ETV Bharat / health

ಕೃತಕ ಬಣ್ಣದ ಸೇವನೆಯಿಂದ ಆಗುವ ಸಮಸ್ಯೆಗಳಿವು: ಇದೇ ಕಾರಣಕ್ಕೆ ಸರ್ಕಾರದಿಂದ ನಿಷೇಧ - artificial food colours side effect - ARTIFICIAL FOOD COLOURS SIDE EFFECT

ಮಾರ್ಚ್​ ತಿಂಗಳಲ್ಲಿ ಕಾಟನ್ ಕ್ಯಾಂಡಿ, ಗೋಬಿಗೆ ಕೃತಕ ಬಣ್ಣ ಬಳಕೆಯನ್ನು ನಿರ್ಬಂಧಿಸಿತ್ತು. ಬಳಿಕ ಜೂ. 24 ರಂದು ರಾಜ್ಯಾದ್ಯಂತ ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ಸಹ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.

Chicken Kabab
ಚಿಕನ್​ ಕಬಾಬ್​ (Getty Image)
author img

By ETV Bharat Karnataka Team

Published : Jun 26, 2024, 12:48 PM IST

Updated : Jun 26, 2024, 3:12 PM IST

ಬೆಂಗಳೂರು​: ಕರ್ನಾಟಕ ರಾಜ್ಯ ಸರ್ಕಾರ ಕೃತಕ ಬಣ್ಣಗಳ ಬಳಕೆಯನ್ನು ಇತ್ತೀಚಿಗೆ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆದೇಶ ಉಲ್ಲಂಘಿಸಿ ಆಹಾರಗಳಿಗೆ ಇವುಗಳನ್ನು ಬಳಕೆ ಮಾಡಿದಲ್ಲಿ 10 ಲಕ್ಷ ರೂ. ಗಳವರೆಗೆ ದಂಡ ಮತ್ತು 7 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.

ಈ ಬೆನ್ನಲ್ಲೇ ಮಾತನಾಡಿರುವ ತಜ್ಞರು ಇವುಗಳ ಕಟ್ಟುನಿಟ್ಟಿನ ನಿಷೇಧ ಕುರಿತು ಸಹಮತ ಸೂಚಿಸಿದ್ದು, ಇವುಗಳ ಸೇವನೆಯಿಂದ ಆಗುವ ಅಪಾಯ ಕುರಿತು ತಿಳಿಸಿದ್ದಾರೆ. ಕೃತಕ ಬಣ್ಣಗಳು ಆಹಾರವನ್ನು ನೋಡುವಲ್ಲಿ ಕಣ್ಸೆಳೆಯುವಂತೆ ಮಾಡಿ, ಇದು ಗ್ರಾಹಕರಲ್ಲಿ ತಿನ್ನುವ ಬಯಕೆಯನ್ನು ಹೆಚ್ಚಿಸಲಿವೆ ಎಂದಿದ್ದಾರೆ.

ಸೂರ್ಯಕಾಂತಿ ಹಳದಿ, ಕಾರ್ಮೊಸಿನ್​, ರಡೊಮೈನ್​ ಬಿ ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೀಗೆ ಪರೀಕ್ಷೆಗೊಳಪಡಿಸಿದ ಮಾದರಿಗಳಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ 7 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 1) ಕೂಡಿರುವುದು ಅಸುರಕ್ಷಿತ ಅನ್ನೋದು ಪರೀಕ್ಷಾ ವರದಿಗಳಲ್ಲಿ ಕಂಡುಬಂದಿತ್ತು. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ನಿಯಮ 3(1) (zz) (viii)ರನ್ವಯ ಅಸುರಕ್ಷಿತ ಎಂದು ವರದಿ ಮಾಡಲ್ಪಟ್ಟಿರುತ್ತವೆ. ಕೃತಕ ಬಣ್ಣಗಳು ಅಲರ್ಜಿ, ಮಕ್ಕಳಲ್ಲಿ ಅಧಿಕ ಕ್ರಿಯಾಶೀಲತೆ ಹಾಗೂ ಕಾರ್ಸಿನೋಜೆನಿಕ್ ಪರಿಣಾಮ ಬೀರಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಬಾಬ್​ಗೆ ಬಳಕೆ ಮಾಡುತ್ತಿರುವ ಈ ಕೃತಕ ಬಣ್ಣಗಳು ಅಪಾಯಕಾರಿ ಮಟ್ಟದಲ್ಲಿದ್ದು, ಇದು ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಇವುಗಳ ನಿಷೇಧಕ್ಕೆ ಕಟ್ಟು ನಿಟ್ಟಿನ ನಿಯಂತ್ರಣ ಅಗತ್ಯವಾಗಿದೆ ಎಂದು ಬೆಂಗಳೂರಿನ ಅಸ್ಟರ್​ ವೈಟ್​ಫೀಲ್ಡ್​​ನ ಇಂಟರ್​ನಲ್​ ಮೆಡಿಸಿನ್​ ಡಾ ಬಸವರಾಜ್​ ಎಸ್​ ಕುಂಬಾರ್​ ತಿಳಿಸಿದ್ದಾರೆ.

ಕೃತಕ ಅಥವಾ ಅಪಾಯಕಾರಿ ಸಿಂಥೆಟಿಕ್​ ಬಣ್ಣಗಳಿಗೆ ಬದಲಾಗಿ ಗ್ರಾಹಕರ ಆರೋಗ್ಯ ಮತ್ತು ಆಹಾರ ಅಭ್ಯಾಸದ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ನೈಸರ್ಗಿಕ ಬಣ್ಣಗಳ ಬಳಕೆಗೆ ಮುಂದಾಗಬೇಕಿದ್ದು, ಇದಕ್ಕೆ ಉತ್ತೇಜಿಸಬೇಕಿದೆ ಎಂದಿದ್ದಾರೆ.

ಬಣ್ಣಗಳ ಬಳಕೆ ಯಾವೆಲ್ಲ ಅಪಾಯ ತರಲಿದೆ: ಕೃತಕ ಸಿಂಥೆಟಿಕ್​ ಬಣ್ಣಗಳನ್ನು ಮಕ್ಕಳು ಸೇವಿಸಿದಾಗ ಅವರಲ್ಲಿ ಅಕ್ರಣಕಾರಿ ನಡುವಳಿಕೆ ಬೆಳವಣಿಗೆ ಉಂಟಾಗುವ ಸಾಧ್ಯತೆ ಇದೆ ಎಂದು ದೆಹಲಿಯ ಶ್ರೀ ಗಂಗಾ ರಾಮ್​ ಆಸ್ಪತ್ರೆಯ ಹಿರಿಯ ತಜ್ಞರಾದ ಡಾ ಪಿಯೂಷ್​ ರಂಜನ್​ ತಿಳಿಸಿದ್ದಾರೆ. ಇದರಲ್ಲಿನ ಕೆಲವು ಕಾರ್ಸಿನೋಜೆನಿಕ್​ ಮತ್ತು ಥೈರಾಯ್ಡ್​​ ಕ್ಯಾನ್ಸರ್​​ಗೆ ಕಾರಣವಾಗುತ್ತವೆ. ಈಗಾಗಲೇ ಅಸ್ತಮಾ ಮತ್ತು ಅಲರ್ಜಿ ಸಮಸ್ಯೆ ಹೊಂದಿರುವರಲ್ಲಿ ಕೃತಕ ಬಣ್ಣಗಳ ಸೇವನೆ ಮತ್ತಷ್ಟು ಆರೋಗ್ಯವನ್ನು ಬಿಗಡಾಯಿಸುತ್ತದೆ.

ಮಾರ್ಚ್​​ನಲ್ಲೇ ಕರ್ನಾಟಕದಲ್ಲಿ ನಿಷೇಧ: ಕಳೆದ ಮಾರ್ಚ್​ನಲ್ಲಿ ಕರ್ನಾಟಕದಲ್ಲಿ ಕಾಟನ್​ ಕ್ಯಾಂಡಿ ಮತ್ತು ಗೋಬಿ ಮಂಚೂರಿಗೆ ಬಳಕೆ ಮಾಡುತ್ತಿದ್ದ ಕೃತಕ ಬಣ್ಣವಾದ ರೊಡೊಮೈನ್​ - ಬಿಯನ್ನು ನಿಷೇಧಿಸಲಾಗಿತ್ತು.

ಕೃತಕ ಬಣ್ಣಗಳ ಆಹಾರ ಸೇವನೆಯಿಂದ ಆಕ್ಸಿಡೇಟಿವ್​ ಒತ್ತಡ ಮತ್ತು ಕೋಶಗಳ ಅಪೊಪ್ಟೋಸಿಸ್ ಮತ್ತು ಬ್ರೈನ್​ಸ್ಟೆಮ್​ ಮೇಲೆ ಪರಿಣಾಮ ಬೀರುತ್ತದೆ ಎಂದು ಗುರುಗ್ರಾಮದ ಮರೆಗೊ ಏಷ್ಯಾ ಆಸ್ಪತ್ರೆಯ ಹಿರಿಯ ಡಯಟಿಷಿಯನ್​ ವಂಶಿಕಾ ಭಾರಧ್ವಾಜ್ ತಿಳಿಸಿದ್ದಾರೆ. ​

ರೊಡೊಮೈನ್​ ಬಿ ಎಂಬುದು ಹಸಿರು ಬಣ್ಣದ ಪುಡಿಯ ರೂಪದಲ್ಲಿ ಸಿಗುತ್ತದೆ. ಇದು ನೀರಿನೊಂದಿಗೆ ಬೆರೆಸಿದಾಗ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇದು ಮೂತ್ರಪಿಂಡ, ಯಕೃತ್​​ಗೆ ಹಾನಿ ಮಾಡುವ ಜೊತೆಗೆ ಹೊಟ್ಟೆಯಲ್ಲಿ ಗಡ್ಡೆ ಬೆಳವಣಿಗೆಗೆ ಕಾರಣವಾಗಬಹುದು. ಈ ರೀತಿಯ ಕೃತಕ ಬಣ್ಣದ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಸೆರೆಬೆಲ್ಯೂಮ್​ ಅಂಗಾಂಶಕ್ಕೆ ಹಾನಿ ಆಗುತ್ತದೆ. ಮೆದುಳಿನ ಕಾರ್ಯಾಚರಣೆಗೂ ಅಡ್ಡಿಯುಂಟಾಗುತ್ತದೆ.

ಬಣ್ಣಗಳು ಅಲರ್ಜಿ ಪ್ರತಿಕ್ರಿಯೆ, ಅಧಿಕ ಕ್ರಿಯಾಶೀಲತೆ ಮತ್ತು ಏಕಾಗ್ರತೆ ಕೊರತೆಯ ಅಧಿಕ ಕ್ರಿಯಾಶೀಲತೆ ಸಮಸ್ಯೆ (ಎಡಿಹೆಚ್​ಡಿ)ಗೆ ಕಾರಣವಾಗುತ್ತದೆ. (IANS​)

ಇದನ್ನೂ ಓದಿ: ರಾಜ್ಯಾದ್ಯಂತ ಮೀನು, ಚಿಕನ್‌ ಕಬಾಬ್​ಗೆ ಕೃತಕ ಬಣ್ಣ ಬಳಕೆ ನಿಷೇಧ: ಉಲ್ಲಂಘಿಸಿದರೆ ಜೈಲು ಶಿಕ್ಷೆ, ಭಾರೀ ದಂಡ

Last Updated : Jun 26, 2024, 3:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.