ನವದೆಹಲಿ: ಭಾರತ್ಪೇ ಸಹ ಸಂಸ್ಥಾಪಕ ಮತ್ತು ನಿರ್ವಹಣಾ ನಿರ್ದೇಶಕರಾಗಿರುವ ಅಶ್ನೀರ್ ಗ್ರೋವರ್ ಫಿನ್ಟೆಕ್ ಕ್ಷೇತ್ರದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಇದೀಗ ತಮ್ಮ ಹೊಸ ಪ್ರಯತ್ನದಲ್ಲಿ ವೈದ್ಯಕೀಯ ಚಿಕಿತ್ಸೆಗೆ ತಕ್ಷಣ ಸಾಲ ನೀಡುವ ಜೀರೋಪೇ ಎಂಬ ಆ್ಯಪ್ ಪರಿಚಯಿಸಲು ಸಿದ್ಧರಾಗಿದ್ದಾರೆ.
ಜೀರೋಪೇ ಸದ್ಯ ಪರೀಕ್ಷಾರ್ಥ ಹಂತದಲ್ಲಿದೆ. ಥರ್ಡ್ ಯುನಿಕಾರ್ನ್ ಗೂಗಲ್ ಪ್ಲೇಸ್ಟೋರ್ ಪಟ್ಟಿಗೆ ತಕ್ಕಂತೆ ಅಭಿವೃದ್ಧಿ ಮಾಡಲಾಗಿದೆ. ಭಾರತ್ಪೇನಿಂದ ಹೊರನಡೆದ ಬಳಿಕ ಗ್ರೋವರ್, ಥರ್ಡ್ ಯುನಿಕಾರ್ನ್ಗೆ ಬಂಡವಾಳ ಹೂಡಿದ್ದಾರೆ. 2023ರಲ್ಲಿ ಕ್ರಿಕೆಟ್ಪೇ ಎಂಬ ಫ್ಯಾಂಟಸಿ ಗೇಮಿಂಗ್ ಫ್ಲಾಟ್ಫಾರ್ಮ್ಗೆ ಇವರು ಚಾಲನೆ ನೀಡಿದ್ದರು.
ಜೀರೋಪೇ ಆ್ಯಪ್ ತಕ್ಷಣಕ್ಕೆ ಪ್ರಿ-ಅಪ್ರೂವ್ಡ್ ವೈದ್ಯಕೀಯ ಲೋನ್ ಒದಗಿಸುತ್ತದೆ. 5 ಲಕ್ಷ ರೂ.ವರೆಗೆ ಸಾಲ ನೀಡುತ್ತದೆ. ಜಿರೋಪೇಗೆ ದೆಹಲಿ ಮೂಲದ ನಾನ್‌ಬ್ಯಾಂಕಿಂಗ್ ಫೈನಾನ್ಸ್ ಕಂಪನಿ (ಎನ್ಬಿಎಫ್ಸಿ) ಮುಕುಟ್ ಫಿನ್ವೆಸ್ ಸಹಭಾಗಿತ್ವ ಹೊಂದಿದೆ. ಈ ಸೇವೆಯನ್ನು ಬಳಕೆದಾರರು ಸಂಸ್ಥೆಯು ಸಹಭಾಗಿತ್ವ ಹೊಂದಿರುವ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯಬಹುದು ಎಂದು ಜಿರೋಪೇ ವೆಬ್ಸೈಟ್ ಮಾಹಿತಿ ನೀಡಿದೆ.
ಭಾರತದ ಡಿಜಿಟಲ್ ಹೆಲ್ತ್ಕೇರ್ ಮಾರುಕಟ್ಟೆ 2030ರ ವೇಳೆಗೆ 37 ಬಿಲಿಯನ್ ಡಾಲರ್ ಸಂಪಾದಿಸಲಿದೆ ಎಂದು ಸಿಂಗಾಪೂರ್ ಮೂಲದ ಬಿ ಕಾಪಿಟಲ್ ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಜಂಟಿಯಾಗಿ ವರದಿ ಮಾಡಿದೆ. ಇದರಲ್ಲಿ ಹೆಲ್ತ್ಕೇರ್ ಫೈನಾನ್ಸಿಂಗ್ ಒಂದೇ ಅಂದಾಜು 5 ಬಿಲಿಯನ್ ಡಾಲರ್ ಮೌಲ್ಯ ತಲುಪಲಿದೆ. ರೋಗಿಗಳ ಎಲ್ಲಾ ಆರೋಗ್ಯ ಅಗತ್ಯತೆ ಮತ್ತು ಚಿಕಿತ್ಸೆಗೆ ತಕ್ಷಣಕ್ಕೆ ದತ್ತಾಂಶಚಾಲಿತ ವೈದ್ಯಕೀಯ ಸಾಲ ನೀಡಲಿರುವ ಮೊದಲ ಡಿಜಿಟಲ್ ಸ್ಟಾರ್ಟ್ಅಪ್ ಇದಾಗಲಿದೆ. (ಐಎಎನ್ಎಸ್)
ಇದನ್ನೂ ಓದಿ: ವಿದೇಶಗಳಲ್ಲಿ ಭಾರತೀಯರಿಂದ 109 ಯುನಿಕಾರ್ನ್ ಸ್ಟಾರ್ಟ್ಅಪ್ಗಳ ಸ್ಥಾಪನೆ: ವರದಿ