ETV Bharat / health

ಆಸ್ಟ್ರಾಜೆನೆಕಾ ಕೋವಿಡ್​ ಲಸಿಕೆಯಿಂದ ಟಿಟಿಎಸ್​ ಅಡ್ಡ ಪರಿಣಾಮ ಸಾಧ್ಯತೆ; ಏನಿದು ಸಮಸ್ಯೆ? - AstraZeneca Admits TTS Side Effect - ASTRAZENECA ADMITS TTS SIDE EFFECT

ಆಸ್ಟ್ರಾಜೆನೆಕಾ ಕೋರ್ಟ್​​ ಮುಂದೆ ಹಾಜರುಪಡಿಸಿದ ಕಾನೂನು ದಾಖಲಾತಿಯಲ್ಲಿ ತಮ್ಮ ಲಸಿಕೆಯಿಂದ ಅಪರೂಪದ ಪ್ರಕರಣಗಳಲ್ಲಿ ಟಿಟಿಎಸ್​ ಅಡ್ಡ ಪರಿಣಾಮವನ್ನು ಉಂಟು ಮಾಡಿರಬಹುದು. ಆದರೆ ಈ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕಾಗಿದೆ ಎಂದು ತಿಳಿಸಿದೆ.

AstraZeneca Admits its COVID Vaccine Covishield Can Cause TTS Know All About The Rare Side Effect

author img

By ETV Bharat Karnataka Team

Published : Apr 30, 2024, 1:52 PM IST

Updated : Apr 30, 2024, 8:04 PM IST

ಹೈದರಾಬಾದ್​: ಕೋವಿಡ್​ ಸೋಂಕಿನ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದ ಆಸ್ಟ್ರಾಜೆನೆಕಾ ಕೋವಿಡ್​ ಲಸಿಕೆ ಅಪರೂಪದ ಅಡ್ಡ ಪರಿಣಾಮವನ್ನು ಹೊಂದಿದೆ ಎಂಬುದಾಗಿ ಸಂಸ್ಥೆ ಕೋರ್ಟ್​​ನಲ್ಲಿ ಮೊದಲ ಬಾರಿಗೆ ತಿಳಿಸಿದೆ. ಈ ಒಪ್ಪಿಗೆಯೂ ಹಲವು ಮಿಲಿಯನ್​ ಪೌಂಡ್​ಗಳ ಕಾನೂನು ಪರಿಹಾರಕ್ಕೆ ಕೂಡ ದಾರಿ ಮಾಡಬಹುದು ಎಂದು ದಿ ಟೆಲಿಗ್ರಾಫ್​ ವರದಿ ಮಾಡಿದೆ.

ಟೆಲಿಗ್ರಾಫ್​​ ವರದಿ ಮಾಡಿದಂತೆ, ಫೆಬ್ರವರಿಯಲ್ಲಿ ಆಸ್ಟ್ರಾಜೆನಕಾ​ ಕೋರ್ಟ್​​ ಮುಂದೆ ಹಾಜರುಪಡಿಸಿದ ಕಾನೂನು ದಾಖಲಾತಿಯಲ್ಲಿ ತಮ್ಮ ಲಸಿಕೆಯಿಂದ ಅಪರೂಪದ ಪ್ರಕರಣಗಳಲ್ಲಿ ಟಿಟಿಎಸ್​ ಅಡ್ಡ ಪರಿಣಾಮಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ.

ಏನಿದು ಪ್ರಕರಣ: 2020ರಲ್ಲಿ ಕೊರೊನಾ ವೈರಸ್​ ಉಲ್ಬಣಿಸಿದಾಗ ಈ ಕೋವಿಡ್​​ 19 ವಿರುದ್ಧದ ಹೋರಾಟದಲ್ಲಿ ಆಕ್ಸಫರ್ಡ್​ ಜೊತೆಗೂಡಿ ಆಸ್ಟ್ರಾಜೆನೆಕಾ ಎಜೆಡ್​ಡಿ1222 ಎಂಬ ಲಸಿಕೆಯನ್ನು ಅಭಿವೃದ್ಧಿಪಡಿಸಿತು. ಈ ಲಸಿಕೆಯಿಂದ ಸಾವು, ಗಂಭೀರ ಗಾಯದ ಸಮಸ್ಯೆಗಳು, ಟಿಟಿಎಸ್‌ ಎಂದರೆ ರಕ್ತ ಹೆಪ್ಪುಗಟ್ಟುವಿಕೆ ಹಾಗು ಪ್ಲೇಟ್‌ಲೆಟ್‌ ಸಂಖ್ಯೆ ಕಡಿಮೆಯಾಗುವ ಕುರಿತು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಸ್ಟ್ರಾಜೆನಕಾ ವಿರುದ್ಧ ಕಾನೂನು ಕ್ರಮಕ್ಕೆ ದೂರು ಸಲ್ಲಿಸಲಾಗಿತ್ತು.

ಜೇಮಿ ಸ್ಕ್ರಾಟ್​ ಎಂಬ ವ್ಯಕ್ತಿಯೊಬ್ಬರು 2021ರ ಏಪ್ರಿಲ್​ನಲ್ಲಿ ಈ ಲಸಿಕೆ ಪಡೆದ ಬಳಿಕ ಅವರ ರಕ್ತ ಹೆಪ್ಪುಗಟ್ಟಿ ಅವರು ಶಾಶ್ವರ ಮೆದುಳಿನ ಗಾಯಕ್ಕೆ ಗುರಿಯಾದರು. ಇದರಿಂದ ಅವರು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದರು. ಅವರ ಹೆಂಡತಿ ಕೂಡ ಮೂರು ಲಸಿಕೆ ಪಡೆದ ಬಳಿಕ ಅವರು ಸಾವಿನ ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದ್ದಾರೆ ಎಂದು​ ವರದಿ ಮಾಡಿದೆ.

ಈ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಅವರು ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಆಸ್ಟ್ರಾಜೆನಕಾ, ಎಜೆಡ್​ ಲಸಿಕೆಯು ಅಪರೂಪದ ಪ್ರಕರಣದಲ್ಲಿ ಟಿಟಿಎಸ್​ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಒಪ್ಪಿಕೊಂಡಿದೆ.

ಏನಿದು ಟಿಟಿಎಸ್​: ಥ್ರಂಬೋಸಿಸ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ರಕ್ತನಾಳಗಳಲ್ಲಿನ ಹೆಪ್ಪುಗಟ್ಟುವಿಕೆಯ ಗಂಭೀರ ಪರಿಸ್ಥಿತಿಯಾಗಿದೆ. ಇದು ರಕ್ತದ ಪ್ಲೇಟ್ಲೆಟ್​​​​ ಸಮಸ್ಯೆಯನ್ನು ಕಡಿಮೆ ಮಾಡಬಹುದು.

ಮಾನವರಲ್ಲಿನ ರಕ್ತದ ಪ್ಲೆಟ್ಲೆಟ್​​ ಕಡಿಮೆ ಮಾಡಿ ರಕ್ತ ಹೆಪ್ಪುಗಟ್ಟುವಿಕೆ ಸ್ಥಿತಿಯು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಾಗಿದೆ. ಟಿಟಿಎಸ್​​ ಮಕ್ಕಳು ಮತ್ತು ವಯಸ್ಕರ ಮೇಲೆ ಪರಿಣಾಮ ಉಂಟು ಮಾಡಲಿದೆ.

ಲಕ್ಷಣಗಳು: ಈ ಸಮಸ್ಯೆ ಉಂಟಾದಲ್ಲಿ ಭಾರೀ ತಲೆ ನೋವು, ಹೊಟ್ಟೆ ನೋವು, ಉಸಿರಾಟ ಸಮಸ್ಯೆ, ಕಾಲು ಊತ, ನರ ಸಮಸ್ಯೆಯಂತಹ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಚಿಕಿತ್ಸೆ: ಟಿಟಿಎಸ್​​ ಚಿಕಿತ್ಸೆಯು ಬಹು ಹಂತದ ಚಿಕಿತ್ಸೆಯಾಗಿದೆ. ಆಸ್ಪತ್ರೆಗೆ ದಾಖಲೀಕರಣದಿಂದ ಹೆಪ್ಪುಗಟ್ಟುವಿಕೆ ಚಿಕಿತ್ಸೆ ಮೂಲಕ ಭವಿಷ್ಯದಲ್ಲಿ ಉಂಟಾಗುವ ರಕ್ತ ಹೆಪ್ಪುಗಟ್ಟುವಿಕೆ ತಪ್ಪಿಸಬಹುದು. ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ (ಐವಿಐಜಿ) ಮತ್ತು ಪ್ಲಾಸ್ಮಾ ಬದಲಾವಣೆ ಮೂಲಕ ಪ್ಲೆಟ್ಲೇಟ್​​ ಮಟ್ಟವನ್ನು ಸ್ಥಿರಗೊಳಿಸಬಹುದು.

ಇದನ್ನೂ ಓದಿ: ಒಂದು ಕೋಟಿಗೂ ಹೆಚ್ಚು ಆಸ್ಟ್ರಾಜೆನೆಕಾ ಲಸಿಕೆ ಡೋಸ್​ ಹಾಳು ಮಾಡಿದ ಕೆನಡಾ

Last Updated : Apr 30, 2024, 8:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.