾ ಹಳಸಿ ಹೋಗುವ ಪ್ರಕ್ರಿಯೆ ನಿಧಾನವಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಹಿಟ್ಟು ಹೆಚ್ಚು ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದರೆ, ರುಬ್ಬಿದ ಇಡ್ಲಿ ಮತ್ತು ದೋಸೆ ಹಿಟ್ಟಿನಲ್ಲಿ ಹುಳಿ ಬರದಂತೆ ಕೆಲವು ಸಲಹೆಗಳನ್ನು ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಹಿಟ್ಟು ಉಬ್ಬಲು ಎಷ್ಟು ಸಮಯ ಬೇಕು?: ರಾತ್ರಿ ಹಿಟ್ಟು ರುಬ್ಬಿ ಇಟ್ಟಾಗ ತಾನಾಗಿಯೇ ಉಬ್ಬುತ್ತದೆ. ಹಿಟ್ಟು ಸ್ವಲ್ಪ ತಣ್ಣಗಾದಾಗ ಹುಳಿ ಮಾಡಲು ಕೆಲವರು ಅಡಿಗೆ ಸೋಡಾವನ್ನು ಮೊದಲೇ ಉಪಯೋಗಿಸುತ್ತಾರಂತೆ. ಹಿಟ್ಟು ತುಂಬಾ ದಪ್ಪವಾಗಿದ್ದರೆ ಅಥವಾ ತುಂಬಾ ತೆಳುವಾಗಿದ್ದರೆ, ಅದು ಹೆಚ್ಚು ಹುದುಗಿದೆ ಎಂದು ಗುರುತಿಸಬೇಕು ಎಂದು ತಜ್ಞರು ಹೇಳುತ್ತಾರೆ. ಈ ಹಿಟ್ಟಿನಿಂದ ಮಾಡಿದ ಇಡ್ಲಿಗಳು ಅಥವಾ ದೋಸೆಗಳು ಗಟ್ಟಿಯಾಗುತ್ತವೆ ಮತ್ತು ರುಚಿ ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ.

ಅಡ್ಡ ಪರಿಣಾಮಗಳು: ಹುಳಿ ಹಿಟ್ಟನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯ ಉರಿಯೂತ, ಡಿಸ್ಪೆಪ್ಸಿಯಾ, ಸೋಂಕಿನಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಹಿಟ್ಟಿನ ರಚನೆಯಲ್ಲಿ ಬದಲಾವಣೆಗಳ ಜೊತೆಗೆ, ಬಾಯಿಗೆ ಹುಳಿ ಹುಳಿಯಾಗುತ್ತಿದ್ದರೆ, ವಾಸನೆಯಲ್ಲಿ ವ್ಯತ್ಯಾಸವಿದ್ದರೆ, ಹಿಟ್ಟಿನ ಮೇಲ್ಮೈಯಲ್ಲಿ ಎಣ್ಣೆಯಂತಹ ಪದರ ಇದ್ದರೆ, ಅದು ಹಳಸಿ ಹೋಗಿದೆ ಎಂದರ್ಥ. ಅಂತಹ ಹಿಟ್ಟನ್ನು ಬಿಸಾಕುವುದು ಸೂಕ್ತ. ಸಾಧ್ಯವಾದರೆ, ಹಿಟ್ಟನ್ನು ರುಬ್ಬಿದ 24 ಗಂಟೆಗಳ ಒಳಗೆ ಸಂಪೂರ್ಣವಾಗಿ ಬಳಸಬೇಕು ಎಂದು ತಜ್ಞರ ಸಲಹೆ.

ಇಡ್ಲಿ/ದೋಸೆ ಹಿಟ್ಟು ಹೆಚ್ಚು ಹುಳಿಯಾಗದಂತೆ ತಪ್ಪಿಸಲು ಈ ಸಲಹೆಗಳನ್ನು ಅನುಸರಿಸಿ.

  • ಉಷ್ಣತೆಯು ಹೆಚ್ಚಾದಾಗ ಹಿಟ್ಟು ನಾಲ್ಕು ಗಂಟೆಯೊಳಗೆ ಉಬ್ಬುತ್ತದೆ. ಹಾಗಾಗಿ ರಾತ್ರಿ ಹೊತ್ತು ರುಬ್ಬಿದ್ದ ಹಿಟ್ಟನ್ನು ಹೊರಗೆ ಇಡುವ ಬದಲು ಕೊಂಚ ತಂಪಾಗಿರುವ ಸ್ಥಳದಲ್ಲಿ ಇಡುವುದು ಸೂಕ್ತ. ಏಕೆಂದರೆ ಗಂಟೆಗಳು ಕಳೆದರೂ ಅದು ಉಬ್ಬುವುದಿಲ್ಲ. ಇಲ್ಲಿ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು. ಹಿಟ್ಟು ದ್ವಿಗುಣಗೊಂಡರೆ, ಅದನ್ನು ಚೆನ್ನಾಗಿ ಮಿಕ್ಸ್​ ಮಾಡಿ ಹೆಚ್ಚಾದ ಹಿಟ್ಟನ್ನು ಫ್ರಿಡ್ಜ್​ನಲ್ಲಿಡಬೇಕು.
  • ಹೆಚ್ಚು ಉಪ್ಪನ್ನು ಬಳಸುವುದರಿಂದ ಹಿಟ್ಟು ಹೆಚ್ಚು ಹುಳಿಯಾಗುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ರುಚಿಗೆ ಮಾತ್ರ ಉಪ್ಪನ್ನು ಬಳಸಬೇಕು ಎನ್ನುತ್ತಾರೆ ಅವರು. 2018 ರಲ್ಲಿ 'ಜರ್ನಲ್ ಆಫ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ' ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇಡ್ಲಿ ಹಿಟ್ಟಿನ ಹುದುಗುವಿಕೆಯ ಮೇಲೆ ತಾಪಮಾನ ಮತ್ತು ಉಪ್ಪು ಪರಿಣಾಮ ಬೀರುತ್ತದೆ ಎಂದು ತಜ್ಞರು ಕಂಡು ಕೊಂಡಿದ್ದಾರೆ. ಈ ಸಂಶೋಧನೆಯಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಐಸಿಎಆರ್) ಡಾ.ಸುನೀಲ್ ಕುಮಾರ್ ಭಾಗವಹಿಸಿದ್ದರು.
  • ಹಿಟ್ಟು ತುಂಬಾ ತಣ್ಣಗಾದ ಅಥವಾ ದೋಸೆ ಅಥವಾ ಇಡ್ಲಿ ಮಾಡುವಾಗ ಫ್ರಿಡ್ಜ್​ನಲ್ಲಿಟ್ಟಿದ್ದ ಹಿಟ್ಟನ್ನು ಹೊರ ತೆಗೆಯುತ್ತಾರೆ. ಆ ರೀತಿ ಮಾಡುವುರಿಂದ ಹಿಟ್ಟು ಹಳಸಿ ಹೋಗುವ ಸಂಭವ ಇರುತ್ತದೆ. ಹಾಗಾಗಿ ಅಗತ್ಯವಿದ್ದಾಗ ಮಾತ್ರ ಫ್ರಿಡ್ಜ್​ನಿಂದ ಹಿಟ್ಟನ್ನು ತೆಗೆದರೆ ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಉದ್ದಿನಬೆಳೆ ಜಾಸ್ತಿ ಬಳಸಿದರೂ ಹಿಟ್ಟು ಜಾಸ್ತಿ ಉಬ್ಬುವ ಸಾಧ್ಯತೆ ಇದೆ. ಏಕೆಂದರೆ ಉದ್ದಿನ ಬೆಳೆ ಉಬ್ಬುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಅದನ್ನು ಅತಿಯಾಗಿ ಬಳಸದಂತೆ ನೋಡಿಕೊಳ್ಳಿ.
  • ಮೆಂತ್ಯ ಕಾಳುಗಳ ಸಹ ಹಿಟ್ಟು ಉಬ್ಬುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹಾಗಾಗಿ ಇವುಗಳನ್ನು ದೋಸೆ ಹಿಟ್ಟಿನಲ್ಲಿ ಹೆಚ್ಚು ಬಳಸದಿರುವುದು ಉತ್ತಮ.
  • ಈ ಸಲಹೆಗಳನ್ನು ಅನುಸರಿಸುವ ಮೂಲಕ ಹಿಟ್ಟು ಹೆಚ್ಚು ಹುಳಿ ಆಗದಂತೆ ತಡೆಯಬಹುದು ಎನ್ನುತ್ತಾರೆ ತಜ್ಞರು.

ಓದಿ: ಕೂದಲು ಉದುರುವುದನ್ನು ತಡೆಯುವುದಕ್ಕೆ, ಬೆಳೆಯುವುದಕ್ಕೆ ಈರುಳ್ಳಿ ಜ್ಯೂಸ್​ ಪರಿಣಾಮಕಾರಿಯೇ?; ಏನ್​ ಹೇಳ್ತಾರೆ ತಜ್ಞರು? - Onion Juice for Hair

ETV Bharat Logo

Copyright © 2025 Ushodaya Enterprises Pvt. Ltd., All Rights Reserved.