ನಿರೀಕ್ಷೆಯಂತೆ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ 'ಯುವ' ಚಿತ್ರ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಯುವ ರಾಜ್‌ಕುಮಾರ್ ಚೊಚ್ಚಲ ಚಿತ್ರ ಬೆಳ್ಳಿ ತೆರೆ ಮೇಲೆ ರಾರಾಜಿಸುತ್ತಿದೆ. ಟ್ರೈಲರ್ನಲ್ಲಿ ತೋರಿಸಿರುವಂತೆ ಯೂತ್, ಲವ್ ಹಾಗೂ ಅಪ್ಪ ಮಗನ ಬಾಂಧವ್ಯದ ಕಥೆಯನ್ನು ಯುವ ಚಿತ್ರ ಒಳಗೊಂಡಿದೆ.
ನಿರ್ದೇಶಕ ಸಂತೋಷ್ ಆನಂದರಾಮ್ ಅಪ್ಪು ಸಾರ್ ವ್ಯಕ್ತಿತ್ವ, ಬೊಂಬಾಟ್ ಡ್ಯಾನ್ಸ್, ಆ್ಯಕ್ಷನ್ ಸಿಕ್ವೇನ್ಸ್ ಅನ್ನು ತಲೆಯಲ್ಲಿ ಇಟ್ಟುಕೊಂಡು ಯುವ ಚಿತ್ರವನ್ನು, ಯುವ ರಾಜ್ಕುಮಾರ್ಗಾಗಿ ಆ್ಯಕ್ಷನ್ ಕಟ್ ಹೇಳಿರುವುದು ವಿಶೇಷ.
ಅಪ್ಪು ಸಿನಿಮಾದಲ್ಲಿ ಏನೇ ಮಿಸ್ ಆದರೂ, ಡ್ಯಾನ್ಸ್, ಫೈಟ್ ಮಾತ್ರ ಮಿಸ್ ಆಗುತ್ತಿರಲಿಲ್ಲ. ಇದೇ ರೀತಿ ಡ್ಯಾನ್ಸ್, ಫೈಟ್ ಹಾಗೂ ಫ್ಯಾಮಿಲಿ ಎಮೋಷನ್ನಲ್ಲಿ ಯುವ ರಾಜ್‌ಕುಮಾರ್ ಬೆಳ್ಳಿ ತೆರೆ ಮೇಲೆ ಆರ್ಭಟಿಸಿದ್ದಾರೆ.
ಯುವ ಚಿತ್ರದ ಕ್ಲೈಮ್ಯಾಕ್ಸ್ ತಂದೆ ಮಗನ ಗೆಲುವನ್ನು ಸಂಭ್ರಮಿಸುತ್ತಾನೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಯುವ ಸಿನಿಮಾ ಅದ್ಧೂರಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. 50 ಅಡಿ ಎತ್ತರದ ಪುನೀತ್ ರಾಜ್‌ಕುಮಾರ್ ಕಟೌಟ್ ಜೊತೆಗೆ ಯುವ ರಾಜ್‌ಕುಮಾರ್ ಕಟೌಟ್ ಹಾಕಿ ಅಭಿಮಾನಿಗಳು ರಾತ್ರಿಯಿಂದಲೇ ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ.
ಇನ್ನು ಮಗನ ಸಿನಿಮಾ ನೋಡಲು ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳಾ, ವಿನಯ್ ರಾಜ್‌ಕುಮಾರ್, ಧನ್ಯಾ ರಾಮ್ ಕುಮಾರ್ ಸೇರಿದಂತೆ ಇಡೀ ರಾಜ್ ಕುಟುಂಬ ಯುವ ಸಿನಿಮಾ ನೋಡಿ ಕಣ್ಣು ತುಂಬಿಕೊಂಡಿತು. ರಾಘವೇಂದ್ರರಾಜ್ ಕುಮಾರ್ ಮಾತನಾಡಿ ಮಗನ ಅಭಿನಯ ಕುರಿತು ಸಂತೋಷ ವ್ಯಕ್ತಪಡಿಸಿದ್ದು, ಮಗನನ್ನು ಇನ್ನೂ ಎತ್ತರಕ್ಕೆ ಬೆಳೆಸಿ ಅವನಿಗೆ ಇನ್ನೂ ಕಲಿಸಿ, ಆರ್ಶೀವದಿಸಿ ಎಂದು ಅಭಿಮಾನಿಗಳಿಗೆ ಹೇಳಿದರು. ಹಾಗೇ ಅವರ ಪತ್ನಿ ಮಂಗಳಾ ಮಗನ ಅಭಿನಯ ನೋಡಿ ಭಾವುಕರಾದರು.
ಈಗಾಗಲೇ ಮೂರು ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ ಮತ್ತೊಂದು ಗೆಲವುನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತ ಹಾಗು ಹಿನ್ನಲೆ ಸಂಗೀತ ಸಖತ್ ಕಿಕ್ ಕೊಡುತ್ತೆ. ಜೊತೆಗೆ ಶ್ರೀಶಾ ಕುದುವಲ್ಲಿ ತಮ್ಮ ಕ್ಯಾಮರ ಕೈಚಳಕ ತೋರಿಸಿದ್ದಾರೆ. ಅರ್ಜುನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅದ್ಧೂರಿ ಸಿನಿಮಾಗಳ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಸಂಸ್ಥೆ ಯುವ ರಾಜ್‌ಕುಮಾರ್ ಅವರನ್ನು ಸಕ್ಸಸ್ಫುಲ್ ಲಾಂಚ್ ಮಾಡಿದ ಕ್ರೆಡಿಟ್ ಇವರಿಗೆ ಸಲ್ಲುತ್ತದೆ. ಒಟ್ಟಾರೆ ಯುವ ಸಿನಿಮಾ ಔಟ್ ಅಂಡ್ ಔಟ್ ಫ್ಯಾಮಿಲಿ ಸಿನಿಮಾ ಆಗಿದ್ದು ಕುಟುಂಬ ಸಮೇತ ನೋಡಬಹುದು.
ಇದನ್ನೂ ಓದಿ:ರಗಡ್ ಯಂಗ್ ಹೀರೋಗಳ ಖಾಲಿತನ 'ಯುವ' ನೀಗಿಸ್ತಾರೆ: ನಿರ್ದೇಶಕ ಸಂತೋಷ್ ಆನಂದ್ ರಾಮ್ - Yuva Film
ಇದನ್ನೂ ಓದಿ:ರಾಜ್ಯಾದ್ಯಂತ 'ಯುವ' ರಾಜ್‌ಕುಮಾರ್ ಬಿಡುಗಡೆ: ಅಭಿಮಾನಿಗಳ ಸಂಭ್ರಮ - Yuva