ETV Bharat / entertainment

ರಾಕಿಂಗ್​ ಸ್ಟಾರ್ ಯಶ್​ ಅಭಿನಯದ 'ಟಾಕ್ಸಿಕ್' 2 ಭಾಗಗಳಲ್ಲಿ ನಿರ್ಮಾಣ? - Toxic - TOXIC

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರುವ ಸಾಧ್ಯತೆಗಳಿವೆ.

Rocking star Yash
ರಾಕಿಂಗ್​ ಸ್ಟಾರ್ ಯಶ್​ (ಈಟಿವಿ ಭಾರತ)
author img

By ETV Bharat Karnataka Team

Published : May 3, 2024, 4:25 PM IST

ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ 'ಟಾಕ್ಸಿಕ್' ಘೋಷಣೆಯಾಗಿ ಐದು ತಿಂಗಳಾಗಿವೆ. ಸಿನಿಮಾದ ಅನೌನ್ಸ್​​ಮೆಂಟ್​ ವಿಡಿಯೋ ಬಿಟ್ಟರೆ, ಚಿತ್ರತಂಡದಿಂದ ಹೆಚ್ಚಿನ ಮಾಹಿತಿ ಸಿಕ್ಕಿರಲಿಲ್ಲ. ಹಾಗಾಗಿ ಯಶ್​ 19ರ ಅಪ್​ಡೇಟ್ಸ್​​ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ಸ್​​ ಇಲ್ಲದಿದ್ದರೂ ಯಶ್​ 19 ಅಥವಾ ಟಾಕ್ಸಿಕ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಲೇ ಇರುತ್ತದೆ. ಚಿತ್ರದ ನಾಯಕಿಯರ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಇದೀಗ ಶೂಟಿಂಗ್‌ಗೆ ಸಂಬಂಧಿಸಿದ ಅಪ್ಡೇಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದಾಗಿದೆ.

ಇತ್ತೀಚೆಗಷ್ಟೇ ಈ ಸಿನಿಮಾದ ಶೂಟಿಂಗ್ ಶುರುವಾಗಿದೆ. ರಾಜ್ಯದಲ್ಲೇ ಶರವೇಗದಲ್ಲಿ ಚಿತ್ರೀಕರಣ ಸಾಗಿದೆ ಎಂಬ ಮಾಹಿತಿ ಇದೆ. ಅಲ್ಲದೇ ಚಿತ್ರ 'ಕೆಜಿಎಫ್‌'ನಂತೆ 2 ಭಾಗಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.

ಕನ್ನಡಕ್ಕೆ ಕರೀನಾ: ಭಾರತದ ಕರಾವಳಿ ಪ್ರದೇಶಗಳಲ್ಲಿ ನಡೆಯುವ ಅಕ್ರಮ ಮಾದಕ ವಸ್ತು ಸಾಗಾಟವನ್ನು ಆಧರಿಸಿ 'ಟಾಕ್ಸಿಕ್' ಮೂಡಿಬರಲಿದೆ ಎಂದು ಹೇಳಲಾಗಿದೆ. ಈ ಚಿತ್ರದ ಮೂಲಕ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್​​ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳೂ ಇವೆ. ಇವರದ್ದು ಅತಿಥಿ ಪಾತ್ರ ಎಂದು ಕೂಡ ಹೇಳಲಾಗಿತ್ತು. ಇವರಲ್ಲದೇ, ಕಿಯಾರಾ ಅಡ್ವಾಣಿ ಮತ್ತು ಶ್ರುತಿ ಹಾಸನ್ ಕೂಡ ಯಶ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇದೆಲ್ಲದರ ಬಗ್ಗೆ 'ಟಾಕ್ಸಿಕ್' ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸ್ಪಷ್ಟ ಮಾಹಿತಿಗೆ 'ಟಾಕ್ಸಿಕ್' ತಂಡದಿಂದ ಅಧಿಕೃತ ಮಾಹಿತಿಗಾಗಿ ಕಾಯಬೇಕಾಗಿದೆ. ಊಹಾಪೋಹ ಜೋರಾದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರು ಪ್ರೇಕ್ಷಕರಲ್ಲಿ ಊಹೆಗಳಿಂದ ದೂರವಿರುವಂತೆ ಕೇಳಿಕೊಂಡಿದ್ದರು. ಅಧಿಕೃತ ಮಾಹಿತಿ ಒದಗಿಸುವುದಾಗಿಯೂ ಭರವಸೆ ನೀಡಿದ್ದರು.

ಇದನ್ನೂ ಓದಿ: ಉರ್ಫಿ ಜಾವೇದ್​​ ಹೊಸ ಮ್ಯಾಜಿಕ್​​! ಬಟ್ಟೆಯಿಂದ ಹಾರಿತು ಚಿಟ್ಟೆ, ಗೌನ್​​ನಲ್ಲೇ ಗಾರ್ಡನ್​​ - ವಿಡಿಯೋ ನೋಡಿ - Urfi Javed Magical Gown

ಈ ಚಿತ್ರಕ್ಕಾಗಿ ನಿರ್ಮಾಪಕರು ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಯಶ್​ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ಬಿಗ್​ ಬಜೆಟ್​ನಲ್ಲಿ ಮೂಡಿಬರಲಿದೆ. ಮೊದಲ ಶೆಡ್ಯೂಲ್‌ನ ಭಾಗವಾಗಿ, ಕರ್ನಾಟಕದಲ್ಲೇ ಬೃಹತ್ ಸೆಟ್‌ಗಳನ್ನು ಹಾಕಿ, ಅನೇಕ ತಾಂತ್ರಿಕ ತಂಡಗಳನ್ನು ಸಹ ರೆಡಿ ಮಾಡಲಾಗಿದೆ. ಚಿತ್ರೀಕರಣದ ವೇಳೆ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲದೇ ಈ ಸಿನಿಮಾಗೆ ಬಳಸಲಾಗಿರುವ ಅದ್ಧೂರಿ ಸೆಟ್ ಹಾಗೂ ತಂತ್ರಜ್ಞಾನದಿಂದಾಗಿ ಜಗತ್ತಿನಾದ್ಯಂತ ವಿಶೇಷವಾಗಿ ಕರುನಾಡಿನ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗ ಸಿಗಲಿದೆ ಎಂದು ಚಿತ್ರತಂಡ ಇತ್ತೀಚೆಗೆ ಹೇಳಿಕೊಂಡಿತ್ತು.

ಇದನ್ನೂ ಓದಿ: ನಟ ಗುರುಚರಣ್​ ಸಿಂಗ್​ ನಾಪತ್ತೆ ಕೇಸ್​​:'ಪ್ಲ್ಯಾನ್ ಮಾಡಿ ಕಣ್ಮರೆ'; ಪೊಲೀಸರ ಶಂಕೆ - Gurucharan Singh Missing Case'

'ಟಾಕ್ಸಿಕ್‌' ಬಿಡುಗಡೆ ಯಾವಾಗ?: ಚಿತ್ರಕ್ಕೆ ಗೀತು ಮೋಹನ್‌ದಾಸ್ ಅವರ ನಿರ್ದೇಶನವಿರಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸೇರಿ ಬಂಡವಾಳ ಹೂಡುತ್ತಿದೆ. ಮುಂದಿನ ವರ್ಷ ಅಂದರೆ 2025ರ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಿನಿಮಾ ಅನೌನ್ಸ್​​ಮೆಂಟ್​ ಸಂದರ್ಭವೇ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.