ETV Bharat / entertainment

ಯಾಮಿ ಗೌತಮ್ ನಟನೆಯ 'ಆರ್ಟಿಕಲ್ 370' ಸಿನಿಮಾ ಟ್ರೇಲರ್ ಔಟ್ - ಯಾಮಿ ಗೌತಮ್​

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ವಿಧಿ 370 ರದ್ದಾದ ಬಗ್ಗೆ ಸಿನಿಮಾ ಸಿದ್ಧಗೊಂಡಿದೆ. ಯಾಮಿ ಗೌತಮ್ ನಟನೆಯ ಈ ಚಿತ್ರ ಇದೇ ತಿಂಗಳಾಂತ್ಯದಲ್ಲಿ ತೆರೆ ಕಾಣಲಿದೆ.

Article 370 Trailer
'ಆರ್ಟಿಕಲ್ 370' ಟ್ರೇಲರ್
author img

By ETV Bharat Karnataka Team

Published : Feb 8, 2024, 6:14 PM IST

ಬಾಲಿವುಡ್​ ಬ್ಯೂಟಿ ಯಾಮಿ ಗೌತಮ್ ವಿಭಿನ್ನ ಕಥಾಹಂದರಗಳ ಸಿನಿಮಾ ಮೂಲಕ ಜನಪ್ರಿಯರು. ಬಾಲಿವುಡ್‌ನ ಅತ್ಯಂತ ವೈವಿಧ್ಯಮಯ, ಬೇಡಿಕೆಯ ನಟಿಯರ ಪೈಕಿಯೂ ಗುರುತಿಸಿಕೊಂಡಿದ್ದಾರೆ. ಇದೀಗ 'ಆರ್ಟಿಕಲ್ 370' ಚಿತ್ರದಲ್ಲಿ ನಾಯಕಿಯಾಗಿ ಮತ್ತೊಮ್ಮೆ ಪ್ರಬಲ ಪಾತ್ರವನ್ನೇ ಆಯ್ದುಕೊಂಡಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಚಿತ್ರದ ಟೀಸರ್ ಭಾರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಆರ್ಟಿಕಲ್ 370 ಟ್ರೇಲರ್ ಅನಾವರಣಗೊಂಡಿದೆ. ಚಿತ್ರ ಫೆಬ್ರವರಿ 23ರಂದು ಬಿಡುಗಡೆಯಾಗಲಿದೆ.

  • " class="align-text-top noRightClick twitterSection" data="">

ಚಿತ್ರ ತಯಾರಕರು ಇಂದು ರಿಲೀಸ್​ ಮಾಡಿರುವ ಟ್ರೇಲರ್​ 2 ನಿಮಿಷ 40 ಸೆಕೆಂಡ್ ಅವಧಿ ಹೊಂದಿದೆ. ಯಾಮಿ ಗೌತಮ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ, ಅದರಿಂದ ಉಂಟಾದ ರಾಜಕೀಯ ಅಸ್ಥಿರತೆ ಮತ್ತು ಅದನ್ನು ತೊಡೆದುಹಾಕಲು ಸೇನೆ ಮತ್ತು ರಾಜಕೀಯ ಪಕ್ಷಗಳು ಎದುರಿಸಿದ ಅಡೆತಡೆಗಳ ಒಂದು ಸಣ್ಣ ನೋಟವನ್ನು ಟ್ರೇಲರ್​​​ನಲ್ಲಿ ಕಾಣಬಹುದು. ಆರ್ಟಿಕಲ್ 370ರ ರದ್ಧತಿಗೆ ಕಾರಣವಾಗುವ ಘಟನೆಗಳು, ರಾಜಕೀಯ ಪಾತ್ರ ಎಲ್ಲವನ್ನೂ ಟ್ರೇಲರ್​ನಲ್ಲಿ ತೋರಿಸಲಾಗಿದೆ. ಟ್ರೇಲರ್​​ ಹಂಚಿಕೊಂಡ ಯಾಮಿ ಗೌತಮ್​​, "ಪೂರಾ ಕಾ ಪೂರಾ ಕಾಶ್ಮೀರ್, ಭಾರತ್ ದೇಶ್ ಕ ಹಿಸ್ಸಾ ಥಾ, ಹೈ ಔರ್ ರಹೇಗಾ" (ಕಾಶ್ಮೀರವು ಭಾರತದ್ದಾಗಿತ್ತು, ಭಾರತದ್ದೇ, ಭಾರತದ್ದಾಗಿಯೇ ಇರುತ್ತದೆ) ಎಂದು ಬರೆದುಕೊಂಡಿದ್ದಾರೆ. ಇದೇ ಡೈಲಾಗ್​​​ ಟ್ರೇಲರ್​​​ನಲ್ಲೂ ಇದೆ.

ನಿಜ ಜೀವನದ ಘಟನೆಗಳಿಂದ ಪ್ರೇರಿತವಾದ ಚಿತ್ರ ಇದಾಗಿದ್ದು, ಟ್ರೇಲರ್​​ ಮತ್ತೊಂದು ಪವರ್​ಫುಲ್​ ಶೋನ ಭರವಸೆ ನೀಡಿದೆ. ಪೊಲಿಟಿಕಲ್​-ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಯಾಮಿ ಗೌತಮ್​​ ಆ್ಯಕ್ಷನ್-ಪ್ಯಾಕ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿರುವ ಆದಿತ್ಯ ಸುಹಾಸ್ ಜಂಭಳೆ ನಿರ್ದೇಶನದ ಈ ಸಿನಿಮಾ ಪ್ರಿಯಾಮಣಿ, ವೈಭವ್ ತತ್ವವಾದಿ, ಅರುಣ್ ಗೋವಿಲ್ ಮತ್ತು ರಾಜ್ ಅರ್ಜುನ್ ಅವರನ್ನೂ ಒಳಗೊಂಡಿದೆ. ಆದಿತ್ಯ ಧರ್, ಲೋಕೇಶ್ ಧರ್ ಮತ್ತು ಜ್ಯೋತಿ ದೇಶ್ಪಾಂಡೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಸಿನಿಮಾಗಳಲ್ಲಿ ರಾಮ್​​ ಚರಣ್​​​​ ರೊಮ್ಯಾನ್ಸ್: ಪತ್ನಿ ಉಪಾಸನಾ ಹೇಳಿದ್ದೇನು?

ಯಾಮಿ ಗೌತಮ್​​ ತಮ್ಮ ಹೇಳಿಕೆಯಲ್ಲಿ, ಚಿತ್ರವನ್ನು "ಭಾರತ ಇತಿಹಾಸದ ದಿಟ್ಟ ಅಧ್ಯಾಯ" ಎಂದು ಉಲ್ಲೇಖಿಸಿದ್ದಾರೆ. ಈ ಪ್ರಕಾರದ ಸಿನಿಮಾವನ್ನು ಪ್ರೇಕ್ಷಕರು ಆನಂದಿಸುತ್ತಾರೆ ಎಂದು ಭಾವಿಸುತ್ತೇನೆ. ''ಈ ಸಿನಿಮಾವು ಹಿಂದೆ ಗುರುತಿಸದ ಪ್ರದೇಶವನ್ನು ಅನ್ವೇಷಿಸಲು ನನಗೆ ಅವಕಾಶ ಮಾಡಿಕೊಟ್ಟಿತು. ಹಿಂದೆಂದೂ ನಟಿಸದ ಪಾತ್ರಕ್ಕೆ ಜೀವ ತುಂಬಲು ನನಗೆ ಅವಕಾಶ ನೀಡಿತು" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿತ್ರೀಕರಣ ವೇಳೆ ಗಾಯಗೊಂಡ ನಟ ವಿಕ್ಕಿ ಕೌಶಲ್​​: ವಿಡಿಯೋ ನೋಡಿದ ಅಭಿಮಾನಿಗಳಲ್ಲಿ ಆತಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.