ETV Bharat / entertainment

ಲಂಡನ್‌ನಿಂದ ಕೊಹ್ಲಿ ಫೋಟೋ ವೈರಲ್​: ವಿರುಷ್ಕಾ ಪುತ್ರ 'ಅಕಾಯ್​​' ಹೆಸರಿನ ಅರ್ಥವೇನು ಗೊತ್ತಾ? - ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫೆಬ್ರವರಿ 15ರಂದು ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದ್ದು, ಲಂಡನ್​ನಿಂದ ವಿರಾಟ್​ ಕೊಹ್ಲಿ ಫೋಟೋ ವೈರಲ್ ಆಗಿದೆ.

Virat Kohli photo from London
ಲಂಡನ್‌ನಿಂದ ಕೊಹ್ಲಿ ಫೋಟೋ ವೈರಲ್
author img

By ETV Bharat Karnataka Team

Published : Feb 21, 2024, 11:32 AM IST

ಬಾಲಿವುಡ್​ ಅಭಿನೇತ್ರಿ ಅನುಷ್ಕಾ ಶರ್ಮಾ ಮತ್ತು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ದಂಪತಿಗೆ ಎರಡನೇ ಮಗುವಾಗಿದೆ. ಫೆಬ್ರವರಿ 15ರಂದು ಗಂಡು ಮಗು ಜನಿಸಿದ್ದು, 'ಅಕಾಯ್‌' ಎಂಬ ವಿಭಿನ್ನ- ಆಕರ್ಷಕ ಹೆಸರಿಟ್ಟಿದ್ದಾರೆ. ಕಳೆದ ಗುರುವಾರ ಮಗು ಜನಿಸಿದ್ದು, ನಿನ್ನೆ ರಾತ್ರಿ ಈ ಸುದ್ದಿಯನ್ನು ಸ್ಟಾರ್​ ಕಪಲ್​ ಸೋಷಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಂಪತಿ ಸದ್ಯ ಎಲ್ಲಿದ್ದಾರೆ ಎಂಬ ನಿಖರ ಮಾಹಿತಿ ಹೊರಬಿದ್ದಿಲ್ಲ. ಆದರೆ ಲಂಡನ್‌ನಲ್ಲಿ ವಿರಾಟ್​​ ಅಡ್ಡಾಡುತ್ತಿರುವ ಫೋಟೋ ವೈರಲ್​ ಆಗಿದೆ.

ಈ ಹಿಂದೆ ಲಂಡನ್ ಆಸ್ಪತ್ರೆಯಲ್ಲಿ ಅನುಷ್ಕಾ ಅವರ ಹೆರಿಗೆಯಾಗಲಿದೆ ಎಂಬ ವದಂತಿಗಳು ಹರಡಿದ್ದವು. ವಿರಾಟ್ ಅವರ ಫೋಟೋ ಲಂಡನ್‌ನಿಂದ ವೈರಲ್​ ಆಗಿದ್ದು, ಊಹಾಪೋಹಗಳಿಗೆ ತುಪ್ಪ ಸುರಿದಿದೆ. ಆನ್‌ಲೈನ್‌ನಲ್ಲಿ ಶರವೇಗದಲ್ಲಿ ವೈರಲ್​ ಆಗುತ್ತಿರುವ ಫೋಟೋದಲ್ಲಿ, ವಿರಾಟ್ ಲಂಡನ್‌ನ ಬೀದಿಗಳಲ್ಲಿ ಅಡ್ಡಾಡುತ್ತಿರುವಂತೆ ಕಾಣಿಸಿಕೊಂಡಿದ್ದಾರೆ. ಡಾರ್ಕ್ ಜಾಕೆಟ್, ಬಿಳಿ ಪ್ಯಾಂಟ್‌ ಮತ್ತು ಕ್ಯಾಪ್ ಧರಿಸಿದ್ದಾರೆ. ಈ ದಂಪತಿ ಲಂಡನ್​ನಲ್ಲೇ ಇದ್ದಾರೆ ಎಂದು ಬಹುತೇಕ ನಂಬಲಾಗಿದೆ.

ಜನಪ್ರಿಯ ತಾರಾ ದಂಪತಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ನಿನ್ನೆ ಸಂಜೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಂತಸ ವ್ಯಕ್ತಪಡಿಸಿದ ಜೋಡಿ, ಮಗನಿಗೆ ಅಕಾಯ್​ ಎಂದು ನಾಮಕರಣ ಮಾಡಿದ್ದೇವೆಂದೂ ಕೂಡ ತಿಳಿಸಿದ್ದಾರೆ. ಈ ಸಂದರ್ಭ ತಮ್ಮ ಗೌಪ್ಯತೆ ಗೌರವಿಸುವಂತೆಯೂ ವಿನಂತಿಸಿದರು. ಆಶೀರ್ವಾದ ಮತ್ತು ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಹ ಅರ್ಪಿಸಿದರು.

ಈ ವಿಚಾರ ತಿಳಿಯುತ್ತಿದ್ದಂತೆ, ಅಭಿಮಾನಿಗಳು ಮತ್ತು ನೆಟ್ಟಿಗರು 'ಅಕಾಯ್' ಹೆಸರಿನ ಅರ್ಥ ಹುಡುಕಿದ್ದಾರೆ. ನಾನಾ ಭಾಷೆಗಳಲ್ಲಿ ಇದರರ್ಥ ಬಹಳ ಸಕಾರಾತ್ಮಕವಾಗಿ ಇದೆ. ​ ಟರ್ಕಿಶ್ ಭಾಷೆಯಲ್ಲಿ ಹೊಳೆಯುವ ಚಂದ್ರ ಅಥವಾ ಹುಣ್ಣಿಮೆ ಚಂದ್ರ ಎಂಬ ಅರ್ಥ ಇದೆ. ಅಲ್ಲದೇ 'ಭೌತಿಕ ದೇಹ ಮೀರಿದ' ಎಂಬ ಅರ್ಥವನ್ನೂ ಒಳಗೊಂಡಿದೆ. ಹೀಗೆ ನಾನಾ ಅರ್ಥವಿದ್ದು, ವಿರುಷ್ಕಾ ದಂಪತಿ ಯಾವ ಅರ್ಥದಲ್ಲಿ ಈ ಹೆಸರಿಟ್ಟಿದ್ದಾರೆ ಎಂಬುದನ್ನು ಸ್ವತಃ ಅವರೇ ತಿಳಿಸಬೇಕಿದೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ದಂಪತಿಗೆ ಗಂಡು ಮಗು ಜನನ; ವಿಭಿನ್ನವಾಗಿ ಹೆಸರಿಟ್ಟ ವಿರುಷ್ಕಾ ಜೋಡಿ

ಅನುಷ್ಕಾ ಅವರ ಪ್ರೆಗ್ನೆನ್ಸಿ ಬಗ್ಗೆ ಕೆಲ ಸಮಯಗಳಿಂದ ಊಹಾಪೋಹಗಳು ಎದ್ದಿದ್ದವು. ಅಧಿಕೃತ ಮಾಹಿತಿಗೆ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಅದಾಗ್ಯೂ ದಂಪತಿ ಈ ವಿಚಾರವನ್ನು ಖಚಿತಪಡಿಸಲಿಲ್ಲ, ಮತ್ತೊಂದೆಡೆ ನಿರಾಕರಿಸಲೂ ಇಲ್ಲ. ಮೊದಲ ಮಗುವಿನ ಜನನಕ್ಕೂ ಮುನ್ನ ತಾವು ಪೋಷಕರಾಗಲಿದ್ದೇವೆ ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಘೋಷಿಸಿಕೊಂಡಿದ್ದರು. ಈ ಬಾರಿ ಮಗು ಜನಿಸಿ ಒಂದು ವಾರದ ಬಳಿಕ ವಿಚಾರವನ್ನು ಹಂಚಿಕೊಂಡಿದ್ದಾರೆ. 2018ರಲ್ಲಿ ತೆರೆಕಂಡ ಶಾರುಖ್​ ಖಾನ್​ ಅವರ 'ಝೀರೋ' ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಮುಂದಿನ ನೆಟ್‌ಫ್ಲಿಕ್ಸ್ ಚಿತ್ರ ಚಕ್ಡಾ ಎಕ್ಸ್‌ಪ್ರೆಸ್ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.