ಜಗತ್ತು ಆಧುನಿಕತೆಯತ್ತ ವೇಗವಾಗಿ ಸಾಗುತ್ತಿದ್ದರೂ ಜನ ತಾವು ಬಲವಾಗಿ ನಂಬುವ ಕೆಲವು ವಿಚಾರಗಳನ್ನೂ ಜೊತೆಜೊತೆಯಲ್ಲೇ ಕೊಂಡೊಯ್ಯುತ್ತಾರೆ. ಇದಕ್ಕೆ ಉದಾಹರಣೆ ಮನಿ ಪ್ಲಾಂಟ್. ಹೌದು, ಕೆಲವರಿಗೆ ಇದರಲ್ಲಿ ನಂಬಿಕೆ ಇಲ್ಲದೇ ಇರಬಹುದು. ಆದರೆ ಈ ಗಿಡವನ್ನು ದೇವರಂತೆ ಪೂಜಿಸುವ ಅನೇಕರಿದ್ದಾರೆ. ಪಾಸಿಟಿವ್ ವೈಬ್ ಜೊತೆಗೆ ಆರ್ಥಿಕ ಆದಾಯವನ್ನೂ ಇದು ವೃದ್ಧಿಸುತ್ತದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ.
ಆದರೆ ನಿಮಗೆ ಗೊತ್ತೇ? ಕೇವಲ ಮನಿ ಪ್ಲಾಂಟ್ ಅನ್ನು ಮನೆಗೆ ತಂದಿಟ್ಟರೆ ನಿಮ್ಮ ಬದುಕಿನಲ್ಲಿ ಏನೂ ಬದಲಾವಣೆ ಆಗದೇ ಇರಬಹುದು. ಗಿಡದ ಮೇಲಿನ ನಂಬಿಕೆಯೂ ಹುಸಿಯಾಗಬಹುದು. ಈ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು.
ಮನಿ ಪ್ಲಾಂಟ್‌ಗೆ ಹಾಲಿನ ಹನಿ: ವಾಸ್ತು ಪ್ರಕಾರ, ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಅದಕ್ಕೆ ಪ್ರತಿದಿನ ಕೆಲವು ಹನಿ ಹಾಲು ಹಾಕಿ. ಈ ರೀತಿ ಮಾಡುವುದು ಮಂಗಳಕರ ಎಂದು ನಂಬಲಾಗಿದೆ. ಇದರಿಂದ ಲಕ್ಷ್ಮಿ ಅಂದರೆ ಧನಸಂಪತ್ತು ತ್ವರಿತವಾಗಿ ವೃದ್ಧಿಯಾಗುವುದಂತೆ.
ಸಕ್ಕರೆ: ಮನಿ ಪ್ಲಾಂಟ್‌ಗೆ ಸಕ್ಕರೆ ಹಾಕುವುದು ಕೂಡಾ ಶುಭಕರ ಎಂದು ಪರಿಗಣಿಸಲಾಗಿದೆ. ಇದು ಲಕ್ಷ್ಮಿಯನ್ನು ತೃಪ್ತಿಗೊಳಿಸುತ್ತದೆ. ಮನೆಯಲ್ಲಿ ಸಂಪತ್ತು, ಸಮೃದ್ಧಿ ಇರುತ್ತದೆ ಎಂದು ನಂಬುತ್ತಾರೆ.
ಮನೆಯಲ್ಲಿ ನೊಣಗಳ ಕಾಟ ಹೆಚ್ಚಾಗಿದೆಯೇ?: ಹೀಗೆ ಮಾಡಿದ್ರೆ ಖಂಡಿತಾ NOಣ! - Tips To Get Rid Of Houseflies