ಗುರುಗ್ರಾಮ, ಹರಿಯಾಣ: ವ್ಯಕ್ತಿಯ ಬೆನ್ನಿನಲ್ಲಿ ಗೋಣಿ ಚೀಲದಂತೆ ಜೋತು ಬಿದ್ದಿದ್ದ 16.7 ಕೆಜಿ ತೂಕದ ಭಾರಿ ಗಾತ್ರದ ಟ್ಯೂಮರ್ ಅನ್ನು ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಿದ್ದಾರೆ. ಇದಕ್ಕಾಗಿ ಬರೋಬ್ಬರಿ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೀಗ ರೋಗಿ ಆರೋಗ್ಯವಾಗಿದ್ದಾರೆ.
ಫೆಸಿಫಿಕ್ ದ್ವೀಪ ಮೂಲದ 27 ವರ್ಷದ ವ್ಯಕ್ತಿ ಈ ರೀತಿ ಕ್ಯಾನ್ಸರೇತರ ಟ್ಯೂಮರ್ ಹೊಂದಿದ್ದರು. 2008 ರಿಂದ ಇವರ ಬೆನ್ನಿನಲ್ಲಿ ಈ ಟ್ಯೂಮರ್ ಬೆಳೆಯುತ್ತಿದ್ದು, ಇದು ಅಂತಿಮವಾಗಿ 58*50 ಸೇಮಿ. ಗಾತ್ರಕ್ಕೆ ಬೆಳೆದು ನಿಂತಿತ್ತು. ಗುರುಗ್ರಾಮದ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸುಟಿಟ್ಯೂಟ್ (ಎಫ್ಎಂಆರ್ಐ) ವೈದ್ಯರು ಈ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.
ದೈತ್ಯ ನ್ಯೂರೋಫೈಬ್ರೊಮಾ ಎಂಬ ಈ ಗಡ್ಡೆ ನರದ ಟ್ಯೂಮರ್ ಆಗಿದೆ. ಇದು ಚರ್ಮದ ಅಡಿ ಹಲವು ವರ್ಷಗಳ ಕಾಲ ನಿಧಾನವಾಗಿ ಬೆಳೆಯುತ್ತಾ ಹೋಗುತ್ತದೆ ಎಂದು ಎಫ್ಎಂಆರ್ಐನ ಸರ್ಜಿಕಲ್ ಆನ್ಕಾಲೊಜಿ ಹಿರಿಯ ನಿರ್ದೇಶಕರಾದ ನಿರಂಜನ್ ನಾಯ್ಕ್ ತಿಳಿಸಿದ್ದಾರೆ. ಅನುವಂಶಿಕ ಅಸ್ವಸ್ಥತೆ ಈ ರೀತಿಯ ಟ್ಯೂಮರ್ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ರೋಗಿಯ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಚಲನೆ ನಿರ್ಬಂಧಿಸುತ್ತದೆ. ಈ ಟ್ಯೂಮರ್ನಿಂದ ಕೆಲವು ವೇಳೆ ಕಿರಿಕಿರಿ ಅಥವಾ ನೋವು, ಮತ್ತೆ ಕೆಲವು ಸಲ ರಕ್ತಸ್ರಾವ ಉಂಟಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಟ್ಯೂಮರ್ ಗಾತ್ರ ಮತ್ತು ಸಂಕೀರ್ಣತೆ ಆಧಾರಿಸಿ ಕೆಲವು ಹೆಚ್ಚಿನ ಅಪಾಯ ಇರುತ್ತದೆ. ಈ ಹಿನ್ನೆಲೆಯಲ್ಲಿ ಯುವ ರೋಗಿಗೆ ವಿವಿಧ ದೇಶದ ಅನೇಕ ಅಸ್ಪತ್ರೆಗಳಲ್ಲಿ ಸರ್ಜರಿಗೆ ನಿರಾಕರಿಸಲಾಗಿತ್ತು. ಈ ಗೆಡ್ಡೆಗಳು ನಾಳೀಯ ಸ್ವಭಾವವನ್ನು ಹೊಂದಿವೆ, ಹೆಚ್ಚಿನ ಪ್ರದೇಶಗಳಲ್ಲಿ ರಕ್ತದ ದೊಡ್ಡ ಜಾಲಗಳನ್ನು ಹೊಂದಿರುತ್ತವೆ. ಇದರಿಂದಾಗಿ ಅನಿಯಂತ್ರಿತ ರಕ್ತಸ್ರಾವದ ಹೆಚ್ಚಿನ ಅಪಾಯ ಕೂಡ ಶಸ್ತ್ರಚಿಕಿತ್ಸೆ ವೇಳೆ ಎದುರಾಗುತ್ತದೆ. ಈ ಅಪಾಯವನ್ನು ನಿರ್ವಹಣೆ ಮಾಡುವ ಮೂಲಕ ಆರಂಭದಲ್ಲಿ ಎರಡು ವಿಧದ ಚಿಕಿತ್ಸೆ ನೀಡಿ 11 ಪ್ರಮುಖ ರಕ್ತನಾಳಗಳನ್ನು ತಡೆ ಹಿಡಿಯಲಾಗಿತ್ತು.
ಈ ಟ್ಯೂಮರ್ ರೋಗಿ ಬೆನ್ನನ್ನು ಸಂಪೂರ್ಣ ಆವರಿಸಿದ್ದು, ಶಸ್ತ್ರ ಚಿಕಿತ್ಸೆ ಬಳಿಕ ವ್ಯಕ್ತಿ ಬೆನ್ನನನ್ನು ವ್ಯಕ್ತಿಯ ತೊಡೆಯ ಚರ್ಮದ ಬದಲಾಗಿ ಟ್ಯೂಮರ್ನಿಂದ ಪಡೆಯಲಾಗಿದ್ದ ಚರ್ಮದಿಂದಲೇ ಮುಚ್ಚಲಾಗಿದೆ. ಈ ಚರ್ಮ ಕ್ಯಾನರ್ ರಹಿತವಾಗಿದೆ. 10 ಗಂಟೆಗಳ ಯಶಸ್ವಿ ಶಸ್ತ್ರ ಚಿಕಿತ್ಸೆಯಲ್ಲಿ ವ್ಯಕ್ತಿ ಸಂಪೂರ್ಣ ಬೆನ್ನನ್ನು ನಾವೀನ್ಯ ಪ್ರಕ್ರಿಯೆ ಮೂಲಕ ಸಹಜವಾಗಿ ಮುಚ್ಚಲಾಗಿದೆ.
ವ್ಯಕ್ತಿ ನಾಲ್ಕು ದಿನದ ಹಿಂದೆ ಡಿಸ್ಚಾರ್ಜ್ ಆಗಿದ್ದು, ಆತನ ಪರಿಸ್ಥಿತಿ ದೃಢವಾಗಿದೆ. ರೋಗಿ ಸಂಪೂರ್ಣ ಮುಕ್ತವಾಗಿದ್ದು, ಉಳಿದ ಜೀವನವನ್ನು ಉತ್ತಮ ಗುಣಮಟ್ಟದೊಂದಿಗೆ ಕಳೆಯಬಹುದಾಗಿದೆ ಎಂದು ವೈದ್ಯರು ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಮಧುಮೇಹಿಗಳು ಮದ್ಯ ಸೇವನೆ ಮಾಡಬಹುದೇ; ವೈದ್ಯರು ಹೇಳುವುದೇನು ಗೊತ್ತಾ?