ETV Bharat / entertainment

ರೋಮಿಯೋ ನಿರ್ದೇಶಕ ಪಿ.ಸಿ.ಶೇಖರ್ ಜೊತೆ ಕೈಜೋಡಿಸಿದ ವಿಜಯ್​​ ರಾಘವೇಂದ್ರ: ರೈತರ ಕುರಿತ ಸಿನಿಮಾದಲ್ಲಿ ಚಿನ್ನಾರಿಮುತ್ತ - Vijay Raghavendra Movie

author img

By ETV Bharat Entertainment Team

Published : Aug 23, 2024, 7:24 PM IST

ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಪಿ.ಸಿ.ಶೇಖರ್ ಅವರೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ರೈತನ ಕುರಿತಾದ ಈ ಸಿನಿಮಾದಲ್ಲಿ ಚಿನ್ನಾರಿಮುತ್ತ ವಿಜಯ್​​ ರಾಘವೇಂದ್ರ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

Vijay Raghavendra movie with PC Shekhar
ಪಿ.ಸಿ.ಶೇಖರ್ ಜೊತೆ ಕೈಜೋಡಿಸಿದ ವಿಜಯ್​​ ರಾಘವೇಂದ್ರ (ETV Bharat)

ಕನ್ನಡ ಚಿತ್ರರಂಗದಲ್ಲಿ ರೋಮಿಯೋ, ರಾಗ ಸೇರಿದಂತೆ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಅವರೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಇವರ ಜೊತೆ ಸ್ಯಾಂಡಲ್​ವುಡ್​ನ ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ ವಿಜಯ್​​ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇದೊಂದು ರೈತರ ಕುರಿತಾದ ಸಿನಿಮಾವಾಗಿದೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಪಿ.ಸಿ.ಶೇಖರ್, "ಇದು ರೈತನ ಕುರಿತ ಸಿನಿಮಾ. ಬಹುತೇಕ ಚಿತ್ರೀಕರಣ ಹಳ್ಳಿಯಲ್ಲಿಯೇ ನಡೆಯಲಿದೆ. ರೈತ ಮತ್ತು ಸಾರ್ವಜನಿಕರ ನಡುವಿನ ಸಂಬಂಧದ ಜೊತೆಗೆ ದೇಶಕ್ಕೆ ರೈತನ ಮಹತ್ವವನ್ನು ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುವುದು. ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಕಥೆ ಬರೆಯುವಾಗ ವಿಜಯ್​​​ ರಾಘವೇಂದ್ರರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೆ. ಅವರಿಗೆ ಕಥೆ ಹೇಳಿದಾಗ ಅವರು ಇಷ್ಟಪಟ್ಟು ನಟಿಸಲು ಒಪ್ಪಿಕೊಂಡಿದ್ದು, ತುಂಬಾ ಖುಷಿ ತಂದಿದೆ. ಅದ್ದೂರಿ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಮ್ಮ ತಂಡ ಹೊಂದಿದೆ. ಇಷ್ಟು ವರ್ಷಗಳ ನನ್ನ ಸಿನಿ ಪಯಣದಲ್ಲಿ ಇದೊಂದು ವಿಭಿನ್ನ ಶೈಲಿಯ ಸಿನಿಮಾ. ನನ್ನ ಹೃದಯಕ್ಕೆ ಹತ್ತಿರವಾದ ಚಿತ್ರವಾಗಿದ್ದು, ತುಂಬಾ ಪ್ರೀತಿಯಿಂದ ಮಾಡುತ್ತಿದ್ದೇನೆ" ಎಂದು ತಿಳಿಸಿದರು.

ಬಳಿಕ ನಟ ವಿಜಯ್​​ ರಾಘವೇಂದ್ರ ಮಾತನಾಡಿ, "ನಿರ್ದೇಶಕ ಪಿ.ಸಿ.ಶೇಖರ್ ಬಂದು ಕಥೆ ಹೇಳಿದಾಗ ತುಂಬಾ ಖುಷಿಯಾಯಿತು. ಅನ್ನದಾತ ರೈತನ ಕುರಿತಾದ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಿದ ನಿರ್ದೇಶಕ ಪಿ.ಸಿ.ಶೇಖರ್ ಹಾಗೂ ನಿರ್ಮಾಪಕ ಪ್ರಕಾಶ್ ಸಿದ್ದಪ್ಪ ಅವರಿಗೆ ಧನ್ಯವಾದಗಳು. ಪಿ.ಸಿ.ಶೇಖರ್ ನಿರ್ದೇಶನದ ನನ್ನ ಮೊದಲ ಸಿನಿಮಾ ಇದು" ಎಂದು ತಿಳಿಸಿದರು.

ಇದನ್ನೂ ಓದಿ: ಕಿರಣ್ ರಾಜ್ ನೋಡಲು ಆ.30 ಅಲ್ಲ, ಇನ್ನೂ 3 ವಾರ ಕಾಯಬೇಕು: 'ರಾನಿ' ಬಿಡುಗಡೆ ದಿನಾಂಕ ಮುಂದೂಡಿಕೆ - Ronny Release Date Postponed

ನಿರ್ಮಾಪಕ ಪ್ರಕಾಶ್ ಮಾತನಾಡಿ, "ರೈತರ ಕುರಿತ ವಿಷಯ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದೆ. ಪಿ.ಸಿ.ಶೇಖರ್ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದರು. ಈಗ ಅವರು ಅಲಯನ್ಸ್ ಯೂನಿವರ್ಸಿಟಿಯ ಫಿಲ್ಮ್ ಮೇಕಿಂಗ್ ಕೋರ್ಸ್‌ನ ಸಹಯೋಗದಲ್ಲಿ ಆಕಾಶ ಪಿಕ್ಚರ್ಸ್ ಬ್ಯಾನರ್‌ ಅಡಿಯಲ್ಲಿ ಚಿತ್ರ ನಿರ್ದೇಶಿಸುತ್ತಿರುವುದು ಸಂತೋಷದ ಸಂಗತಿ. ಅಲಯನ್ಸ್‌ನಲ್ಲಿ ಕಲಿತು ಈಗ ಬೇರೆ ಬೇರೆ ಉದ್ಯೋಗದಲ್ಲಿರುವ ಹಳೇ ವಿದ್ಯಾರ್ಥಿಗಳು ಚಿತ್ರ ನಿರ್ಮಾಣದಲ್ಲಿ ನಮ್ಮೊಂದಿಗಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಾಗುವುದು. ಚಿತ್ರದಲ್ಲಿ ವಿಜಯ್​​ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಉಳಿದ ಕಲಾವಿದರು ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ: ಸೆಬಾಸ್ಟಿನ್ ಡೇವಿಡ್ ನಿರ್ದೇಶನದ 'ಪೆನ್ ಡ್ರೈವ್' ಸಿನಿಮಾದಲ್ಲಿ ಮಾಲಾಶ್ರೀ, ತನಿಷಾ ಕುಪ್ಪಂಡ - Pendrive Movie

"ಅಲಯನ್ಸ್ ಯೂನಿವರ್ಸಿಟಿಯ ಚಲನಚಿತ್ರ ನಿರ್ಮಾಣ ಮತ್ತು ಮಾಧ್ಯಮ ಅಧ್ಯಯನದ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುತ್ತಿರುವ ಆಕಾಶ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ಸಿನಿಮಾ ಮಾಡುತ್ತಿರುವ ಖುಷಿ ಇದೆ. ಮುಂದಿನ ದಿನಗಳಲ್ಲಿ ಚಿತ್ರದ ಟೈಟಲ್ ಮತ್ತು ಕಲಾವಿದರ ಮಾಹಿತಿ ನೀಡಲಿದ್ದೇವೆ" ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.