ETV Bharat / entertainment

ಝೈದ್ ಖಾನ್ 2ನೇ ಸಿನಿಮಾ ಅನೌನ್ಸ್: 'ಕಲ್ಟ್'ನಲ್ಲಿ 'ಬನಾರಸ್' ಹುಡುಗ - Cult Movie - CULT MOVIE

ನಟ ಝೈದ್ ಖಾನ್ ಅಭಿನಯದ ಎರಡನೇ ಚಿತ್ರದ ಹೆಸರು 'ಕಲ್ಟ್'.

Zaid Khan
ಝೈದ್ ಖಾನ್
author img

By ETV Bharat Karnataka Team

Published : Apr 10, 2024, 2:29 PM IST

Updated : Apr 10, 2024, 2:40 PM IST

'ಬನಾರಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಯಣ ಆರಂಭಿಸಿರುವ ನಟ ಝೈದ್ ಖಾನ್ ಅವರ ಎರಡನೇ ಸಿನಿಮಾದ ಶೀರ್ಷಿಕೆ ಯುಗಾದಿಯಂದೇ ಘೋಷಣೆ ಆಗಿದೆ. ಬನಾರಸ್ ಚಿತ್ರದ ಬಳಿಕ ಝೈದ್ ಖಾನ್ ಯಾವ ಚಿತ್ರದಲ್ಲಿ ನಟಿಸುತ್ತಾರೆ? ಎಂಬ ಬಹುದಿನಗಳ ಕಾತರಕ್ಕೆ ಕೆಲ ದಿನಗಳ ಹಿಂದಷ್ಟೇ ತೆರೆ ಬಿದ್ದಿತ್ತು.

ಈ ವರ್ಷದ ಭರ್ಜರಿ ಹಿಟ್ 'ಉಪಾಧ್ಯಕ್ಷ' ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಸುದ್ದಿ ಅಧಿಕೃತವಾಗಿ ಹೊರ ಬಂದಿತ್ತು. ಈ ವಿಷಯ ತಿಳಿಸುವ ಚಿತ್ರದ ಪೋಸ್ಟರ್ ಸಹ ಎಲ್ಲರ ಗಮನ ಸೆಳೆದಿತ್ತು. ಅಂದಿನಿಂದಲೂ ಚಿತ್ರದ ಶೀರ್ಷಿಕೆ ಏನಿರಬಹುದು ಎಂಬ? ಕುತೂಹಲ ಸಿನಿಪ್ರಿಯರಲ್ಲಿ ಮನೆ ಮಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಬಹು ನಿರೀಕ್ಷಿತ ಚಿತ್ರಕ್ಕೆ 'ಕಲ್ಟ್' ಎಂದು ಹೆಸರಿಡಲಾಗಿದೆ. ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭ ಸಂದರ್ಭದಲ್ಲಿ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ.

Zaid Khan
ಕಲ್ಟ್ ಫಸ್ಟ್ ಲುಕ್

ಝೈದ್ ಖಾನ್ ಪೋಸ್ಟ್: ನಟ ಝೈದ್ ಖಾನ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಚಿತ್ರದ ಟೈಟಲ್​ ಪೋಸ್ಟರ್ (ಫಸ್ಟ್ ಲುಕ್) ಹಂಚಿಕೊಂಡ ನಟ, ''ನನ್ನ ಎರಡನೇ ಸಿನಿಮಾದ ಟೈಟಲ್ - ಕಲ್ಟ್ ಮತ್ತು ಫಸ್ಟ್ ಲುಕ್ ನಿಮ್ಮ ಮಡಿಲಿಗೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ. ಎಲ್ಲರಿಗೂ ಈದ್ ಮತ್ತು ಯುಗಾದಿ ಹಬ್ಬದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ: ಕುತೂಹಲ ಹುಟ್ಟಿಸಿದ 'ಭೈರತಿ ರಣಗಲ್' ಪೋಸ್ಟರ್ - Bhairathi Ranagal Poster

ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನಿಲ್ ಕುಮಾರ್, ನಮ್ಮ ಚಿತ್ರಕ್ಕೆ ಕಲ್ಟ್ ಎಂದು ಶೀರ್ಷಿಕೆ ಇಡಲಾಗಿದೆ. ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಕರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪದ ಹೆಚ್ಚು ಪ್ರಚಲಿತವಾಗಿದೆ. ಚಿತ್ರ ಕೂಡ ಯುವಜನತೆಗೆ ಹತ್ತಿರವಾಗಿರಲಿದೆ‌‌. ಹಾಗಾಗಿ ಚಿತ್ರಕ್ಕೆ 'ಕಲ್ಟ್‌' ಎಂಬ ಶೀರ್ಷಿಕೆ ಇಡಲಾಗಿದೆ‌. ಶೀರ್ಷಿಕೆ ಹಾಗೂ ಫಸ್ಟ್ ಲುಕ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಬನಾರಸ್ ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ನಟ ಝೈದ್ ಖಾನ್ ಈ ಚಿತ್ರದಲ್ಲಿ ಮಾಸ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ‌‌. ಫಸ್ಟ್ ಲುಕ್ ಪೋಸ್ಟರ್​ನಲ್ಲಿರುವ ಝೈದ್ ಖಾನ್ ಅವರ ರಗಡ್ ಲುಕ್​ಗೆ ಯುವಕರು ಫಿದಾ ಆಗಿದ್ದಾರೆ‌. ಸದ್ಯದಲ್ಲೇ 'ಕಲ್ಟ್' ಸೆಟ್ಟೇರಲಿದೆ ಎಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ರಂಜಾನ್ 2024: ವಿಶೇಷ ದಿನಕ್ಕೆ ಈ ಲುಕ್ ಟ್ರೈ ಮಾಡಿ ನೋಡಿ; ಇದರಲ್ಲಿ ನಿಮಗೆ ಯಾವ ಡ್ರೆಸ್ ಇಷ್ಟ ಅಂತಾ ಹೇಳಿ? - Ethnic Wear

ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ 'ಕಲ್ಟ್' ಸಿನಿಮಾ ನಿರ್ಮಾಣ ಆಗಲಿದೆ. ರಚನೆ ಹಾಗೂ ನಿರ್ದೇಶನದ ಜವಾಬ್ದಾರಿ ಅನಿಲ್ ಕುಮಾರ್ ಅವರದ್ದು. ಜೆ.ಎಸ್ ವಾಲಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕೆ.ಎಂ ಪ್ರಕಾಶ್ ಅವರ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Last Updated : Apr 10, 2024, 2:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.