ETV Bharat / health

ಜಾಗತಿಕ ಮಾರುಕಟ್ಟೆಯಿಂದ ಕೋವಿಡ್​ ಲಸಿಕೆ ಹಿಂಪಡೆದ ಆಸ್ಟ್ರಾಜೆನೆಕಾ - AstraZeneca Vaccine - ASTRAZENECA VACCINE

ನಾವು ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದೆಂದು ಮಾರುಕಟ್ಟೆಯಿಂದ ಹಿಂಪಡೆಯುತ್ತಿಲ್ಲ. ಇದು ಕೇವಲ ಕಾಕತಾಳೀಯವಷ್ಟೇ ಎಂದು ಆಸ್ಟ್ರಾಜೆನೆಕಾ ಸಂಸ್ಥೆ ತಿಳಿಸಿದೆ.

ಕೋವಿಡ್​ ಲಸಿಕೆ ಹಿಂಪಡೆದ ಆಸ್ಟ್ರಾಜೆನೆಕಾ
ಕೋವಿಡ್​ ಲಸಿಕೆ ಹಿಂಪಡೆದ ಆಸ್ಟ್ರಾಜೆನೆಕಾ (IANS)
author img

By ETV Bharat Karnataka Team

Published : May 8, 2024, 11:25 AM IST

ಕೇಂಬ್ರಿಡ್ಜ್​​: ಅಪರೂಪದ ಪ್ರಕರಣಗಳಲ್ಲಿ ತಾವು ತಯಾರಿಸಿದ ಕೋವಿಡ್​ 19 ಲಸಿಕೆ ಅಡ್ಡ ಪರಿಣಾಮ ಹೊಂದಿದೆ ಎಂದು ನ್ಯಾಯಾಲಯದೆದುರು ದಾಖಲಾತಿಸಮೇತ ಒಪ್ಪಿಕೊಂಡಿದ್ದ ದೈತ್ಯ ಔಷಧ ತಯಾರಿಕಾ ಸಂಸ್ಥೆ ಆಸ್ಟ್ರಾಜೆನೆಕಾ, ಇದೀಗ ವಿಶ್ವಾದ್ಯಂತ ತನ್ನ ಲಸಿಕೆಯನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಈ ಬಗ್ಗೆ ಬ್ರಿಟಿಷ್​ ಸುದ್ದಿಪತ್ರಿಕೆ ಟೆಲಿಗ್ರಾಫ್​ ವರದಿ ಮಾಡಿದೆ.

ವಾಣಿಜ್ಯ ಕಾರಣ ನೀಡಿದ ಸಂಸ್ಥೆ: ವಾಣಿಜ್ಯ ಕಾರಣಗಳಿಂದ ಮಾರುಕಟ್ಟೆಗಳಿಂದ ಲಸಿಕೆಗಳನ್ನು ಹಿಂಪಡೆಯಲಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ಕೋವಿಡ್​ ರೂಪಾಂತರಗಳಿಗೆ ಲಸಿಕೆಗಳಿದ್ದು, ನಮ್ಮ ಸಂಸ್ಥೆಯ ಲಸಿಕೆಯ ಬೇಡಿಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಸಂಸ್ಥೆಯು ಯಾವುದೇ ಕೋವಿಡ್​ ಲಸಿಕೆಯನ್ನು ತಯಾರಿಸುವುದಿಲ್ಲ ಅಥವಾ ಪೂರೈಕೆ ಮಾಡುವುದಿಲ್ಲ ಎಂದು ಆಸ್ಟ್ರಾಜೆನೆಕಾ ತಿಳಿಸಿದೆ.

ಮಾರ್ಚ್​​ 5ರಂದು ಸಂಸ್ಥೆಯು ಲಸಿಕೆ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದು, ಮೇ 7ರಿಂದ ಜಾರಿಗೆ ಬಂದಿದೆ. ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂಪಡೆಯುವ ನಿರ್ಧಾರದ ಬೆನ್ನಲ್ಲೇ ಯುರೋಪಿಯನ್​ ಯೂನಿಯನ್​ ಈ ಲಸಿಕೆಯನ್ನು ಬಳಸುವುದಿಲ್ಲ ಎಂದು ಹೇಳಿದೆ.

ನಮ್ಮ ಲಸಿಕೆ ಟಿಟಿಎಸ್ ಎಂಬ​​ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ನಾವು ಮಾರುಕಟ್ಟೆಯಿಂದ ಹಿಂಪಡೆಯುತ್ತಿಲ್ಲ. ಲಸಿಕೆ ಹಿಂಪಡೆಯುವಿಕೆ ಮತ್ತು ಅಡ್ಡ ಪರಿಣಾಮದ ಕಾರಣಗಳು ಕೇವಲ ಕಾಕತಾಳೀಯವಷ್ಟೇ ಎಂದು ಆಸ್ಟ್ರಾಜೆನೆಕಾ ತಿಳಿಸಿರುವುದಾಗಿ ದಿ ಟೆಲಿಗ್ರಾಫ್​ ವರದಿಯಲ್ಲಿ ಉಲ್ಲೇಖವಿದೆ.

ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್)​ ಯುಕೆಯಲ್ಲಿ 81 ಸಾವು ಮತ್ತು ನೂರಾರು ಗಂಭೀರ ಗಾಯ ಪ್ರಕರಣಗಳೊಂದಿಗೆ ಸಂಬಂಧ ಹೊಂದಿದ್ದು, ಲಸಿಕೆ ತಯಾರಿಸಿದ್ದ ಆಸ್ಟ್ರಾಜೆನೆಕಾ ವಿರುದ್ದ 50ಕ್ಕೂ ಹೆಚ್ಚು ಮಂದಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಕೋವಿಡ್​​ ವಿರುದ್ಧದ ಹೋರಾಟದಲ್ಲಿ ಆಕ್ಸ್‌ಫರ್ಡ್​ ಜೊತೆಗೂಡಿ ಆಸ್ಟ್ರಾಜೆನೆಕಾ ತಯಾರಿಸಿದ್ದ ಎಜೆಡ್​ಡಿ1222 ಎಂಬ ಲಸಿಕೆ ಟಿಟಿಎಸ್‌ ಎಂದರೆ ರಕ್ತ ಹೆಪ್ಪುಗಟ್ಟುವಿಕೆ ಹಾಗು ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆ ಮಾಡುವಂತಹ ಅಪರೂಪದ ಅಡ್ಡ ಪರಿಣಾಮ ಹೊಂದಿದೆ ಎಂದು 2021ರಲ್ಲಿ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ ಕಂಪನಿ, ತಮ್ಮ ಲಸಿಕೆ ಅಪರೂಪದ ಪ್ರಕರಣಗಳಲ್ಲಿ ಟಿಟಿಎಸ್​ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ದಾಖಲಾತಿಯೊಂದಿಗೆ ಒಪ್ಪಿಕೊಂಡಿತ್ತು.

ಎಜೆಡ್​​ 1222 ಲಸಿಕೆಯನ್ನು ಭಾರತೀಯ ಸೇರಂ ಸಂಸ್ಥೆಯಿಂದ ಕೋವಿಶೀಲ್ಡ್​​ ಹೆಸರಿನಲ್ಲಿ ಉತ್ಪಾದಿಸಿ ಪೂರೈಸಲಾಗಿತ್ತು. ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೂ ಈ ಲಸಿಕೆಯನ್ನು ಪೂರೈಕೆ ಮಾಡಲಾಗಿದೆ. ಯುಕೆಯಲ್ಲಿ ಈ ಲಸಿಕೆಯನ್ನು ವ್ಯಾಕ್ಸ್‌ಜೆವ್ರಿಯಾ ಎಂಬ ಹೆಸರಿನಲ್ಲಿ ವಿತರಿಸಲಾಗಿತ್ತು.(ಎಎನ್​ಐ)

ಇದನ್ನೂ ಓದಿ: ಆಸ್ಟ್ರಾಜೆನೆಕಾ ಕೋವಿಡ್​ ಲಸಿಕೆಯಿಂದ ಟಿಟಿಎಸ್​ ಅಡ್ಡ ಪರಿಣಾಮ ಸಾಧ್ಯತೆ; ಏನಿದು ಸಮಸ್ಯೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.