ಹೈದರಾಬಾದ್: ಹಲ್ಲುಗಳ ಹೊಳಪು ಮತ್ತು ಅಂದವನ್ನು ಕಾಪಾಡಲು ಹಲ್ಲುಜ್ಜುವುದು ಒಂದೇ ಸಾಕಾಗುವುದಿಲ್ಲ. ಹಲ್ಲಿನ ಎನಮೆಲ್ (ದಂತಕವಚ) ಪದರವನ್ನು ಗಟ್ಟಿಯಾಗಿಸುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ಹಲ್ಲಿನ ಹುಳುಕಿನಿಂದ ರಕ್ಷಣೆ ಮಾಡುವ ಮೊದಲ ಅಂಶವೂ ಇದಾಗಿದೆ. ಸೇವಿಸುವ ಆಹಾರಗಳು, ಜ್ಯೂಸ್, ಕೆಲವು ಔಷಧಗಳಿಂದ ದಂತಕವಚ ಪದರದಲ್ಲಿನ ಖನಿಜಗಳನ್ನು ಕಡಿಮೆ ಮಾಡಬಹುದು. ಹಾಗಾದರೆ ಹಲ್ಲನ್ನು ದುರ್ಬಲಗೊಳಿಸುವ ಅಂಶ ಯಾವುದು? ಅದನ್ನು ಶಕ್ತಿಯುತವಾಗಿಸಬೇಕು ಎಂದರೆ ಏನು ಮಾಡಬೇಕು ಎಂಬ ಕುರಿತು ತಿಳಿಯುವುದು ಅತ್ಯವಶ್ಯಕ.
ಮಗುವಿನ ಆರನೇ ತಿಂಗಳಲ್ಲಿ ಹಲ್ಲಿನ ಮೊಳಕೆ ಪ್ರಾರಂಭವಾಗುತ್ತದೆ. ಆದರೆ, ತಾಯಿಯ ಗರ್ಭದಲ್ಲಿ ಇದರ ರಚನೆಗಳಿಗೆ ಅಡಿಪಾಯ ಹಾಕಲಾಗಿರುತ್ತದೆ. ಅಧ್ಯಯನದಲ್ಲಿ ತೋರಿಸುವಂತೆ, ತಾಯಿಯಲ್ಲಿ ಗರ್ಭಾವಸ್ಥೆಯಲ್ಲಿನ ವಿಟಮಿನ್ ಡಿ ಕೊರತೆ ಮತ್ತು ಮಧುಮೇಹಗಳು ಮಕ್ಕಳಲ್ಲಿನ ದಂತಕವಚ ಊನಕ್ಕೆ ಕಾರಣವಾಗುತ್ತದೆ. ಕೆಲವು ಅಧ್ಯಯನಗಳು ತೋರಿಸುವಂತೆ, ಬಾಲ್ಯಾವಸ್ಥೆಯ ಅಪೌಷ್ಠಿಕತೆ, ದಡಾರ, ನ್ಯೂಮೋನಿಯಾ ಮತ್ತು ಪದೇ ಪದೆ ಜ್ವರ ಬರುವುದರಿಂದ ಈ ದಂತಕವಚದ ಮೇಲೆ ಹಾನಿ ಉಂಟು ಮಾಡುತ್ತದೆ. ಇದು ಕಡಿಮೆಯಾದಂತೆ ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹದಿಹರೆಯದವರು ಮತ್ತು ವಯಸ್ಕರಲ್ಲಿ ಈ ದಂತಕವಚಕ್ಕೆ ಪ್ರಮುಖ ಕಾರಣ ಎಂದರೆ ಹುಳಿ ಹಣ್ಣಿನ ಜ್ಯೂಸ್, ಸ್ಪೋರ್ಟ್ಸ್ ಡ್ರಿಂಕ್ಸ್, ಸೋಡಾ ಮತ್ತು ವಿನಿಗರ್ ಆಧಾರಿತ ಉಪ್ಪಿನಕಾಯಿ ಸೇವನೆ. ಕಾಫಿ ಕೂಡ ಇದರ ಶಕ್ತಿ ಕುಗ್ಗಿಸಿದರೂ ಇದು ಸೋಡದಂತೆ ಹೆಚ್ಚಿನ ಹಾನಿ ಮಾಡುವುದಿಲ್ಲ. ಆದಾಗ್ಯೂ ಸಕ್ಕರೆಯಿಂದ ಕಾಫಿವರೆಗೆ ಬಾಯಿಯಲ್ಲಿನ ಬ್ಯಾಕ್ಟೀರಿಯಾದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಉತ್ಪಾದಿಸುವ ಆಮ್ಲಗಳು ಹಲ್ಲನ್ನು ಹಾನಿ ಮಾಡುತ್ತದೆ.
ದೀರ್ಘಕಾಲದ ಜೀರ್ಣಕ್ರಿಯೆ ಜ್ಯೂಸ್ ಮತ್ತು ಪದೇ ಪದೆ ವಾಂತಿಯಿಂದ ಕೂಡ ದಂತಕವಚದ ಮೇಲೆ ಹಾನಿ ಮಾಡುತ್ತದೆ. ಜೊತೆಗೆ ಒಣ ಬಾಯಿ ಕೂಡ ಸಮಸ್ಯೆ ತರುತ್ತದೆ. ಸಾಮಾನ್ಯವಾಗಿ ಲಾಲಾರಸವು ಈ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಕ್ಯಾಲ್ಸಿಯಂ ಭರಿತ ಹಸಿರು ತರಕಾರಿ, ನಟ್ಸ್, ಬೆಳೆಕಾಳು ಮತ್ತು ಮಾಂಸದಲ್ಲಿರುವ ಮಿನರಲ್ಸ್ಗಳು ಹಲ್ಲಿನಲ್ಲಿ ಸೇರುತ್ತದೆ. ಒಣ ಬಾಯಿ ಹೊಂದಿರುವವರು ಸರಿಯಾದ ನಿರ್ವಹಣೆ ಮಾಡದೇ ಹೋದಲ್ಲಿ ಕೆಲವು ನಿರ್ದಿಷ್ಟ ರೋಗ ಮತ್ತು ಚಿಕಿತ್ಸೆಗೆ ಗುರಿಯಾಗಿಸುತ್ತದೆ. ಕಾರಣ ಇದು ಹಲ್ಲು ಮತ್ತು ದಂತ ಕವಚದ ದುರ್ಬಲತೆಗೆ ಕಾರಣವಾಗುತ್ತದೆ.
ಹೇಗೆ ಬಲಗೊಳಿಸಬೇಕು: ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ಹಲ್ಲುಜ್ಜುವುದು ಅವಶ್ಯ. ಹಲ್ಲಿನ ಮಧ್ಯೆ ಇರುವ ಫ್ಲೊಸಿಂಗ್ ಪ್ರಮುಖವಾಗಿದೆ. ಆದರೆ, ಏನಾದರೂ ತಿಂದು ಅಥವಾ ಕುಡಿದಾಕ್ಷಣ ಬ್ರಶ್ ಮಾಡುವುದು ಉತ್ತಮವಾಲ್ಲ. ಅದರಲ್ಲೂ ಹುಳಿ ಆಹಾರ ಅಥವಾ ಪಾನೀಯ ಸೇವಿಸಿದಾಗ ಕನಿಷ್ಠ ಅರ್ಧಗಂಟೆ ಬಳಿಕವೇ ಹಲ್ಲುಜ್ಜಬೇಕು. ಕಾರಣ ಬಾಯಿಯಲ್ಲಿರುವ ಆಮ್ಲಗಳು ದಂತಕವಚವನ್ನು ಹಾನಿ ಮಾಡುತ್ತದೆ. ಹುಳಿ ಪದಾರ್ಥಗಳ ಸೇವನೆ ಬಳಿಕ ತಕ್ಷಣಕ್ಕೆ ಹಲ್ಲುಜ್ಜುವುದರಿಂದ ದಂತಕವಚ ಹಾನಿಯಾಗುವ ಸಾಧ್ಯತೆ ಇದೆ.
ಹಲ್ಲನ್ನು ಫ್ಲೋರೈಡ್ ಟೂಥ್ಪೇಸ್ಟ್ನಿಂದ ಹಲ್ಲುಜ್ಜುವುದು ಉತ್ತಮ. ಇದರಲ್ಲಿನ ಕ್ಯಾಲ್ಸಿಯಂ ಮತ್ತು ಫೊಸ್ಫರಸ್ ಜೊತೆಗೆ ಮಿಶ್ರಣವಾಗಿ, ದಂತಕವಚವನ್ನು ಬಲಗೊಳಿಸುತ್ತದೆ. ಹಲ್ಲಿನ ಹುಳಕಿನಿಂದ ರಕ್ಷಿಸುತ್ತದೆ.
ಸಕ್ಕರೆ ಭರಿತ ಆಹಾರವನ್ನು ಹೆಚ್ಚಾಗಿ ಸೇವಿಸದಿರುವುದು ಉತ್ತಮ. ಬಾಯಲ್ಲಿ ಯಾವಾಗಲೂ ಏನಾದರೂ ಜಗಿಯುವುದನ್ನು ತಪ್ಪಿಸಬೇಕು. ಒಂದು ವೇಳೆ ಪದೆ ಪದೇ ತಿನ್ನುವುದರಿಂದ ಹಲ್ಲು ಆಮ್ಲತೆಗೆ ಹೆಚ್ಚು ಒಡ್ಡಿಕೊಳ್ಳುತ್ತದೆ. ಬ್ಯಾಕ್ಟೀರಿಯಾ ಬೆಳೆಯುತ್ತದೆ. ಏನಾದರೂ ತಿನ್ನುವ ಅಥವಾ ಪಾನೀಯ ಸೇವಿಸಿದಾಗ ತಕ್ಷಣಕ್ಕೆ ಬಾಯನ್ನು ನೀರಿನಿಂದ ತೊಳೆಯಿರಿ. ಲಾಲಾರಸದ ಉತ್ಪಾದನೆ ಹೆಚ್ಚಿಸಿ, ದಂತಕವಚ ರಕ್ಷಣೆಗೆ ಸಹಾಯ ಮಾಡುತ್ತದೆ.
ನಿಯಮಿತವಾಗಿ ದಂತವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಿದೆ. ಹಲ್ಲು ಹಾನಿಗೆ ಒಳಗಾದರೆ, ಅವುಗಳನ್ನು ಆರಂಭದಲ್ಲೇ ಪತ್ತೆ ಮಾಡಬೇಕು. ದಂತಕವಚವೂ ನಾಶವದಲ್ಲಿ ಅದನ್ನು ಸರಿಪಡಿಸಲಾಗದು.
ಇದನ್ನೂ ಓದಿ: ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ; ನೈಸರ್ಗಿಕ ಪದಾರ್ಥಗಳಲ್ಲೇ ಇದೆ ಪರಿಹಾರ