ಹಿರಿಯ ನಟ ಶಿವರಾಜ್‌ಕುಮಾರ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ 'ಭೈರತಿ ರಣಗಲ್' ಡಿಜಿಟಲ್ಗೆ ಎಂಟ್ರಿ ಕೊಟ್ಟಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಓಟದ ನಂತರ, ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರ ಓಟಿಟಿಗೆ ಬಂದಿದೆ. ಡಿಸೆಂಬರ್ 25ರಿಂದ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಶುರು ಮಾಡಿದೆ. ಓಟಿಟಿ ಬಿಡುಗಡೆ ಕುರಿತಾಗಿ ಸಿನಿಮಾ ನಿರ್ಮಿಸಿರುವ ಗೀತಾ ಪಿಕ್ಚರ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದೆ.
ನವೆಂಬರ್ 15, 2024ರಂದು ಭೈರತಿ ರಣಗಲ್ ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿತ್ತು. ಬಿಡುಗಡೆಯಾದ ಕೇವಲ 45 ದಿನಗಳಲ್ಲಿ ಚಿತ್ರ ಓಟಿಟಿ ಪ್ರವೇಶಿಸಿದೆ.
The MASS LEADER is Now all set to be the PRIME LEADER 🔥#BhairathiRanagal on @PrimeVideo | 25 DECEMBER 2024@NimmaShivanna #Narthan @rukminitweets @GeethaPictures @aanandaaudio @RaviBasrur @The_BigLittle @PrimeVideoIN
— Geetha Pictures (@GeethaPictures) December 24, 2024
#GeethaPictures #BiggestMassHitOfTheYear… pic.twitter.com/eksqKPCWaj
ನರ್ತನ್ ಆ್ಯಕ್ಷನ್ ಕಟ್ ಹೇಳಿದ್ದ 'ಭೈರತಿ ರಣಗಲ್' ವಕೀಲ ಭೈರತಿ ರಣಗಲ್ ಅವರ ಕಥೆ ಹೇಳಿದೆ. ನಿರೂಪಣಾ ಶೈಲಿ, ಪವರ್ಫುಲ್ ಪರ್ಫಾಮೆನ್ಸ್ ನಿಂದ ಚಿತ್ರ ವ್ಯಾಪಕವಾಗಿ ಪ್ರಶಂಸೆ ಗಳಿಸಿತ್ತು. ಕಾನೂನು ಮತ್ತು ಅಪರಾಧದ ನಡುವೆ ಸಿಲುಕಿರುವ ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ಹೋರಾಟಗಳನ್ನು ಸೆರೆಹಿಡಿಯುವ ರಣಗಲ್ ಪಾತ್ರ ನಿರ್ವಹಿಸುವ ಶಿವರಾಜ್‌ಕುಮಾರ್ ನಟನೆಗೆ ವ್ಯಾಪಕ ಮೆಚ್ಚುಗೆ ಗಳಿಸಿದೆ.
ಚಿತ್ರದಲ್ಲಿ ಶಿವರಾಜ್‌ಕುಮಾರ್ ಜೊತೆಗೆ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಛಾಯಾ ಸಿಂಗ್ ಮತ್ತು ಶಬೀರ್ ಕಲ್ಲರಕ್ಕಲ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ದೇವನಹಳ್ಳಿ, ಮೈಸೂರು, ಬಳ್ಳಾರಿ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಲಾಗಿತ್ತು. ರವಿ ಬಸ್ರೂರ್ ಸಂಗೀತ ಸಂಯೋಜನೆ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ ಮತ್ತು ಭಾವನಾತ್ಮಕ ದೃಶ್ಯಗಳ ತೂಕ ಹೆಚ್ಚಿಸಿದೆ.
ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮತ್ತು ವಿಮರ್ಷಕರಿಂದ ಮೆಚ್ಚುಗೆ ಗಳಿಸಿರುವ ಸಿನಿಮಾ ಇದೀಗ ಓಟಿಟಿ ವೇದಿಕೆಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆ ಮೂಡಿಸಿದೆ. ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸದವರು ಇನ್ಮುಂದೆ ತಾವಿದ್ದ ಸ್ಥಳದಲ್ಲೇ ಶಿವಣ್ಣನ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು. ಅಂದ ಹಾಗೆ ಈ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಕನ್ನಡದಲ್ಲಿ ಮಾತ್ರ ಲಭ್ಯವಿದೆ.
ಇದನ್ನೂ ಓದಿ: ಸುದೀಪ್ 'ಮ್ಯಾಕ್ಸ್'ಗೆ ಮಿಶ್ರ ಪ್ರತಿಕ್ರಿಯೆ: ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಗೊತ್ತಾ?
ಅಮೆರಿಕದಲ್ಲಿ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ಯಶಸ್ವಿ: ಶಿವರಾಜ್‌ಕುಮಾರ್ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದರು. ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕುಟುಂಬ ಮಾಹಿತಿ ಒದಗಿಸಿದೆ.
ಇದನ್ನೂ ಓದಿ: ಶಿವರಾಜ್ಕುಮಾರ್ಗೆ ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ
ಡಾ.ಮುರುಗೇಶ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಗೀತಾ ಶಿವರಾಜ್‌ಕುಮಾರ್ ತಿಳಿಸಿದ್ದಾರೆ.