ETV Bharat / entertainment

ದರ್ಶನ್​ ಭೇಟಿಯಾದ ವಿಜಯಲಕ್ಷ್ಮಿ: ಜೈಲು ಮುಂದೆ ಮಹಿಳಾ ಅಭಿಮಾನಿಯ ಹೈಡ್ರಾಮಾ - Vijayalakshmi met Darshan

ಇಂದು ಬಳ್ಳಾರಿ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಭೇಟಿಯಾಗಿದ್ದಾರೆ.

Vijayalakshmi met Darshan In Ballary jail
ದರ್ಶನ್​ ಭೇಟಿಯಾದ ವಿಜಯಲಕ್ಷ್ಮಿ (ETV Bharat)
author img

By ETV Bharat Entertainment Team

Published : Sep 5, 2024, 8:12 PM IST

ದರ್ಶನ್​ ಭೇಟಿಯಾದ ವಿಜಯಲಕ್ಷ್ಮಿ (ETV Bharat)

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್​​​​ ಬಳ್ಳಾರಿ ಜೈಲಿನಲ್ಲಿದ್ದು, ಇಂದು ಪತ್ನಿ ವಿಜಯಲಕ್ಷ್ಮಿ ಅವರನ್ನು ಭೇಟಿಯಾಗಿದ್ದಾರೆ. ಜೈಲು ನಿಯಮಗಳನ್ನು ಪಾಲಿಸಿದ ಜೈಲಧಿಕಾರಿಗಳು ಸರಿಯಾದ ಸಮಯಕ್ಕೆ ಅವರ ಭೇಟಿಗೆ ಅವಕಾಶ ಕೊಟ್ಟಿದ್ದಾರೆ.

4.30ರಿಂದ 5.30ಕ್ಕೆ ವಿಜಿಟರ್ಸ್​​ಗೆ ಅವಕಾಶವಿದೆ. ಇಂದು 20 ನಿಮಿಷ ಮುಂಚಿತವಾಗಿಯೇ ಬಂದ ವಿಜಯಲಕ್ಷ್ಮಿ ವಿಜಿಟರ್ಸ್ ರೂಮ್​​ನಲ್ಲಿ ಕಾದು ಕುಳಿತಿದ್ದರು. 4.29ಕ್ಕೆ ಹೈ ಸೆಕ್ಯೂರಿಟಿ ಸೆಲ್​​ನಿಂದ ವಿಜಿಟರ್ಸ್ ರೂಮ್​​ಗೆ ದರ್ಶನ್ ಅವರನ್ನು ಜೈಲು ಸಿಬ್ಬಂದಿ ಕರೆ ತಂದರು. ನಟ ತೂಕ ಕಳೆದುಕೊಂಡಂತೆ ತೋರುತ್ತಿತ್ತು. ಕೆಲ ಹೊತ್ತು ಮಾತನಾಡಿ ಹೊರಬಂದರು. ವಿಜಯಲಕ್ಷ್ಮಿ ಜೊತೆಗೆ ಸಹೋದರ ದಿನಕರ್​ ಕೂಡಾ ಇದ್ದರು.

ಜೈಲು ನಿಯಮದ ಪ್ರಕಾರ ಕೇವಲ 30 ನಿಮಿಷ ಮಾತನಾಡಲು ಅವಕಾಶವಿದೆ. ಹೆಚ್ಚಿನ ಸಮಯ ಮಾತನಾಡಬೇಕಾದರೆ ಜೈಲು ಅಧೀಕ್ಷಕರ ಅನುಮತಿ ಕಡ್ಡಾಯ. ವಿಜಯಲಕ್ಷ್ಮಿ ಮತ್ತು ದಿನಕರ್ ಭೇಟಿ ಬಳಿಕ ದರ್ಶನ್ ಅವರನ್ನು ಸೆಲ್​​ಗೆ ಜೈಲು ಪೊಲೀಸರು ವಾಪಸ್​ ಕರೆದುಕೊಂಡು ಹೋದರು. ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಮಾತುಕತೆ ಮುಕ್ತಾಯಗೊಳಿಸಿದ್ದಾರೆ. ದರ್ಶನ್​​ ಚಾರ್ಜ್​​ಶೀಟ್​​, ಬೇಲ್, ಅಡ್ವೊಕೇಟ್ ಜೊತೆಗೆ ಮಗನ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಜೈಲು ನಿಯಮದಂತೆ ವಿಸಿಟರ್ ಸೆಲ್​​​ನಲ್ಲೇ ಅರ್ಧ ಗಂಟೆ ಮಾತುಕತೆ ನಡೆಸಿದರು. ನಂತರ ದರ್ಶನ್​ ಅವರಿಗೆ ಡ್ರೈ ಫ್ರೂಟ್ ಮತ್ತು ಬೇಕರಿ ತಿನಿಸನ್ನು ವಿಜಯಲಕ್ಷಿ ಕೊಟ್ಟು ಅಲ್ಲಿಂದ ಹೊರಟಿದ್ದಾರೆ

ಪತ್ನಿ ವಿಜಯಲಕ್ಷ್ಮಿ ಆಗಮನದ ಹಿನ್ನೆಲೆ, ಜೈಲು ಅಧಿಕಾರಿಗಳನ್ನು ದರ್ಶನ್ ಭಾಮೈದ ಭೇಟಿ ಮಾಡಿದ್ದರು. ಸುಶಾಂತ್ ನಾಯ್ಡು ಅವರು ಜೈಲು ಅಧೀಕ್ಷಕಿ ಲತಾ ಅವರನ್ನು ಭೇಟಿ ಮಾಡಿ ಸಂಜೆಯ ಭೇಟಿಗೆ ಅನುಮತಿ ಪಡೆದುಕೊಂಡಿದ್ದರು. ವಿಜಯಲಕ್ಷ್ಮಿ ಸೇರಿ ಮೂವರು ಕುಟುಂಬ ಸದಸ್ಯರ ಭೇಟಿಗೆ ಅನುಮತಿ ದೊರಕಿತ್ತು.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್' ಇದ್ದರೆ ಕ್ರಮ ಗ್ಯಾರಂಟಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - Lakshmi Hebbalkar on Casting Couch

5.23ಕ್ಕೆ ಕಾರಾಗೃಹದಿಂದ ಈ ಮೂವರು ಹೊರಗೆ ಬಂದರು. ಸುಮಾರು 1.15 ಗಂಟೆ ಕಾಲ ಕಾರಾಗೃಹದಲ್ಲಿಯೇ ಇದ್ದರು. ಹೊರಗಡೆ ಬಂದ ವಿಜಯಲಕ್ಷ್ಮಿ ಯಾರಿಗೂ ಪ್ರತಿಕ್ರಿಯಿಸದೇ ನೇರವಾಗಿ ಕಾರ್​ನಲ್ಲಿ ಕುಳಿತು ಹೊರಟರು. ಜೈಲಿನ ಹೊರಗಡೆ ಅಭಿಮಾನಿಗಳು ಕಾದು ನಿಂತಿದ್ದರು. ಡಿ ಬಾಸ್ ಎಂದು ಘೋಷಣೆ ಕೂಗಿದರು.

ಮಹಿಳಾ ಅಭಿಮಾನಿಯ ಹೈಡ್ರಾಮಾ: ಬಳ್ಳಾರಿ ಸೆಂಟ್ರಲ್ ಜೈಲು ಮುಂಭಾಗದಲ್ಲಿ ದರ್ಶನ್ ಅವರ ಮಹಿಳಾ ಅಭಿಮಾನಿಯೋರ್ವರು ಹೈ ಡ್ರಾಮಾ ನಡೆಸಿದ್ದಾರೆ. ದರ್ಶನ್ ನೋಡಲೇಬೇಕೆಂದು ಪಟ್ಟು ಹಿಡಿದಿದ್ದರು. ಜೈಲು ಮುಂಭಾಗದಲ್ಲಿ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದಾರೆ.

ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದು ತಿಳಿಸಿದಾಗ, ನಾನು ಮದುವೆ ಆಗೋದಕ್ಕೂ ರೆಡಿಯಾಗಿ ಬಂದಿರುವೆ ಎಂದು ಆ ಅಭಿಮಾನಿ ತಿಳಿಸಿದ್ದಾರೆ. ವಿಜಯಲಕ್ಷ್ಮಿ ಅವರಂತೆ ನಾನೂ ಮದುವೆ ಆಗುತ್ತೇನೆ. ನನಗೆ ದರ್ಶನ್ ಅವರಂದ್ರೆ ಇಷ್ಟ. ಪರಪ್ಪನ ಅಗ್ರಹಾರಕ್ಕೆ ಹೋದ್ರೆ ಅಲ್ಲೂ ಬಿಡಲಿಲ್ಲ. ಈಗ ಇಲ್ಲಿಗೆ ಬಂದಿರುವೆ. ಹಣ್ಣು ಕೊಟ್ಟು ಅವರನ್ನು ನೋಡಿ ಹೋಗುವೆ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಮನವೊಲಿಸಿ ವಾಪಸ್ ಕಳುಹಿಸುವಲ್ಲಿ ಜೈಲು ಸಿಬ್ಬಂದಿ ಯಶಸ್ವಿಯಾದರು.

ಇದನ್ನೂ ಓದಿ: ಬಿಗ್​ ಬಾಸ್​ ಕಾರ್ತಿಕ್​​​ 'ರಾಮರಸ' ಚಿತ್ರತಂಡದಿಂದ ಗೌರಿಗಣೇಶ ಹಬ್ಬದ ಆಚರಣೆ: ಚಿತ್ರರಂಗದಲ್ಲಿ ನಟಿಯರ ಸೇಫ್ಟಿ ಬಗ್ಗೆ ನಟ ಹೇಳಿದ್ದಿಷ್ಟು - Karthik on Actress Safety

ETV Bharat Logo

Copyright © 2024 Ushodaya Enterprises Pvt. Ltd., All Rights Reserved.