ETV Bharat / entertainment

ಬಿಡುಗಡೆಗೂ ಮುನ್ನ ಕೋಟಿ ಕೋಟಿ ವ್ಯವಹಾರ: 'ಯುವ' ಈವೆಂಟ್​​ನ ವಿಡಿಯೋ ನೋಡಿ

author img

By ETV Bharat Karnataka Team

Published : Mar 5, 2024, 2:26 PM IST

ಇತ್ತೀಚೆಗಷ್ಟೇ ಅದ್ಧೂರಿಯಾಗಿ ಜರುಗಿದ 'ಯುವ' ಸಿನಿಮಾ ಸಮಾರಂಭದ ವಿಡಿಯೋ ಹೊರಬಿದ್ದಿದೆ.

Yuva movie
ಯುವ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ 'ಯುವ‌' ಸಿನಿಮಾದ ಸದ್ದಿಗೆ ಕೌಂಟ್​​ಡೌನ್ ಶುರುವಾಗಿದೆ.‌ ವರನಟ ಡಾ.ರಾಜ್​ಕುಮಾರ್​​ ಮೊಮ್ಮಗ ಯುವ ರಾಜ್​​ಕುಮಾರ್ ಅಭಿನಯದ ಚೊಚ್ಚಲ ಚಿತ್ರದ ಮೇಲೆ ಸಿನಿಪ್ರಿಯರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಪ್ರಚಾರ ಪ್ರಾರಂಭವಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರ ಬಿಡುಗಡೆಗೂ ಮುನ್ನ ಕೋಟಿ ಕೋಟಿ ವ್ಯವಹಾರ ನಡೆಸಿದೆ.

ಇತ್ತೀಚೆಗಷ್ಟೇ ಚಾಮರಾಜನಗರದಲ್ಲಿ ಬಿಡುಗಡೆಯಾದ ಚಿತ್ರದ ಮೊದಲ ಹಾಡು ಸಖತ್ ಸದ್ದು ಮಾಡುತ್ತಿದೆ. ಯುವ ಡ್ಯಾನ್ಸ್ ಝಲಕ್ ಹಾಗೂ ಸಂತೋಷ್‌ ಆನಂದ್‌ ರಾಮ್ ಲಿರಿಕ್ಸ್ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಎರಡು ದಿನಗಳಲ್ಲಿ ನಾಲ್ಕು ಮಿಲಿಯನ್ ವೀಕ್ಷಣೆಯಾಗಿದೆ. ಇಂದು ಸಿನಿಮಾದ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಫಸ್ಟ್ ಸಾಮಗ್​ ರಿಲೀಸ್​ ಈವೆಂಟ್​ನ ಗ್ಲಿಂಪ್ಸ್​​ ಶೇರ್​ ಮಾಡಿದ್ದು, ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಚಿತ್ರದ ಮೇಲಿನ ಕುತೂಹಲ ವ್ಯಕ್ತವಾಗುವ ಜೊತೆಗೆ ಯುವ ಸಿನಿಮಾ ಓಟಿಟಿ ಹಾಗೂ ಸ್ಯಾಟಲೈಟ್ಸ್ ರೈಟ್ಸ್ ಯಾರಾ ಪಾಲಾಯ್ತು? ಯಾವ ಸ್ಮಾಲ್‌ ಸ್ಕ್ರೀನ್‌ನಲ್ಲಿ ಬರಲಿದೆ? ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಭಾರಿ ನಿರೀಕ್ಷೆ ಹುಟ್ಟುಹಾಕಿರುವ 'ಯುವ' ಸಿನಿಮಾದ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಕೋಟಿ ಕೋಟಿ ರೂ.ಗೆ ಬಿಕರಿಯಾಗಿದೆ ಎಂದು ಹೇಳಲಾಗುತ್ತಿದೆ. ಹೊಂಬಾಳೆ ಸಂಸ್ಥೆಯ ಬಹುತೇಕ ಎಲ್ಲಾ ಸಿನಿಮಾಗಳು ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಿತ್ತು. ಅದೇ ರೀತಿ‌ ಯುವ ಸಿನಿಮಾ ರೈಟ್ಸ್ ಕೂಡ ಅಮೆಜಾನ್ ಪಾಲಾಗಿದೆ ಅನ್ನೋದು ಕೆಲವರ ಲೆಕ್ಕಾಚಾರ. ಇನ್ನೂ ಸ್ಯಾಟಲೈಟ್ ರೈಟ್ಸ್ - 3 ಕೋಟಿ ರೂ., ಡಬ್ಬಿಂಗ್, ಡಿಜಿಟಲ್ ಮತ್ತು ಆಡಿಯೋ ರೈಟ್ಸ್ ಸೇರಿದಂತೆ 9‌ ಕೋಟಿ ರೂ.ನ ವ್ಯವಹಾರ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​ನ ಆಪ್ತರು ಕೂಡ ಯುವ ಸಿನಿಮಾ ರಿಲೀಸ್​ಗೂ ಮುನ್ನ 12 ಕೋಟಿ ರೂ.ನ ಬ್ಯುಸಿನೆಸ್​​ ಮಾಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಿಷಬ್​ ಶೆಟ್ಟಿ ಮಗಳಿಗೆ 2 ವರ್ಷ: ಮುದ್ದಾದ ವಿಡಿಯೋ ನೋಡಿ

'ಯುವ' ಯೂತ್ ಸಬ್ಜೆಕ್ಟ್​​​ ಸಿನಿಮಾ. ಯುವ ರಾಜ್​​​​ಕುಮಾರ್​ಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ‌. ಸುಧಾರಾಣಿ, ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ಚಿತ್ರದ ಟ್ರೇಲರ್​​ ಹಾಗೂ ಉಳಿದ ಹಾಡುಗಳು ಇನ್ನಷ್ಟೇ ರಿಲೀಸ್ ಆಗಬೇಕಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂದರ್ಭ ಪ್ರೀ ರಿಲೀಸ್ ಈವೆಂಟ್ ಮಾಡೋ ಯೋಜನೆ ಚಿತ್ರತಂಡದ್ದು.

  • " class="align-text-top noRightClick twitterSection" data="">

ಇದನ್ನೂ ಓದಿ: ಮಂಗಳೂರಿಗೆ ಮತ್ತೊಂದು ಸೌಂದರ್ಯ ಪ್ರಶಸ್ತಿ; ಈಶಿಕಾ ಶೆಟ್ಟಿಗೆ 'ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ' ಗರಿ

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶ್ರೀಶು ಕುದವಳ್ಳಿ ಛಾಯಾಗ್ರಹಣವಿದ್ದು, ಹೊಂಬಾಳೆ ಫಿಲ್ಮ್ಸ್​​ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ಇದೇ ಮಾರ್ಚ್ 29ಕ್ಕೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಈ ತಿಂಗಳಾಂತ್ಯ ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.