ETV Bharat / entertainment

ವಿನಯ್ ರಾಜ್​​ಕುಮಾರ್ 'ಪೆಪೆ' ಸಿನಿಮಾ ವಿತರಿಸಲಿದೆ ಕೆಆರ್‌ಜಿ ಸ್ಟುಡಿಯೋಸ್ - Vinay Rajkumar PEPE

author img

By ETV Bharat Entertainment Team

Published : Aug 12, 2024, 6:23 PM IST

ವಿನಯ್ ರಾಜ್​ಕುಮಾರ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ಪೆಪೆ' ಬಿಡುಗಡೆಗೆ ಸಜ್ಜಾಗುತ್ತಿದೆ. ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿರುವ ಚಿತ್ರದ ವಿತರಣೆ ಹಕ್ಕು ಕೆಆರ್​ಜಿ ತೆಕ್ಕೆ ಸೇರಿದೆ. ಕೆಆರ್​​ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ 'ಪೆಪೆ' ವಿತರಿಸಲಿದ್ದಾರೆ.

Pepe team
'ಪೆಪೆ' ಸಿನಿಮಾ ವಿತರಿಸಲಿದೆ ಕೆಆರ್‌ಜಿ ಸ್ಟುಡಿಯೋಸ್ (ETV Bharat)

'ಒಂದು ಸರಳ ಪ್ರೇಮಕಥೆ' ಚಿತ್ರದ ಬಳಿಕ ದೊಡ್ಮನೆ ಕುಡಿ ವಿನಯ್ ರಾಜ್​ಕುಮಾರ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ 'ಪೆಪೆ'. ಬಹುತೇಕ ಶೂಟಿಂಗ್​ ಮುಗಿಸಿಕೊಂಡಿರುವ ಚಿತ್ರತಂಡ ಬಿಡುಗಡೆಗೆ ಸಜ್ಜಾಗುತ್ತಿದೆ. ಸೆನ್ಸಾರ್ ಪರೀಕ್ಷೆಯಲ್ಲಿ ಪಾಸಾಗಿರುವ ಚಿತ್ರತಂಡದಿಂದ ಅಭಿಮಾನಿಗಳಿಗೆ ಹೊಸ ಅಪ್ಡೇಟ್​ ಸಿಕ್ಕಿದೆ.

ಪೆಪೆ ವಿತರಣೆ ಹಕ್ಕು ಕೆಆರ್​ಜಿ ತೆಕ್ಕೆಗೆ: ಕ್ಲಾಸ್ ಹೀರೋ ಆಗಿ ಸೈ ಎನಿಸಿಕೊಂಡಿರುವ ವಿನಯ್ ಅವರೀಗ 'ಪೆಪೆ' ಚಿತ್ರಕ್ಕಾಗಿ ಮಾಸ್ ಅವತಾರ ಎತ್ತಿದ್ದಾರೆ. ಹೀಗಾಗಿ ಸಿನಿಮಾ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇದೆ. ಕ್ಲಾಸ್ ಹೀರೋನನ್ನು ಮಾಸ್​ ಲುಕ್​​​​ನಲ್ಲಿ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ. 'ಪೆಪೆ ಪ್ರಿಸೆಟ್' ಟೈಟಲ್ ಅಡಿ ಬಂದ ಸಾಂಗ್ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ಚಿತ್ರದ ವಿತರಣೆ ಹಕ್ಕು ಕೆಆರ್​ಜಿ ತೆಕ್ಕೆಗೆ ಸೇರಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

'ಪೆಪೆ' ತಂಡಕ್ಕೆ ಕೆಆರ್​ಜಿ ಸಾಥ್: ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಪೆಪೆ' ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ. ಸಿನಿಮಾಗಳ ವಿತರಣೆಯಲ್ಲಿ ಒಳ್ಳೆ ಹೆಸರು ಗಳಿಸಿರುವ ಈ ಸಂಸ್ಥೆಯೀಗ 'ಪೆಪೆ' ಚಿತ್ರ ತಂಡಕ್ಕೆ ಸಾಥ್ ಕೊಟ್ಟಿದೆ. ಕೆಆರ್​​ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ.ರಾಜ್ 'ಪೆಪೆ' ಸಿನಿಮಾ ವಿತರಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಕ್ಲಾಸ್ ಹೀರೋನಿಂದ ಮಾಸ್ ಲುಕ್​ಗೆ ಎಂಟ್ರಿ: ವಿನಯ್ ರಾಜ್‌ಕುಮಾರ್ ಇಲ್ಲಿವರೆಗೂ ಸಾಫ್ಟ್ ಚಿತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಆದ್ರೆ ಪೆಪೆ ಚಿತ್ರ ವಿಭಿನ್ನವಾಗಿಯೇ ಇವೆ. ಚಿತ್ರದಲ್ಲಿ ವಿನಯ್ ರಗಡ್ ಲುಕ್​​ನಲ್ಲಿ‌ ಕಾಣಿಸಿಕೊಳ್ಳಲಿದ್ದಾರೆ. ಕ್ಲಾಸ್ ಹೀರೋನಿಂದ ಮಾಸ್ ನಟನಾಗಿ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ ಅಭಿನಯದ 'ಭೈರತಿ ರಣಗಲ್' ಟೈಟಲ್​ ಟ್ರ್ಯಾಕ್​ಗೆ ಫ್ಯಾನ್ಸ್ ಫಿದಾ - Bhairathi Ranagal Title Song

ಚಿತ್ರತಂಡ ಹೀಗಿದೆ: ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಚೊಚ್ಚಲ ಚಿತ್ರವಿದು. ತಮ್ಮ ಮೊದಲ ಹೆಜ್ಜೆಯಲ್ಲಿಯೇ ಒಂದು ರೀತಿಯ ಪರಿಪೂರ್ಣ, ವಿಭಿನ್ನ ಕಥೆ ಹೊತ್ತು ಬರುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಕಾಜಲ್‌ ಕುಂದರ್‌ ನಟಿಸಿದ್ದು, ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ.ಪಡೀಲ್‌ ಅವರನ್ನು ಒಳಗೊಂಡ ತಾರಾಬಳಗವಿದೆ. ಚಿತ್ರಕ್ಕೆ ಅಭಿಷೇಕ್‌ ಜಿ.ಕಾಸರಗೋಡು ಕ್ಯಾಮರಾ ವರ್ಕ್ ನಿಭಾಯಿಸಿದ್ದು, ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನ ಇದೆ.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತಂದ 'ಭೀಮ': 3 ದಿನಗಳ ಕಲೆಕ್ಷನ್‌ ಎಷ್ಟು? - Bheema Collection

ಡಾ.ರವಿವರ್ಮಾ, ಚೇತನ್‌ ಡಿಸೋಜಾ, ಡಿಫ್ರೆಂಟ್‌ ಡ್ಯಾನಿ, ನರಸಿಂಹ ಅವರ ತಂಡ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರಗಳಲ್ಲಿ'ಪೆಪೆ' ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಉದಯ್‌ ಸಿನಿ ವೆಂಚರ್‌, ದೀಪ ಫಿಲ್ಮ್ಸ್ ಬ್ಯಾನರ್‌ನಡಿ ಉದಯ್ ಶಂಕರ್ ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಚಿತ್ರತಂಡ ಕಾರ್ಯನಿರ್ವಹಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.