ETV Bharat / entertainment

'ಮಾದೇವ'ನ ಮಾಸ್ ಟೀಸರ್​ಗೆ ಫ್ಯಾನ್ಸ್ ಫಿದಾ.. ಭರ್ಜರಿ ಆ್ಯಕ್ಷನ್ ಸೀನ್​​ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ - Vinod Prabhakar

ವಿನೋದ್ ಪ್ರಭಾಕರ್ ನಟನೆಯ 'ಮಾದೇವ' ಚಿತ್ರದ ಟೀಸರ್​ ಅನಾವರಣಗೊಂಡಿದೆ.

Vinod Prabhakar starrer Madeva teaser release
ವಿನೋದ್ ಪ್ರಭಾಕರ್ ನಟನೆಯ ಮಾದೇವ ಟೀಸರ್​
author img

By ETV Bharat Karnataka Team

Published : Jan 26, 2024, 8:58 PM IST

ಕನ್ನಡ ಚಿತ್ರರಂಗದಲ್ಲಿ 'ಮರಿ ಟೈಗರ್' ಎಂದು ಜನಪ್ರಿಯರಾಗಿರೋ ನಟ ವಿನೋದ್ ಪ್ರಭಾಕರ್. 'ಫೈಟರ್' ಚಿತ್ರದ ಬಳಿಕ ವಿನೋದ್ ಪ್ರಭಾಕರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಮಾದೇವ'. ಪೋಸ್ಟರ್​​ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮಾದೇವ ಟೀಸರ್ ಅನಾವರಣ ಕಾರ್ಯಕ್ರಮಕ್ಕೆ ನಿರ್ದೇಶಕ ತರುಣ್ ಸುಧೀರ್, ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಝೈದ್ ಖಾನ್ ಆಗಮಿಸಿ ವಿನೋದ್ ಪ್ರಭಾಕರ್ ಅವರಿಗೆ ಸಾಥ್ ಕೊಟ್ಟರು.

ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ತರುಣ್ ಸುಧೀರ್, ವಿನೋದ್ ಮತ್ತು ನನ್ನ ನಡುವೆ ಒಂದೊಳ್ಳೆ ಬಾಂಡಿಂಗ್ ಇದೆ. ರಿಯಲ್ ಲೈಫ್ ಫೈಟರ್ ವಿನೋದ್. ಮಾದೇವ ಪ್ರೆಸೆಂಟೇಷನ್, ಅವರ ಲುಕ್ ಬಹಳ ಚೆನ್ನಾಗಿದೆ. ಬಿಯರ್ಡ್ ಲುಕ್​​ನಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತಾರೆ. ಕೆಲಸದ ವಿಚಾರದಲ್ಲಿ ಪ್ರಾಮಾಣಿಕ, ಡೆಡಿಕೇಟೆಡ್, ಹಾರ್ಡ್ ವರ್ಕರ್. ಸಿನಿಮಾದಲ್ಲಿ ಬಹಳ ಶ್ರಮ ಹಾಕಿ ಕೆಲಸ ಮಾಡುತ್ತಾರೆ. ಈ ಜಾನರ್ ತುಂಬಾ ಕಷ್ಟ. ತುಂಬಾ ವರ್ಕ್, ರಿಸರ್ಚ್ ಇರುತ್ತದೆ. ಅದ್ಭುತವಾಗಿ ತೆರೆಮೇಲೆ ತಂದಿದ್ದಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಶುಭ ಹಾರೈಸಿದರು.

  • " class="align-text-top noRightClick twitterSection" data="">

ನಟ ಅಭಿಷೇಕ್ ಅಂಬರೀಶ್ ಮಾತನಾಡಿ, ಟೈಗರ್ ಅವರ ಆ್ಯಕ್ಟಿಂಗ್, ಫೈಟ್, ಸ್ಕ್ರೀನ್ ಪ್ರೆಸೆಂಟ್ಸ್ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ. ನಮ್ಮೆಲ್ಲರಿಗಿಂತ ಅವರು ಹಿರಿಯರು. ಆದರೆ, ಯುವಕರಾಗಿ ಕಾಣಿಸಿಕೊಳ್ಳುತ್ತಾರೆ. ವಿಶ್ಯೂವಲ್ಸ್, ಕ್ಯಾಮರಾ ವರ್ಕ್, ಮ್ಯೂಸಿಕ್ ಚೆನ್ನಾಗಿದೆ. ಸಬ್ಜೆಕ್ಟ್ ಬೇರೆ ತರಹ ಇದೆ. ಇತ್ತೀಚೆಗಿನ ದಿನಗಳಲ್ಲಿ 70ರ ಕಥೆ ಸಕ್ಸಸ್ ಆಗಿದೆ. ಈಗ 80ರ ಕಥೆಗೆ ಬಂದಿದ್ದೇವೆ. 2023ರ ಹಿಟ್ ಸಿನಿಮಾ ಕಾಟೇರ. 2024ರ ಹಿಟ್ ನಿಮ್ಮದಾಗಲಿ ಎಂದು ಶುಭ ಹಾರೈಸಿದರು.

ನಾಯಕ ವಿನೋದ್ ಪ್ರಭಾಕರ್ ಮಾತನಾಡಿ, ನಾವು ಏನು ಅನ್ನೋದನ್ನು ಕೆಲಸದಲ್ಲಿ ತೋರಿಸುತ್ತೇವೆ. ಇದು ಬೇರೆ ರೀತಿಯ ಜಾನರ್. ಬಹಳಷ್ಟು ಜನ ಟಚ್ ಮಾಡಲು ಆಗದ ಕಥೆ. ನನ್ನ ಗೆಟಪ್ ನಿಮಗೆ ಇಷ್ಟ ಆಗಿದೆ ಅಂದುಕೊಳ್ಳುತ್ತೇನೆ. ಬೆಸ್ಟ್ ಲುಕ್ ಮಾದೇವ ಅಂತಾ ನನಗೆ ಅನಿಸುತ್ತದೆ. ಪ್ರೊಡ್ಯೂಸರ್ ಕೇಶವಣ್ಣ ಬಹಳಷ್ಟು ಕಷ್ಟ ಎದುರಿಸಿ ಸಿನಿಮಾ ಮಾಡಿದ್ದೀರಾ? ನಿಮಗೆ ಒಳ್ಳೆದಾಗಲಿ. ಸಿನಿಮಾ ಬಗ್ಗೆ ಮಾತಾನಾಡುವುದು ತುಂಬಾ ಇದೆ. ಟ್ರೇಲರ್ ಇವೆಂಟ್​ನಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು.

ನಾಯಕಿ ಸೋನಲ್ ಮಾತನಾಡಿ, ರಾಬರ್ಟ್ ಆದ ಮೇಲೆ ನನಗೆ ವಿನೋದ್ ಸರ್ ಜೋಡಿಯಾಗಿ ತುಂಬಾ ಸಿನಿಮಾಗಳು ಬಂದವು. ಆದರೆ ಯಾವುದು ಸೆಟ್ ಆಗಲಿಲ್ಲ. ಮಾದೇವ ಸಿನಿಮಾ ವಿನೋದ್ ಸರ್​ಗೆ ಬಂದಿದ್ದು, ಅವರು ನನ್ನನ್ನು ಕಾಸ್ಟ್ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದಾಗ ನನ್ನ ಜರ್ನಿ ಶುರುವಾಯ್ತು. ಹಳ್ಳಿ ಹುಡ್ಗಿ ಪಾತ್ರ ನನ್ನದು. ನಾನು ತುಂಬಾ ಎಂಜಾಯ್ ಮಾಡಿ ನನ್ನ ಪಾತ್ರ ಮಾಡಿದ್ದೇನೆ ಎಂದು ತಿಳಿಸಿದರು.

ನಿರ್ದೇಶಕ ನವೀನ್ ರೆಡ್ಡಿ ಮಾತನಾಡಿ, ಶೃತಿ ಮೇಡಂ ಪಾತ್ರ ಚಾಲೆಂಜಿಂಗ್ ಆಗಿದೆ. ಇಡೀ ಸಿನಿಮಾವನ್ನು ವಿನೋದ್ ಸರ್ ತಮ್ಮ ಭುಜದ ಮೇಲೆ ಹಾಕಿ ತೆಗೆದುಕೊಂಡು ಹೋಗುತ್ತಾರೆ. ಅಚ್ಯುತ್ ಸರ್ ಗೆಸ್ಟ್ ರೋಲ್​​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಆಗಿ ಕಿಟ್ಟಿ ಸರ್ ನಟಿಸಿದ್ದಾರೆ. ಇಡೀ ತಂಡದ ಶ್ರಮ ಇದು ಎಂದರು.

ಇದನ್ನೂ ಓದಿ: 'ಬಿಗ್​​ ಬಾಸ್​ ಗೆಲ್ಲೋರು ಯಾರು'? ಎಲಿಮಿನೇಟ್ ಆದ ಸ್ಪರ್ಧಿಗಳು ಏನಂತಾರೆ!

ಮಾದೇವ ಟೀಸರ್ ಮಾಸ್ ಅಂಶಗಳಿಂದ ಕೂಡಿದೆ. ಮರಿ ಟೈಗರ್ ವಿನೋದ್ ಪ್ರಭಾಕರ್ ರಗಡ್ ಅವಾತರಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಕಂಡಿರದಂತಹ ಗೆಟಪ್​ನಲ್ಲಿ ಮಿಂಚಿದ್ದಾರೆ. ಖಳನಾಯಕನಾಗಿ ಶ್ರೀನಗರಕಿಟ್ಟಿ ಹಾಗೂ ಶ್ರುತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಬರ್ಟ್ ಸಿನಿಮಾದಲ್ಲಿ ರಾಘವ್ ಮತ್ತು ತನು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗಿದ್ದ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂಥೆರೋ ಮಾದೇವ ಚಿತ್ರದಲ್ಲೂ ಜೋಡಿಯಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ''ಜನರಿಂದಲೇ ದೇಶ, ಜನರಿಂದಲೇ ಸಿನಿಮಾ; ಜನರೇ ದೇಶ - ಜನರೇ ಸಿನಿಮಾ'': ಬ್ಲಿಂಕ್ ಚಿತ್ರತಂಡ

ನೈಜ ಘಟನೆಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾದ ಕಥೆಯು 1965, 1980 ಮತ್ತು 1999ರ ಕಾಲಘಟ್ಟದಲ್ಲಿ ನಡೆಯಲಿದೆ. ಕನಕಪುರ, ಚನ್ನಪಟ್ಟಣ, ಶಿವಮೊಗ್ಗ, ರಾಮೋಜಿ ಫಿಲ್ಮ್ ಸಿಟಿ, ಹೆಸರಘಟ್ಟ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಾಹುಬಲಿ, ಆರ್​ಆರ್​ಆರ್​ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ತೋಟ ಮಾದೇವ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ರಾಧಾಕೃಷ್ಣ ಬ್ಯಾನರ್ ಅಡಿ ಆರ್ ಆರ್ ಕೇಶವ ದೇವಸಂದ್ರ ಚಿತ್ರಕ್ಕೆ ಹಣ ಹಾಕಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.