ETV Bharat / health

ಸಾಗರದೊಳಗೆ ಭೂಮಿ ತಂಪಾಗಿಸುವ ಆಲ್ಗೆ ಪತ್ತೆ ಮಾಡಿದ ವಿಜ್ಞಾನಿಗಳು: ಈ ಆಲ್ಗೆಗಳು ಭೂಮಿ ತಂಪಾಗಿಸುವುದಾದರೂ ಹೇಗೆ? - ocean algae cool Earths climate - OCEAN ALGAE COOL EARTHS CLIMATE

ಸಾಗರದಾಳದಲ್ಲಿರುವ ಈ ಆಲ್ಗೆಗಳು ಭೂಮಿಯ ಹವಾಮಾನವನ್ನು ತಂಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.

An international team found a ocean algae that help cool to Earths climate
ಭೂಮಿ ತಂಪಾಗಿಸುವ ಆಲ್ಗೆ ((IANS))
author img

By ETV Bharat Karnataka Team

Published : Jun 12, 2024, 10:52 AM IST

ನವದೆಹಲಿ: ಹವಾಮಾನ ವೈಪರೀತ್ಯದ ಪರಿಣಾಮಕ್ಕೆ ಈಗಾಗಲೇ ಭೂಮಿ ಸಾಕ್ಷಿಯಾಗಿದೆ. 2023 ಭೂಮಿಯ ಅತ್ಯಂತ ಶಾಖದ ವರ್ಷ ಎಂದು ಕೂಡ ದಾಖಲಾಗಿದೆ. ಭೂಮಿಯನ್ನು ತಂಪಾಗಿಸುವ ನಿಟ್ಟಿನಲ್ಲಿ ಪರಿಹಾರದ ಕ್ರಮಗಳ ಕುರಿತು ಸಂಶೋಧಕರು ನಿರಂತರ ಸಂಶೋಧನಾ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ನಡುವೆ ಭೂಮಿಯ ಹವಾಮಾನವನ್ನು ತಂಪು ಮಾಡಲು ಸಹಾಯ ಮಾಡುವ ಹೊಸ ಅಲ್ಗೆ (ಪಾಚಿ)ಯೊಂದನ್ನು ಅಂತಾರಾಷ್ಟ್ರೀಯ ಸಂಶೋಧಕರ ತಂಡ ಪತ್ತೆ ಮಾಡಿದೆ. ಸಾಗರದಾಳದಲ್ಲಿರುವ ಈ ಆಲ್ಗೆಗಳು ಭೂಮಿಯ ಹವಾಮಾನವನ್ನು ತಂಪಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ಬೃಹತ್​ ಪ್ರಮಾಣದಲ್ಲಿ ಸಂಯುಕ್ತವನ್ನು ಉತ್ಪಾದಿಸುತ್ತಿದ್ದು, ಭೂಮಿ ತಂಪಾಗಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ಹೊಂದಿದೆ ಎಂದಿದ್ದಾರೆ ವಿಜ್ಞಾನಿಗಳು.

ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯ (ಯುಇಎ) ಮತ್ತು ಓಷನ್ ಯೂನಿವರ್ಸಿಟಿ ಆಫ್ ಚೀನಾದ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಈ ಪಾಚಿಗಳು ರೂಪುಗೊಳ್ಳುವಾಗ ಪೆಲಾಗೋಫೈಸಿ ಪಾಚಿಗಳನ್ನು ಡೈಮಿಥೈಲ್ಸಲ್ಫೋನಿಯೋಪ್ರೊಪಿಯೋನೇಟ್ (ಡಿಎಂಎಸ್​ಪಿ) ಎಂಬ ಸಂಯುಕ್ತವನ್ನು ಹೆಚ್ಚಾಗಿ ಉತ್ತಾದಿಸುತ್ತದೆ. ಇದು ಭೂಮಿ ತಂಪಾಗಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ

ಭೂಮಿ ಮೇಲೆ ಪೆಲಗೊಪೂಸಿಯಾ ಎಂಬ ಪಾಚಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಆದರೆ, ಇವು ಡಿಎಂಎಸ್​ಪಿಯ ಪ್ರಮುಖ ಉತ್ಪಾದಕರು ಎಂದು ಹಿಂದೆ ತಿಳಿದಿರಲಿಲ್ಲ ಎಂದು ಯುಇಎ ಬಯೋಲಾಜಿಕಲ್ ಸೈನ್ಸಸ್‌ನ ಪ್ರೊಫೆಸರ್ ಜೊನಾಥನ್ ಟಾಡ್ ತಿಳಿಸಿದ್ದಾರೆ.

ಈ ಆವಿಷ್ಕಾರವೂ ಉತ್ಸಾಹ ದಾಯಕವಾಗಿದ್ದು, ಡಿಎಂಎಸ್​ಪಿ ಹೇರಳವಾದ ಆಂಟಿಸ್ಟ್ರೆಸ್ ಸಂಯುಕ್ತವಾಗಿದೆ. ಇದು ಸೂಕ್ಷ್ಮಾಣುಜೀವಿಗಳಿಗೆ ಆಹಾರ ಮೂಲವಾಗಿದ್ದು, ಹವಾಮಾನ ತಂಪಾಗಿಸುವ ಅನಿಲಗಳ ಪ್ರಮುಖ ಮೂಲವಾಗಿದೆ. ಡಿಎಂಎಸ್​ಪಿ ಡಿಎಂಎಸ್​ ಎನ್ನುವ ಹವಾಮಾನದ ಸಕ್ರಿಯ ಅನಿಲದ ಮೂಲವಾಗಿದೆ. ಇದುನ್ನು ಕಡಲ ತೀರದ ವಾಸನೆ ಎಂದು ಕರೆಯಲಾಗುವುದು.

ಈ ಅಧ್ಯಯನವನ್ನು ನೇಚರ್ ಮೈಕ್ರೋಬಯಾಲಜಿಯಲ್ಲಿ ಪ್ರಕಟಿಸಲಾಗಿದೆ. ಡಿಎಂಎಸ್​ಪಿ ಉತ್ಪಾದಕತೆ ಮತ್ತು ಡಿಎಂಎಸ್​​ ಬಿಡುಗಡೆಯು ಊಹಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಜಾಗತಿಕ ಹವಾಮಾನ ನಿಯಂತ್ರಿಸುವಲ್ಲಿ ಸೂಕ್ಷ್ಮ ಜೀವಿಗಳ ಪಾತ್ರವನ್ನು ತಿಳಿಸಿದೆ. ಡಿಎಂಎಸ್​ ಆಕ್ಸಿಡೀಕರಣ ಉತ್ಪನ್ನಗಳು ಭೂಮಿಯಿಂದ ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಮೋಡಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಪರಿಣಾಮಕಾರಿಯಾಗಿ ಗ್ರಹವನ್ನು ತಂಪಾಗಿಸುತ್ತದೆ

ಈ ಅಲ್ಗೆಯ ನೈಸರ್ಗಿಕ ಪ್ರಕ್ರಿಯೆಯು ಭೂಮಿಯ ಹವಾಮಾನವನ್ನು ನಿಯಂತ್ರಿಸಲು ಅತ್ಯಗತ್ಯವಾಗಿದೆ. ಜಾಗತಿಕ ಸಲ್ಫರ್ ಚಕ್ರಕ್ಕೆ ಅವಶ್ಯವಾಗಿದೆ. ಸಾಗರಗಳಿಂದ ಸಲ್ಫರ್​ ಅನ್ನು ಭೂಮಿಗೆ ಹಿಂದಿರುಗಿಸುವ ಮುಖ್ಯ ಮಾರ್ಗವನ್ನು ಇದು ತಿಳಿಸುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ: ಕಳೆದ 10 ವರ್ಷಗಳಿಂದ 1.19 ಡಿಗ್ರಿ ಸೆಲ್ಸಿಯಸ್​ ತಾಪಮಾನ ಏರಿಕೆಗೆ ಮಾನವ ಚಟುವಟಿಕೆಗಳೇ ಕಾರಣವಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.