ETV Bharat / entertainment

ರತನ್​ ಟಾಟಾ ನಿಧನಕ್ಕೆ ಬಾಲಿವುಡ್ ಕಂಬನಿ; ನಿಮ್ಮ ಪರಂಪರೆ ಪೀಳಿಗೆಗೆ ಸ್ಫೂರ್ತಿ ಎಂದ ಸೆಲಬ್ರಿಟಿಸ್ - YOUR LEGACY WILL INSPIRE

ಸಾಮಾಜಿಕ ಜಾಲತಾಣದಲ್ಲಿ ಹಲವರು ಟಾಟಾ ಸಾವಿಗೆ ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ. ನಿಜವಾದ ನಾಯಕತ್ವ, ಮೌಲ್ಯಕ್ಕೆ ನೀವು ಆದರ್ಶ ಎಂದಿದ್ದು ದೇಶಕ್ಕೆ ನೀಡಿದ ನಿಮ್ಮ ಕೊಡುಗೆ ಚಿರಸ್ಮರಣಿಯ ಎಂದು ಗುಣಗಾನ ಮಾಡಿದ್ದಾರೆ.

your-legacy-will-inspire-generations-salman-khan-priyanka-chopra-ss-rajamouli-others-condole-demise-of-ratan-tata
rತನ್ ಟಾಟಾ (ಈಟಿವಿ ಭಾರತ್​​)
author img

By ETV Bharat Karnataka Team

Published : Oct 10, 2024, 11:01 AM IST

ಹೈದರಾಬಾದ್​: ಕೇವಲ ಕೈಗಾರಿಕೋದ್ಯಮಿಯಾಗಿರದೇ ಸಹೃದಯಿ ವ್ಯಕ್ತಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದ ರತನ್​ ಟಾಟಾ ಇನ್ನೂ ನೆನಪು ಮಾತ್ರ. ಅವರ ಅಗಲಿಕೆ ದೇಶ ಕಂಬನಿ ಮಿಡಿಯುತ್ತಿದೆ. ಸಿನಿ ಉದ್ಯಮದ ಜನರು ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಸಾವಿಗೆ ಸಂತಾಪ ಸೂಚಿಸಿ ಕಂಬನಿ ಮಿಡಿದ ಅನೇಕ ಮಂದಿ ನಿಜವಾದ ನಾಯಕತ್ವ, ಮೌಲ್ಯಕ್ಕೆ ನೀವು ಆದರ್ಶ ಎಂದಿದ್ದು, ದೇಶಕ್ಕೆ ನೀಡಿದ ನಿಮ್ಮ ಕೊಡುಗೆ ಚಿರಸ್ಮರಣಿಯ ಎಂದಿದ್ದಾರೆ.

ಸಮಗ್ರತೆ ಮತ್ತು ಘನತೆ ಎತ್ತಿ ಹಿಡಿದ ಧೀಮಂತ: ಬಾಲಿವುಡ್​ ನಟಿ ಅನುಷ್ಕಾ ಶರ್ಮ ಇನ್​​​​ಸ್ಟಾಗ್ರಾಂನಲ್ಲಿ ಕಂಬನಿ ಮಿಡಿದಿದ್ದು, ರತನ್​ ಟಾಟಾ ಅವರ ಸುದ್ದಿ ಆಳವಾದ ನೋವು ಉಂಟು ಮಾಡಿದೆ. ಸಮಗ್ರತೆ ಮತ್ತು ಘನತೆಯ ಮೌಲ್ಯಗಳನ್ನು ಎತ್ತಿಹಿಡಿದ ನೀವು ನಿಜವಾಗಿಯೂ ಭಾರತದ ಐಕಾನ್ ಮತ್ತು ತಾಜ್ ಆಗಿದ್ದೀರಾ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ನಟಿ ಪ್ರಿಯಾಂಕ ಚೋಪ್ರಾ ಎಕ್ಸ್​ ತಾಣದಲ್ಲಿ ಸಾವಿಗೆ ಸಂತಾಪ ಸೂಚಿಸಿದ್ದು, ನಿಮ್ಮ ಸಹೃದಯದಿಂದ ಅನೇಕ ಲಕ್ಷಾಂತರ ಜನರನ್ನು ಸ್ಪರ್ಶಿಸಿದ್ದೀರಿ. ನಿಮ್ಮ ನಾಯಕತ್ವ ಮತ್ತು ಉದಾರತೆಯ ಪರಂಪರೆಯು ಪೀಳಿಗೆಗಳಿಗೆ ಸ್ಪೂರ್ತಿಯಾಗಿ ಮುಂದುವರೆಯಲಿದೆ.

ನಟ ಸಲ್ಮಾನ್​ ಖಾನ್​: ರತನ್​ ಟಾಟಾ ಅವರ ಸಾವಿನ ಸುದ್ದಿ ಆಳವಾದ ನೋವು ಉಂಟು ಮಾಡಿದೆ.

ಎಸ್​ಎಸ್​ ರಾಜಮೌಳಿ: ಲೆಜೆಂಡ್​​ಗಳು ಹುಟ್ಟಿ, ಶಾಶ್ವತವಾಗಿ ಬದುಕುತ್ತಾರೆ. ಟಾಟಾ ಉತ್ಪನ್ನ ಬಳಕೆ ಮಾಡದ ದಿನವನ್ನೂ ಊಹಿಸಲು ಅಸಾಧ್ಯ. ರತನ್​ ಟಾಟಾ ಪರಂಪರೆ ನಿತ್ಯದ ಜೀವನದೊಂದಿಗೆ ಬೆಸೆದಿದೆ. ಪಂಚಭೂತಗಳ ಜೊತೆಯಲ್ಲಿ ಯಾರಾದರೂ ಕಾಲದ ಪರೀಕ್ಷೆ ನಿಂತರೆ ಅದು ಅವರೇ. ಭಾರತಕ್ಕಾಗಿ ನೀವು ಮಾಡಿದ ಎಲ್ಲಾ ಕಾರ್ಯಕ್ಕೆ ಮತ್ತು ಅಸಂಖ್ಯಾತ ಜನರ ಜೀವನ ಮೇಲೆ ಪ್ರಭಾವ ಬೀರಿದ್ದಕ್ಕೆ ಧನ್ಯವಾದಗಳು. ತಲೆಮಾರುಗಳವರೆಗೆ ನಿಮ್ಮ ಹೆಗ್ಗೆರುತು ಇರಲಿದೆ. ನಿಮಗೆ ನಮನ, ಸದಾ ನಿಮ್ಮ ಅಭಿಮಾನಿ ಜೈ ಹಿಂದ್​.

ನಿಜವಾದ ದಾರ್ಶನಿಕ: ರತನ್​ ಟಾಟಾ ನಿಜವಾದ ದಾರ್ಶನಿಕ ಎಂದು ನಟ ಸಂಜಯ್​ ದತ್​​ ಕೊಂಡಾಡಿದ್ದಾರೆ. ಉದ್ಯಮದ ಹೊರತಾಗಿ ಅವರು ತಮ್ಮ ಸಮಗ್ರತೆ ಮತ್ತು ಸಹಾನುಭೂತಿಯನ್ನು ಹೊಂದಿದ್ದು, ಅಸಂಖ್ಯಾತ ಜನರಿಗೆ ಪ್ರೇರಣೆಯಾಗಿದ್ದೀರಿ ಎಂದಿದ್ದಾರೆ.

ನಯನತಾರ: ನಾಯಕತ್ವ, ಸಮಾಜಸೇವೆ ಮತ್ತು ನೀತಿಗಳಿಗೆ ಐಕಾನ್​ ಆಗಿದ್ದೀರಿ. ನಿಮ್ಮ ಪರಂಪರೆ ಪೀಳಿಗೆಗಳಿಗೆ ಸ್ಪೂರ್ತಿದಾಯಕವಾಗಿ ಮುಂದುವರೆಯಲಿದೆ. ಭಾರತವು ಇಂದು ದೊಡ್ಡ ನಷ್ಟ ಅನುಭವಿಸಿದೆ. ನೀವು ನಮ್ಮಂತಹ ಅನೇಕರ ಜನರಿಗೆ ಸ್ಪೂರ್ತಿಯಾಗಿದ್ದೀರಿ. ಭಾರತಕ್ಕೆ ಮರೆಯಲಾಗದ ಪ್ರಭಾವ ಬೀರಿದ ನಿಮಗೆ ಕೃತಜ್ಞತೆ ಎಂದಿದ್ದಾರೆ.

ರಿತೇಶ್​ ದೇಶಮುಖ್​ ಸಂತಾಪ ಸೂಚಿಸಿ, ರತನ್​ ಟಾಟಾ ಅವರು ಇನ್ನಿಲ್ಲ ಎಂಬ ಸುದ್ದಿ ಬಹಳ ಖೇದ ಉಂಟು ಮಾಡಿದೆ ಎಂದಿದ್ದಾರೆ. ನಟ ರಣ್​ದೀಪ್​ ಹೂಡಾ, ಭಾರತದ ಅತ್ಯಮೂಲ್ಯ ವ್ಯಕ್ತಿ ನೀವು ಎಂದಿದ್ದು. ನಿಮ್ಮ ಅಪಾರ ಸಂಪತ್ತಿನ ಹೊರತಾಗಿ ನಿಮ್ಮ ಮೌಲ್ಯಗಳಿಂದ ನೀವು ಆ ಸ್ಥಾನ ಪಡೆದಿದ್ದೀರಿ ಎಂದಿದ್ದಾರೆ.

ಅಜಯ್​ ದೇವಗನ್​ ಕೂಡ ಗೌರವ ಸಲ್ಲಿಸಿದ್ದು, ದಾರ್ಶನಿಕನನ್ನು ಜಗತ್ತು ಇಂದು ಕಳೆದುಕೊಂಡಿದೆ. ಭಾರತಕ್ಕೆ ನಿಮ್ಮ ಕೊಡುಗೆ ಅವಿಸ್ಮರಣೀಯ. ನಿಮಗೆ ನಾವು ಕೃತಜ್ಞರಾಗಿರುತ್ತೇವೆ ಎಂದಿದ್ದಾರೆ.

ಟಾಟಾ ಗ್ರೂಪ್​ಗೆ ಮಾತ್ರವಲ್ಲದೇ, ದೇಶಕ್ಕೆ ನಿಮ್ಮ ಕೊಡುಗೆ ಅಸಾಧಾರಣ: ರತನ್​ ಟಾಟಾ ಅವರ ಸಾವಿನ ಸುದ್ದಿಯನ್ನು ಟಾಟಾ ಸನ್ಸ್‌ನ ಅಧ್ಯಕ್ಷರಾದ ಎನ್ ಚಂದ್ರಶೇಖರನ್ ದೃಢಪಡಿಸಿ, ಆಳವಾದ ನೋವಿನೊಂದಿಗೆ ರತನ್​ ಟಾಟಾ ಅವರಿಗೆ ವಿದಾಯ ಹೇಳುತ್ತಿದ್ದೇವೆ. ಟಾಟಾ ಗ್ರೂಪ್​ಗೆ ಮಾತ್ರವಲ್ಲದೇ, ದೇಶಕ್ಕೆ ನಿಮ್ಮ ಕೊಡುಗೆ ಅಸಾಧಾರಣ, ನಿಮ್ಮ ಉದ್ಯಮದಿಂದ ಮಾತ್ರವಲ್ಲದೇ, ಸಮಾಜಸೇವೆ ಮತ್ತು ನೈತಿಕ ನಾಯಕತ್ವದಿಂದ ನೀವು ಸದಾ ನೆನಪಿನಲ್ಲಿರುತ್ತೀರಿ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಗೌರವಗಳೊಂದಿಗೆ ರತನ್ ಟಾಟಾ ಅಂತ್ಯಸಂಸ್ಕಾರ: ಮಹಾರಾಷ್ಟ್ರ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.