ETV Bharat / entertainment

ಬೆಂಗಳೂರು ರೇವ್​ ಪಾರ್ಟಿ ಕೇಸ್: ತೆಲುಗು ನಟಿಯ ಬೆಂಬಲಕ್ಕೆ ನಿಂತ ಟಾಲಿವುಡ್​ ಸೂಪರ್ ಸ್ಟಾರ್ - Vishnu Manchu On Rave Party

Bengaluru Rave Party case: ಬೆಂಗಳೂರಿನಲ್ಲಿ ಇತ್ತೀಚೆಗೆ ವರದಿಯಾಗಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ಟಾಲಿವುಡ್​ ನಟಿಯ ಹೆಸರು ಜೋರಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನಟ ವಿಷ್ಣು ಮಂಚು, ಆರೋಪ ಸಾಬೀತಾಗುವವರೆಗೂ ವದಂತಿಗಳನ್ನು ಹರಡಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Vishnu Manchu on Rave Party case
ಬೆಂಗಳೂರು ರೇವ್​ ಪಾರ್ಟಿ ಕೇಸ್​ ಬಗ್ಗೆ ವಿಷ್ಣು ಮಂಚು ಪ್ರತಿಕ್ರಿಯೆ (Vishnu Manchu IG)
author img

By ETV Bharat Karnataka Team

Published : May 26, 2024, 7:12 AM IST

ಬೆಂಗಳೂರು ರೇವ್​ ಪಾರ್ಟಿ ಪ್ರಕರಣ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿದೆ. ತೆಲುಗು ಚಿತ್ರರಂಗ, ಉದ್ಯಮ, ರಾಜಕೀಯ ಕ್ಷೇತ್ರದ ಅನೇಕರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಪೊಲೀಸರು ಈಗಾಗಲೇ ಖಚಿತಪಡಿಸಿದ್ದಾರೆ. ಟಾಲಿವುಡ್​ ಹೀರೋಯಿನ್​ ಓರ್ವರ ಹೆಸರೂ ಕೂಡಾ ಇದರಲ್ಲಿ ಜೋರಾಗಿ ಕೇಳಿಬರುತ್ತಿದ್ದು, ಈ ಬಗ್ಗೆ ತೆಲುಗು ಸ್ಟಾರ್ ಹೀರೋ ವಿಷ್ಣು ಮಂಚು ಪ್ರತಿಕ್ರಿಯಿಸಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ನಟ, ನಿರ್ಮಾಪಕನಾಗಿ ಬೇಡಿಕೆ ಹೊಂದಿರುವ ವಿಷ್ಣು ಮಂಚು, ಡ್ರಗ್ಸ್ ಸೇವಿಸಿದ ಆರೋಪ ಎದುರಿಸುತ್ತಿರುವ ನಟಿಯ ರಕ್ಷಣೆಗೆ ನಿಂತಿದ್ದಾರೆ.

ಮೇ 20ರಂದು ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ನಡೆದ ಪಾರ್ಟಿಯ​ ಮೇಲೆ ಪೊಲೀಸರು ದಾಳಿ​ ನಡೆಸಿದ್ದರು. ಈ ದಾಳಿಯಲ್ಲಿ ಹಲವು ಟಾಲಿವುಡ್​​ ನಟರು ಭಾಗಿಯಾಗಿದ್ದರು ಎಂಬ ವಿಚಾರ ತೆಲುಗು ಚಿತ್ರರಂಗಕ್ಕೆ ಶಾಕ್ ನೀಡಿತ್ತು.

ನಟಿಯ ನಾಟಕ ಬಯಲಿಗೆಳೆದ ಪೊಲೀಸ್ ಕಮಿಷನರ್: ಪ್ರಮುಖವಾಗಿ ಇಬ್ಬರ ಹೆಸರು ಪ್ರಕರಣದಲ್ಲಿ ಹೆಚ್ಚು ಸದ್ದು ಮಾಡಿದ್ದು, ತಮ್ಮ ಮೇಲಿರುವ ಆರೋಪಗಳನ್ನು ಅವರು ಅಲ್ಲಗಳೆದಿದ್ದಾರೆ. ಒಬ್ಬರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದರೆ, ಮತ್ತೋರ್ವ ನಟಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆದರೆ, ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ನಟಿ ಭಾಗಿಯಾಗಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೇ ವಿಡಿಯೋ ಸಂದೇಶ ಬಿಡುಗಡೆ ಮಾಡುವ ಮೂಲಕ ಅಧಿಕಾರಿಗಳನ್ನು ವಂಚಿಸಲು ಪ್ರಯತ್ನಿಸಿದ್ದಾರೆ ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ನಟಿಯ ವೈದ್ಯಕೀಯ ವರದಿಯಲ್ಲಿ ಡ್ರಗ್ಸ್ ಸೇವಿಸಿರುವ ಬಗ್ಗೆ ಪಾಸಿಟಿವ್​ ಬಂದಿರುವುದನ್ನು ಅವರು ದೃಢಪಡಿಸಿದ್ದಾರೆ.

ವಿಷ್ಣು ಮಂಚು 'ಎಕ್ಸ್' ಪೋಸ್ಟ್: ವಿವಾದದ ನಡುವೆ ನಟ ವಿಷ್ಣು ಮಂಚು ನಟಿಯನ್ನು ಬೆಂಬಲಿಸಲು ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್ ಬಳಸಿದ್ದಾರೆ. ಆಧಾರರಹಿತ ಆರೋಪಗಳನ್ನು ಮಾಡುವುದು ಮತ್ತು ಪರಿಶೀಲಿಸದ ಮಾಹಿತಿಯನ್ನು ಹರಡುವುದನ್ನು ನಿಲ್ಲಿಸಲು ಸಾರ್ವಜನಿಕರಲ್ಲಿ ಅವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿ, 'ಇತ್ತೀಚಿನ ರೇವ್ ಪಾರ್ಟಿ ಡ್ರಗ್ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಲವು ಮಾಧ್ಯಮಗಳು ಮತ್ತು ವ್ಯಕ್ತಿಗಳು ನಟಿಯ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಯಾವುದೋ ತೀರ್ಮಾನಕ್ಕೆ ಬರುವುದು, ಪರಿಶೀಲಿಸದ ಮಾಹಿತಿಯನ್ನು ಹರಡುವುದನ್ನು ನಿಲ್ಲಿಸಿ ಎಂದು ನಾನು ಪ್ರತಿಯೊಬ್ಬರಲ್ಲೂ ಕೋರುತ್ತೇನೆ. ಆ ನಟಿ ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ನಿರಪರಾಧಿ. ಅವರು ನಟಿ ಮಾತ್ರವಲ್ಲದೇ, ಕುಟುಂಬಕ್ಕೆ ತಾಯಿ ಮತ್ತು ಪತ್ನಿಯೂ ಹೌದು. ವದಂತಿಗಳ ಆಧಾರದ ಮೇಲೆ ಅವರ ಇಮೇಜ್​ಗೆ ಧಕ್ಕೆ ತರುವುದು ಸಮ್ಮತವಲ್ಲ' ಎಂದು ಬರೆದಿದ್ದಾರೆ.

ಇದನ್ನೂ ಓದಿ: ರೇವ್ ಪಾರ್ಟಿ ಪ್ರಕರಣದ ಆರೋಪಿಗೆ ಆಂಧ್ರ ರಾಜಕಾರಣಿಗಳ ನಂಟು..? - Bangalore Rave Party Case

'ಚಲನಚಿತ್ರ ಕಲಾವಿದರ ಸಂಘ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ಖಂಡಿಸುತ್ತದೆ. ನಟಿ ಮೇಲಿರುವ ಆರೋಪಗಳಿಗೆ ಪೊಲೀಸರು ಸಾಕ್ಷ್ಯ ಒದಗಿಸಿದರೆ ಸಂಘ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಅಲ್ಲಿವರೆಗೆ ದಯವಿಟ್ಟು ಆಧಾರರಹಿತ ವಿಷಯವನ್ನು ದೊಡ್ಡದು ಮಾಡಬೇಡಿ' ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿದ ಬೆಂಗಳೂರು ರೇವ್​ ಪಾರ್ಟಿ!; ನಮ್ಮ ರಾಜಧಾನಿಯೇ ಕೇಂದ್ರವಾಗಿದ್ದೇಕೆ? - Bengaluru Rave Party Case

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 27ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಸಿಸಿಬಿ (ಬೆಂಗಳೂರು) 8 ಆರೋಪಿಗಳಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.