ETV Bharat / bharat

ಗುಜರಾತ್​​: ರೈಲು ಹಳಿ ತಪ್ಪಿಸಲು ಮತ್ತೊಂದು ಸಂಚು, ತಪ್ಪಿದ ಅನಾಹುತ - attempt to derail a train

ಸೂರತ್​ನ ಕಿಮ್​ ಜಂಕ್ಷನ್​ ರೈಲು ನಿಲ್ದಾಣದ ಬಳಿ ಶನಿವಾರ ಮುಂಜಾನೆ ಈ ಪ್ರಕರಣ ಬೆಳಕಿಗೆ ಬಂದಿದೆ.

another attempt to derail a train was reported in Gujarat
ಹಳಿ ತಪ್ಪಿಸಲು ಸಂಚು (IANS)
author img

By ETV Bharat Karnataka Team

Published : Sep 21, 2024, 12:48 PM IST

ನವದೆಹಲಿ: ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಬಳಿಕ ಗುಜರಾತ್​ನಲ್ಲೂ ರೈಲು ಹಳಿ ತಪ್ಪಿಸುವ ಪ್ರಯತ್ನವೊಂದು ನಡೆದಿದ್ದು, ಅದೃಷ್ಟವಶಾತ್​ ಇದು ವಿಫಲವಾಗಿದೆ. ಗುಜರಾತ್​ನ ಸೂರತ್​ನಲ್ಲಿ ಹಳಿಗಳ ಮೇಲಿನ ಫಿಶ್​ ಪ್ಲೇಟ್​ ಮತ್ತು ಕೀಗಳನ್ನು ಕಿತ್ತು ಹಾಕಿ ರೈಲು ಅಪಘಾತಕ್ಕೆ ಸಂಚು ರೂಪಿಸುವ ಪ್ರಕರಣ ಬೆಳಕಿಗೆ ಬಂದಿದೆ.

ಸೂರತ್​ನ ಕಿಮ್​ ಜಂಕ್ಷನ್​ ರೈಲು ನಿಲ್ದಾಣದ ಬಳಿ ಶನಿವಾರ ಮುಂಜಾನೆ ಈ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗ್ಗೆ 5ಗಂಟೆ ಸುಮಾರಿಗೆ ಟ್ರ್ಯಾಕ್​ ಮ್ಯಾನ್​ ಹಳಿ ಪರಿಶೀಲಿಸುವಾಗ, ಈ ದುಷ್ಕೃತ್ಯ ಬಯಲಾಗಿದೆ.

ತಕ್ಷಣಕ್ಕೆ ಈ ಕುರಿತು ಸ್ಟೇಷನ್​ ಮಾಸ್ಟರ್​ ಮತ್ತು ರೈಲ್ವೆ ಸುರಕ್ಷಾ ದಳ (ಆರ್​ಪಿಎಫ್​)ಗೆ ಸುದ್ದಿ ತಲುಪಿಸಲಾಗಿದೆ. ರೈಲುಗಳ ಸೇವೆಯಲ್ಲಿ ಯಾವುದೇ ರೀತಿ ವ್ಯತ್ಯಯವಾಗದಂತೆ ತಕ್ಷಣಕ್ಕೆ ಇದರ ದುರಸ್ತಿ ಕಾರ್ಯ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ದಿನದಲ್ಲಿ ರೈಲು ಹಳಿ ತಪ್ಪಿಸುವ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಅದೇ ರೀತಿ ದೃಷ್ಕೃತ್ಯದ ಯತ್ನ ನಡೆಸಲಾಗಿದೆ.

ಸೆಪ್ಟೆಂಬರ್​ 10ರಂದು ರಾಜಸ್ಥಾನದ ಅಜ್ಮೇರ್‌ನಲ್ಲಿ ಸರಧಾನ ಮತ್ತು ಬಂಗಧ್ ನಡುವಿನ ರೈಲ್ವೆ ಹಳಿಗಳ ಮೇಲೆ 100 ಕೆಜಿ ತೂಕದ ಎರಡು ಸಿಮೆಂಟ್​ ಬ್ಲಾಕ್​ ಇರಿಸಲಾಗಿತ್ತು. ಈ ಸಿಮೆಂಟ್​ ಬ್ಲಾಕ್​ಗೆ ಗೂಡ್ಸ್​ ರೈಲು​ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​ ಭಾರೀ ಪ್ರಮಾದ ತಪ್ಪಿತ್ತು.

ಇದಕ್ಕೆ ಮುನ್ನದಿನ ಉತ್ತರ ಪ್ರದೇಶದ ಭಿವಾನಿ-ಪ್ರಯಾಗ್​ರಾಜ್​ ಮಾರ್ಗದ ಕಾಳಿಂದಿ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸಲು ಕಾನ್ಪುರದಲ್ಲಿ ದುಷ್ಕರ್ಮಿಗಳು ಎಲ್​ಪಿಜಿ ಸಿಲಿಂಡರ್​ ಜೊತೆಗೆ ಪೆಟ್ರೋಲ್​ ಮತ್ತು ಬೆಂಕಿಪೊಟ್ಟಣವನ್ನು ಟ್ರ್ಯಾಕ್​ ಮೇಲೆ ಎಸೆದಿದ್ದರು. ಇದನ್ನು ಗಮನಿಸಿದ ಲೋಕೋ ಪೈಲಟ್​ ತುರ್ತು ಬ್ರೇಕ್​ ಹಾಕಿ ರೈಲು ನಿಲ್ಲಿಸಿ, ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದರು.

ಇತ್ತೀಚಿನ ತಿಂಗಳಲ್ಲಿ ದೇಶದ ವಿವಿಧ ಮೂಲೆಗಳಲ್ಲಿ ಈ ರೀತಿ ರೈಲು ಹಳಿ ತಪ್ಪಿಸುವ ಅನೇಕ ಪ್ರಯತ್ನಗಳು ಬೆಳಕಿಗೆ ಬಂದಿದೆ. ಆಗಸ್ಟ್​ 27ರಂದು ಉಧ್ನಾ ರೈಲ್ವೆ ಯಾರ್ಡ್‌ನಲ್ಲಿ ನಾಲ್ಕು ಬೋಗಿಗಳು ಹಳಿತಪ್ಪಿದವು. ಇದಕ್ಕೆ ಮೊದಲು ಆಗಸ್ಟ್​ 17ರಂದು ಉತ್ತರ ಪ್ರದೇಶದ ಕಾನ್ಪುರ ರೈಲು ನಿಲ್ದಾಣದ ಬಳಿ ರೈಲು ಬಂಡೆಗೆ ಬಡಿದ ನಂತರ ಸಬರಮತಿ ಎಕ್ಸ್‌ಪ್ರೆಸ್‌ನ ಕನಿಷ್ಠ 20 ಬೋಗಿಗಳು ಹಳಿತಪ್ಪಿದ್ದವು. ಈ ಘಟನೆಗಳು ದೇಶಾದ್ಯಂತ ರೈಲು ಕಾರ್ಯಾಚರಣೆಗಳ ಸುರಕ್ಷತೆಯ ಕುರಿತು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಕುರಿತು ಸೂಚಿಸಲಾಗಿತ್ತು.

ಇನ್ನು ಈ ಎಲ್ಲಾ​ ಘಟನೆ ಕುರಿತು ಮಾತನಾಡಿರುವ ರೈಲ್ವೆ ಅಧಿಕಾರಿಗಳು, ಈ ಸಂಬಂಧ ತನಿಖೆ ನಡೆಸಲಾಗುವುದು. ಭಾರತೀಯ ರೈಲ್ವೆಯನ್ನು ಹಾನಿ ಮಾಡುವ ಪ್ರಯತ್ನಗಳನ್ನು ತಡೆಯಲಾಗುವುದು ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಹಳಿ​ ಮೇಲೆ 70 ಕೆ.ಜಿ ತೂಕದ 2 ಸಿಮೆಂಟ್​ ಬ್ಲಾಕ್ ಇಟ್ಟು ರೈಲು ದುರಂತಕ್ಕೆ ಮತ್ತೊಂದು ಸಂಚು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.