ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ಚಿತ್ರಗಳು ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಾಣುತ್ತಿವೆ. ಅಂತಹ ಉತ್ತಮ ಕಂಟೆಂಟ್ನೊದಿಗೆ ಬರುತ್ತಿರುವ ಚಿತ್ರ 'ವಿಕಾಸ ಪರ್ವ'. ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಹಾಗೂ ಸ್ವಾತಿ ಅಭಿನಯಿಸಿರುವ 'ವಿಕಾಸ ಪರ್ವ' ಈಗಾಗಲೇ ಹಾಡುಗಳಿಂದ ಗಮನ ಸೆಳೆದಿದೆ. ಶೂಟಿಂಗ್ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗುತ್ತಿರುವ ಚಿತ್ರಕ್ಕೀಗ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.
'ವಿಕಾಸ ಪರ್ವ' ಸಾಮಾಜಿಕ ಕಳಕಳಿಯುಳ್ಳ ಚಿತ್ರ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಿರುತೆರೆ ನಟ ರೋಹಿತ್ ನಾಗೇಶ್ ಮತ್ತು ಸ್ವಾತಿ ನಟಿಸಿದ್ದಾರೆ. ನಿಶಿತಾ ಗೌಡ, ಅಶ್ವಿನ್ ಹಾಸನ್, ಬಾಲ ರಾಜವಾಡಿ, ಕುರಿ ರಂಗ, ಸಮೀರ್ ನಗರದ್, ವಿಘ್ನೇಶ್, ಬೇಬಿ ಬಿಲ್ವ, ಮಾಸ್ಟರ್ ಅಭಯ್ ಸೇರಿದಂತೆ ಮೊದಲಾದವರು ತಾರಾಬಳಗದಲ್ಲಿದ್ದಾರೆ.
ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ಬರೆದಿದ್ದಾರೆ. ಜೊತೆಗೆ, ಕಾರ್ಯಕಾರಿ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನವೀನ್ ಸುವರ್ಣ ಛಾಯಾಗ್ರಹಣ, ಎ ಪಿ ಓ ಸಂಗೀತ ನಿರ್ದೇಶನ, ಶ್ರೀನಿವಾಸ್ ಕಲಾಲ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಧನುಕುಮಾರ್, ಜೈ ಮಾಸ್ಟರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಟೀಸರ್ನಿಂದ ಸದ್ದು ಮಾಡುತ್ತಿರುವ ವಿಕಾಸ ಪರ್ವ ಚಿತ್ರ ಶೀಘ್ರದಲ್ಲೇ ರಾಜ್ಯಾದ್ಯಂತ ತೆರೆ ಕಾಣಲಿದೆ.
ಇದನ್ನೂ ಓದಿ: 6 ಮುದ್ದು ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ರಕ್ಷಿತ್ ಶೆಟ್ಟಿ ಹಂಚಿಕೊಂಡ ವಿಡಿಯೋ ನೋಡಿ - Charlie Puppies
ಬೆಳೆಯುತ್ತಿರುವ ಸ್ಯಾಂಡಲ್ವುಡ್ನಲ್ಲೀಗ ಕಂಟೆಂಟ್ ಓರಿಯೆಂಟೆಡ್ ಚಿತ್ರಗಳದ್ದೇ ಪರ್ವ. ಒಂದೊಳ್ಳೆ ಕಂಟೆಂಟ್‌ನೊಂದಿಗೆ ಹೆಚ್ಚಿನ ಸಂಖ್ಯೆಯ ಸಿನಿಮಾಗಳು ಮೂಡಿಬರುತ್ತಿವೆ. ಈ 'ವಿಕಾಸ ಪರ್ವ' ಕೂಡ ಇದೇ ಸಾಲಿಗೆ ಸೇರಿದೆ. ಇದು ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಲೋಕ ಸಮರದಲ್ಲಿ ಕಂಗನಾ ಫುಲ್ ಬ್ಯುಸಿ: 'ಎಮರ್ಜೆನ್ಸಿ' ಬಿಡುಗಡೆ ಮತ್ತೆ ಮುಂದೂಡಿಕೆ - Emergency Movie