ETV Bharat / health

ಬಾದಾಮಿ ಸೇವನೆಯಿಂದ ಸ್ನಾಯು ನೋವು ಕಡಿಮೆ ಮಾಡಬಹುದು: ಅಧ್ಯಯನ

author img

By ETV Bharat Karnataka Team

Published : Feb 21, 2024, 12:21 PM IST

ವ್ಯಾಯಾಮದ ಬಳಿಕ ಕಾಡುವ ಸ್ನಾಯುವಿನ ನೋವನ್ನು ತಡೆಯುವಲ್ಲಿ ಬಾದಾಮಿ ಸಹಾಯ ಮಾಡಲಿದೆ ಎಂದು ಲಂಡನ್​ ವಿಜ್ಞಾನಿಗಳು ನಡೆಸಿದ ಅಧ್ಯಯನ ತಿಳಿಸಿದೆ.

almonds-help-to-faster-muscle-recovery
almonds-help-to-faster-muscle-recovery

ನವದೆಹಲಿ: ವ್ಯಾಯಾಮದ ಬಳಿಕ ಸ್ನಾಯು ದುರ್ಬಲತೆ ಮತ್ತು ನೋವಿನ ಸಮಸ್ಯೆ ಕಾಡುತ್ತಿದ್ದರೆ, ನಿಯಮಿತವಾಗಿ ಬಾದಾಮಿ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ಒಂದು ಹಂತದವರೆಗೆ ತಡೆಗಟ್ಟಬಹುದು ಎಂದು ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲದೆ, ಬಾದಾಮಿ ಸೇವನೆಯಿಂದಾಗಿ ಕೆಲವು ದೈಹಿಕ ಚಟುವಟಿಕೆಗಳ ಪ್ರದರ್ಶನದಲ್ಲಿ ಸುಧಾರಣೆ ಕಾಣಬಹುದಾಗಿದೆ ಎಂದು ಲಂಡನ್​ನ ಕಿಂಗ್ಸ್​​ ಕಾಲೇಜು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಅವರು ಸಾಧಾರಣ ಸ್ಥೂಲಕಾಯ ಹೊಂದಿರುವ ಮಧ್ಯಮ ವಯಸ್ಸಿನ ಮಹಿಳೆಯರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅವರಿಗೆ ಎಂಟು ವಾರಗಳ ಕಾಲ ನಿತ್ಯ 57 ಗ್ರಾಂನಷ್ಟು ಬಾದಾಮಿ ನೀಡಲಾಗಿತ್ತು. ಮತ್ತೊಂದು ಗುಂಪಿಗೆ ವಿಭಿನ್ನ ಆಹಾರ ಪದ್ಧತಿ ನೀಡಲಾಗಿದ್ದು, ಬಾದಾಮಿ ಬದಲಾಗಿ ಅಷ್ಟೇ ಕ್ಯಾಲರಿ ಹೊಂದಿರುವ ಬೇರೆ ಆಹಾರವನ್ನೂ ಕೂಡಾ ನೀಡಲಾಗಿತ್ತು. ಈ ಎರಡು ಗುಂಪುಗಳಿಗೆ ನೀಡಲಾದ ಡಯಟ್​ ಬಳಿಕ ಅರ್ಧ ಗಂಟೆಗಳ ಕಾಲ ಟ್ರೆಡ್ ಮಿಲ್​ನಲ್ಲಿ ಓಡುವ ಪರೀಕ್ಷೆ ಕೂಡಾ ಏರ್ಪಡಿಸಲಾಗಿತ್ತು . ಈ ಪರೀಕ್ಷೆಯನ್ನು ಸ್ನಾಯುಗಳಿಗೆ ಹಾನಿ ಮಾಡಲು ವಿನ್ಯಾಸಗೊಳಿಸಲಾಗಿತ್ತು. ಇದರಿಂದ ಬಾದಾಮಿ ಸ್ನಾಯುವಿನ ಚೇತರಿಕೆಗೆ ಸಹಾಯ ಮಾಡುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗಿತ್ತು. ಜೊತೆಗೆ ಅವರ ರಕ್ತ ಸಂಬಂಧಿತ ಸೂಚಕಗಳ ಮಟ್ಟವನ್ನು ಕೂಡಾ ಇದೇ ವೇಳೆ ಅಳೆಯಲಾಗಿದೆ. ಇದನ್ನು ಟ್ರೆಡ್ ಮಿಲ್ ಪರೀಕ್ಷೆಯ ಮೊದಲು, ಸಮಯದಲ್ಲಿ ಮತ್ತು ನಂತರ ಪರೀಕ್ಷೆ ಕೈಗೊಳ್ಳಲಾಗಿತ್ತು.

ಈ ವೇಳೆ ವಿಜ್ಞಾನಿಗಳು ಬಾದಾಮಿ ಸೇವನೆ ಮಾಡಿದ ಗುಂಪಿನ ಮಂದಿಯಲ್ಲಿ ಸ್ನಾಯು ನೋವು ಶೀಘ್ರ ಉಪಶಮನ ಆಗುವುದನ್ನು ಕಂಡುಕೊಂಡರು. ಅಲ್ಲದೇ ಇದಾದ ಬಳಿಕ ಅವರಿಗೆ ನಡೆಸಲಾದ ನೇರ ಜಂಪ್​ ಸ್ಪರ್ಧೆಯಲ್ಲಿ ಅವರೆಲ್ಲರ ಪ್ರದರ್ಶನ ಕೂಡ ಉತ್ತಮವಾಗಿದೆ ಎಂಬುದು ತಿಳಿದು ಬಂತು. ಈ ಸಮಯದಲ್ಲಿ ಅವರ ಸ್ನಾಯುವಿನ ನೋವು ಶೇ 25ರಷ್ಟು ಕಡಿಮೆಯಾಗಿದೆ. ಬಾದಾಮಿಯಲ್ಲಿ ನೈಸರ್ಗಿಕ ಪೋಷಕಾಂಶಗಳಿವೆ. ಇದರಲ್ಲಿ ಪ್ರೋಟೀನ್​​, ಉತ್ತಮ ಕೊಬ್ಬು ಮತ್ತು ವಿಟಮಿನ್​ ಇ ಇದ್ದು, ಇವು ದೇಹಕ್ಕೆ ಉತ್ತಮವಾಗಿವೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಲಾಗಿತ್ತು.

8 ವಾರಗಳ ಬಾದಾಮಿ ಸೇವನೆ ಬಳಿಕ ಅಧ್ಯಯನದ ಭಾಗಿದಾರರ ದೇಹದ ರಚನೆ, ಹೃದಯದ ಆರೋಗ್ಯ, ಮಾನಸಿಕ ಮತ್ತು ಸಾಮಾಜಿಕ ಮನಸ್ಥಿತಿ, ಹಸಿವು, ಯೋಗಕ್ಷೇಮಗಳ ಮೇಲೆ ನಿಗಾ ಇಟ್ಟು, ಅದರ ಬಗ್ಗೆ ಗಮನಿಸಲಾಗಿತ್ತು. ನಮ್ಮ ಅಧ್ಯಯನವೂ ತಿಳಿಸುವಂತೆ ವ್ಯಾಯಾಮಕ್ಕೆ ಹೋಗುವ ಸಂದರ್ಭದಲ್ಲಿ ಬಾದಾಮಿ ಸೇವನೆಯು ಫಿಟ್ನೆಸ್​ ಕಾಯ್ದುಕೊಳ್ಳಲು ಮತ್ತು ಸ್ನಾಯುವಿನ ಶಕ್ತಿ ಕಾಪಾಡಲು ಸಹಾಯ ಮಾಡುತ್ತದೆ. ಬಾದಾಮಿಯನ್ನು ಫಿಟ್ನೆಸ್​​ಗೆ ಉತ್ತಮ ಆಹಾರ ಎಂದು ಗುರುತಿಸಲಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

ಇದನ್ನೂ ಓದಿ: ಮಧುಮೇಹ, ಹೃದಯ ಅಪಾಯದ ಭಯವೇಕೆ? ಸ್ನಾಕ್​ ಬದಲು ಇದನ್ನು ಸೇವಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.