ಹೈದರಾಬಾದ್: 'ಲವ್ ರೆಡ್ಡಿ' ಚಿತ್ರ ಪ್ರದರ್ಶನ ಬಳಿಕ ಪರದೆ ಮುಂದೆ ನಿಂತಿದ್ದ ಚಿತ್ರತಂಡದ ಜೊತೆಗಿದ್ದ ಕನ್ನಡ ನಟ ಎನ್ಟಿ ರಾಮಸ್ವಾಮಿಗೆ ಮಹಿಳೆಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಇದೀಗ ಸಾಕಷ್ಟು ಸುದ್ದಿಯಾಗಿದೆ. ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಬೇಕು ಎಂದು ಚಿತ್ರತಂಡ ನಿಂತಾಗ ನಡೆದಿರುವ ಈ ಘಟನೆ ಎಲ್ಲರನ್ನೂ ಅವಕ್ಕಾಗಿ ಮಾಡಿದೆ. ಚಿತ್ರ ಮುಗಿದ ಕೂಡಲೇ ಆಸನದಿಂದ ಎದ್ದು ಬಂದ ಮಹಿಳೆ ಹಿಂದು ಮುಂದು ನೋಡದೇ ಕೆನ್ನೆಗೆ ಬಾರಿಸಿದ್ದಾರೆ. ಮಹಿಳೆಯ ಈ ವರ್ತನೆ ಚಿತ್ರತಂಡ ಸೇರಿದಂತೆ ನಟನಿಗ ಆಘಾತ ಮೂಡಿಸಿದೆ. ತಕ್ಷಣಕ್ಕೆ ನಟನ ಸಹಾಯಕ್ಕೆ ಬಂದ ಸಿಬ್ಬಂದಿಗಳ ಮೇಲೆ ಕೂಡ ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.
ಅಸಲಿ ಕಾರಣವಿದು: ಸದ್ಯ ಅಭಿಮಾನಿಗಳಿಂದ ಉತ್ತಮ ಪ್ರಶಂಸೆ ಪಡೆಯುತ್ತಿರುವ 'ಲವ್ ರೆಡ್ಡಿ' ಸಿನಿಮಾದಲ್ಲಿ ರಾಮಸ್ವಾಮಿ ಅವರದ್ದು, ನಟ-ನಟಿಯರಿಗೆ ಕಷ್ಟ ನೀಡುವ ಪಾತ್ರ. ಅಂಜನ್ ರಾಮಚಂದ್ರ ಮತ್ತು ಶ್ರಾವಣಿ ಕೃಷ್ಣವೇಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇವರಿಗೆ ಚಿತ್ರದಲ್ಲಿ ರಾಮಸ್ವಾಮಿ ಕಾಡಿಸುತ್ತಾರೆ. ಈ ಚಿತ್ರದ ವೀಕ್ಷಣೆ ಬಳಿಕ ಅದರಲ್ಲೇ ಆಳವಾಗಿ ಮುಳುಗಿದ್ದ ಮಹಿಳೆ ಅದನ್ನು ಸಿನಿಮಾ ಎಂಬುದನ್ನು ಮರೆತು, ಚಿತ್ರ ಮುಗಿದಾಕ್ಷಣ ರಾಮಸ್ವಾಮಿ ಅವರ ಪಾತ್ರದಿಂದ ಸಿಟ್ಟಾಗಿ ಅವರ ಮೇಲೆ ಹಲ್ಲೆ ನಡೆಸಿರುವುದು ತಿಳಿದು ಬಂದಿದೆ. ಸಿನಿಮಾ ಪಾತ್ರದ ಅಭಿನಯ ವೀಕ್ಷಿಸುತ್ತ ಅದರಲ್ಲೇ ಮುಳುಗಿದ ಪರಿಣಾಮ ಈ ರೀತಿಯಾಗಿ ಮಹಿಳೆ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.
Is this Scripted or Real??? 🤣#lovereddy pic.twitter.com/GKoul9Tiyb
— CHARLIE (@CharlieTweets07) October 25, 2024
ಅಕ್ಟೋಬರ್ 18ರಂದು ಬಿಡುಗಡೆಯಾಗಿರುವ ಈ ಚಿತ್ರ ಉತ್ತಮ ಪ್ರಶಂಸೆಯನ್ನು ಪಡೆದಿದ್ದು, ಪ್ಯಾನ್ ಇಂಡಿಯಾ ನಟ ಪ್ರಭಾಸ್ ಕೂಡ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ನಟ ಪ್ರಭಾಸ್, 'ಲವ್ ರೆಡ್ಡಿ' ತಂಡ ಉತ್ತಮವಾದ ಸಿನಿಮಾ ನಿರ್ಮಿಸಿದ್ದು, ಇಡೀ ತಂಡಕ್ಕೆ ನನ್ನ ಶುಭಾಶಯ ಎಂದು ತಿಳಿಸಿದ್ದಾರೆ. ನಟನ ಈ ಕಾರ್ಯಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದ್ದಾರೆ.
Prabhas అన్న🥹🥹🥹
— Anjan Ramachendra (@anjanramchendra) October 20, 2024
మా చిన్న సినిమాకి దేవుడిలా దిగివచ్చి ప్రాణం పోసావ్ అన్న 🙏🙏🙏#LoveReddy ఇన్ సేఫ్ హాండ్స్❤️#prabhasforlovereddy #PrabhasBirthday #Prabhas #prabhasfan pic.twitter.com/9pqBYW8N0T
ಸ್ಮರಣ್ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಪ್ರೀತಿ ಕಥೆಯನ್ನು ಹೊಂದಿದೆ. ಹಳ್ಳಿಗಾಡಿನ ಸೊಗಡನ್ನು ಸಿನಿಮಾದಲ್ಲಿ ಕಾಣಬಹುದಾಗಿದೆ. ಚಿತ್ರದಲ್ಲಿ ಪಲ್ಲವಿ ಪರ್ವ, ವಾಣಿ ಚನ್ನರಾಯಪಟ್ಟಣ, ಜ್ಯೋತಿ ಮದ, ಎನ್ಟಿ ರಾಮಸ್ವಾಮಿ ಮತ್ತಿತ್ತರು ಬಣ್ಣ ಹಚ್ಚಿದ್ದಾರೆ. ಪ್ರಿನ್ಸ್ ಹೆನ್ರಿ ಸಂಗೀತವಿದೆ. ಅಕ್ಷರ್ ಅಲಿ ಛಾಯಾಚಿತ್ರಣವಿದ್ದು, ಕೊಟಗಿರಿ ವೆಂಕಟೇಶ್ವರ ರಾವ್ ಸಂಕಲವಿದೆ.
ಇದನ್ನೂ ಓದಿ: ನನಸಾಯ್ತು ಜಗ್ಗೇಶ್ 40 ವರ್ಷಗಳ ಹಿಂದಿನ ಕನಸು: ಸಿನಿಮಾ ಇಂಡಸ್ಟ್ರಿ ಸೇವೆಗಾಗಿ 'ಜಗ್ಗೇಶ್ ಸ್ಟುಡಿಯೋಸ್'