ಹೈದರಾಬಾದ್: ನಿದ್ರಾಹೀನತೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ನಿದ್ರಾ ಹೀನತೆಗೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡುವುದು ಈಗಿನ ತುರ್ತು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉಂಟಾಗುವ ಸಮಸ್ಯೆ ನಿವಾರಣೆಗೆ ಐಐಐಟಿ ಹೈದರಾಬಾದ್ ಸಿಎಸ್‌ಲ್ಯಾಬ್‌ನ ಮುಖ್ಯಸ್ಥ ಪ್ರೊಫೆಸರ್ ಎಸ್ ಬಾಪಿರಾಜು ಮತ್ತು ಬೆಂಗಳೂರಿನ ನಿಮ್ಹಾನ್ಸ್ ವೈದ್ಯರ ತಂಡ ಜಂಟಿಯಾಗಿ ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಕೃತಕ ಬುದ್ಧಿಮತ್ತೆಯೊಂದಿಗಿನ ಪಾಲಿಸೋಮ್ನೋಗ್ರಫಿ ಪರೀಕ್ಷೆ ಮೂಲಕ ಇದಕ್ಕೆ ಚಿಕಿತ್ಸಾ ಪರಿಹಾರ ಪತ್ತೆ ಮಾಡಿದ್ದಾರೆ. ಈ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ವ್ಯಕ್ತವಾಗಿದೆ. ಅಲ್ಲದೇ, ನಿಮ್ಹಾನ್ಸ್‌ನಲ್ಲಿ ನಿದ್ರಾಹೀನತೆ ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳನ್ನು ಈ ಪಾಲಿಸೋಮ್ನೋಗ್ರಫಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ.
ಸಮಸ್ಯೆ ಕುರಿತು ವಿಶ್ಲೇಷಣೆ ನೀಡಿರುವ ಪ್ರೊ ಎಸ್ ಬಾಪಿರಾಜು, ಸಮಸ್ಯೆಯಿಂದ ಬಳಲುತ್ತಿರುವ ವೇಗದ ಕಣ್ಣಿನ ಚಲನೆ ಮತ್ತು ನಿಧಾನದ ಕಣ್ಣಿನ ಚಲನೆ ಮೂಲಕ ಸಮಸ್ಯೆ ಗಮನಿಸಲಾಗಿದೆ. ಈ ಅಧ್ಯಯನವನ್ನು ಜುಲೈ ಸಂಚಿಕೆಯ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯಾಗಜೀನ್ 'ಟೆಕ್ ಫಾರ್ವಡ್'ನಲ್ಲಿ ಪ್ರಕಟಿಸಲಾಗಿದೆ.
ಪ್ರಸ್ತುತ, ಕೆಲವು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದು, ಈ ಸಮಸ್ಯೆ ಪತ್ತೆಗಾಗಿ ಅವರು 5 ರಿಂದ 20 ಸಾವಿರ ರೂ ಮೊತ್ತದವರೆಗಿನ ನಿದ್ರಾ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದೀಗ ಅವರು ಕೃತಕ ಬುದ್ಧಿಮತ್ತೆ ಸಂಬಂಧಿತ ಪಾಲಿಸೋಮ್ನೋಗ್ರಫಿ ಪರೀಕ್ಷೆಗೆ ಒಳಗಾಗುವ ಅವಕಾಶ ಹೊಂದಲಿದ್ದಾರೆ ಎಂದು ಹೇಳಿದ್ದಾರೆ.
ನಿದ್ರೆಯ ಗುಣಮಟ್ಟದ ವಿಶ್ಲೇಷಣೆ: ಕೃತಕ ಬುದ್ಧಿಮತ್ತೆ ಸಾಧನದ ಮೂಲಕ ಮೆದುಳು, ಕಣ್ಣಿನ ಕಾರ್ಯಾಚರಣೆ ಮತ್ತು ಉಸಿರಾಟದ ವಿಶ್ಲೇಷಣೆ ಮೂಲಕ ನಿದ್ರಾಹೀನತೆ ಮತ್ತು ಸಮಸ್ಯೆಗಳನ್ನು ಪತ್ತೆ ಮಾಡಲಾಗುವುದು. ಈ ಪರೀಕ್ಷೆಯಲ್ಲಿ ಮೂರು ಹಂತದ ವೇಗದ ಕಣ್ಣಿನ ಚಲನೆಯನ್ನು ವಿಂಗಡಿಸಲಾಗಿದೆ. ಇದು ಮೊದಲ ಹಂತದಲ್ಲಿ ಹಗುರ ನಿದ್ರೆ, ಎರಡನೇ ಹಂತದಲ್ಲಿ ದೀರ್ಘ ನಿದ್ರೆ ಮತ್ತು ಮೂರನೇ ಹಂತದಲ್ಲಿ ದೀರ್ಘ ಅಥವಾ ನಿಧಾನ ಅಲೆಯ ನಿದ್ರೆ ಗಮನಿಸಲಿದೆ. ಕೃತಕ ಬುದ್ಧಿಮತ್ತೆ 8 ಗಂಟೆಗಳ ಕಾಲದ ನಿದ್ರೆ ಮಾದರಿಯನ್ನು ದಾಖಲಿಸಲಿದೆ. ಇದಾದ ಬಳಿಕ ಡೇಟಾವನ್ನು ಸಿದ್ಧ ಮಾಡಿ, ಯಾಕೆ ಜನರು ನೈಸರ್ಗಿಕವಾಗಿ ನಿದ್ರೆ ಹೊಂದುತ್ತಿಲ್ಲ ಎಂಬ ವರದಿಯನ್ನು ನೀಡಲಾಗುತ್ತಿದೆ. ಈ ವರದಿ ಆಧಾರದ ಮೇಲೆ ವೈದ್ಯರು ಮತ್ತು ಮನೋವಿಜ್ಞಾನಿಗಳು ಸಮಸ್ಯೆಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ: ಮೂಳೆ ಸವೆತ ಮತ್ತು ಮಂಡಿನೋವು: ತಡೆಗಟ್ಟಲು ಇದೆ ತ್ರಿಸೂತ್ರ