ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ವಿಜಯ್ ದೇವರಕೊಂಡ ಸಕ್ಸಸ್ ಸಿನಿಮಾ ಮಾತ್ರವಲ್ಲದೇ, ತಮ್ಮ ಪ್ರೇಮ ಸಂಬಂಧದ ಸಲುವಾಗಿಯೂ ಸುದ್ದಿಯಲ್ಲಿರುತ್ತಾರೆ. ಕನ್ನಡತಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ಹೆಸರು ಕೇಳಿಬರುತ್ತಿರೋದು ನಿಮಗೆ ತಿಳಿದಿರುವ ವಿಚಾರವೇ. ಆದ್ರೆ ನಟ-ನಟಿ ಯಾವುದನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಹಾಗಾಗಿ ಸದ್ಯಕ್ಕಿದು ಊಹೆ ಅಥವಾ ವದಂತಿಯಷ್ಟೇ.
ವಿಜಯ್ ದೇವರಕೊಂಡ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಫ್ಯಾಮಿಲಿ ಸ್ಟಾರ್'. ಇತ್ತೀಚಿನ ದಿನಗಳಲ್ಲಿ ಈ ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ತಮ್ಮ ಚಿತ್ರದ ಪ್ರಚಾರ ಆರಂಭಿಸಿದ್ದಾರೆ. 'ಫ್ಯಾಮಿಲಿ ಸ್ಟಾರ್' ಏಪ್ರಿಲ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ, ಖ್ಯಾತ ನಟಿ ಮೃಣಾಲ್ ಠಾಕೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಪ್ರಮೋಶನ್ ವೇಳೆ ನಟನಿಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದ್ದು, ವಿಜಯ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.
ವಿಜಯ್ ದೇವರಕೊಂಡ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ಹೀರೋಯಿನ್ ರಶ್ಮಿಕಾ ಮಂದಣ್ಣ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಅಪಾರ ಸಂಖ್ಯೆಯ ಅಭಿಮಾನಿಗಳ ಊಹೆ. ತಮ್ಮ ಸಂಬಂಧದ ಬಗ್ಗೆ ಪ್ರೇಮಪಕ್ಷಿಗಳು ಮೌನ ಮುಂದುವರಿಸಿದ್ದರೂ, ಸ್ಟಾರ್ ಜೋಡಿ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ರಶ್ಮಿಕಾ-ವಿಜಯ್ ಡೇಟಿಂಗ್ ಸುದ್ದಿಗಳು, ಪೋಸ್ಟ್ಗಳು ಸಖತ್ ಸದ್ದು ಮಾಡುತ್ತವೆ. ಇದೀಗ ದಿ ಫ್ಯಾಮಿಲಿ ಸ್ಟಾರ್ ಚಿತ್ರದ ಪ್ರಚಾರದಲ್ಲಿ ಸ್ವತಃ ವಿಜಯ್ ದೇವರಕೊಂಡ ಅವರೇ ಫ್ಯಾಮಿಲಿ ಮ್ಯಾನ್ ಆಗಲು ರೆಡಿ ಎಂದಿದ್ದಾರೆ.
'ಫ್ಯಾಮಿಲಿ ಸ್ಟಾರ್' ಪ್ರಮೋಶನ್ ಸಂದರ್ಭ, ನಟ ಮೊದಲು ಪ್ರೇಮ ವಿವಾಹವಾಗುವುದಾಗಿ ಖಚಿತಪಡಿಸಿದರು. ಅವರ ಆಯ್ಕೆಗೆ ತಮ್ಮ ತಂದೆ-ತಾಯಿ ಒಪ್ಪುವುದು ಕೂಡ ಮುಖ್ಯ ಎಂಬುದನ್ನೂ ತಿಳಿಸಿದರು. ಖಂಡಿತಾವಾಗಿಯೂ ಮದುವೆ ಆಗುತ್ತೇನೆ. ಆದರೆ ಈ ವರ್ಷ ಅಲ್ಲ ಎಂದು ನಟ ಹೇಳಿಕೊಂಡಿದ್ದಾರೆ. ಮದುವೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮನಾರಾ ಚೋಪ್ರಾ ಬರ್ತ್ಡೇ ಪಾರ್ಟಿಯಲ್ಲಿ ಪ್ರಿಯಾಂಕಾ, ನಿಕ್ ಜೋನಾಸ್: ವಿಡಿಯೋ - Mannara Chopra Birthday
''2024ರಲ್ಲಿ ಮದುವೆ ಇಲ್ಲ. ಮುಂದಿನ ದಿನಗಳಲ್ಲಿ ಮದುವೆ ಆಗಲಿದ್ದೇನೆ. ನನಗೂ ಮದುವೆ ಆಗಬೇಕು, ಮಕ್ಕಳನ್ನು ಹೊಂದಬೇಕೆಂಬ ಮನಸ್ಸಿದೆ. ಆದ್ರೆ ಸದ್ಯಕ್ಕಿಲ್ಲ. ಲವ್ ಮ್ಯಾರೇಜ್ ಆಗುತ್ತೇನೆ. ನನ್ನ ಅಪ್ಪ ಅಮ್ಮ ಕೂಡ ಒಪ್ಪಬೇಕು, ಇಷ್ಟಪಡಬೇಕು'' - ವಿಜಯ್ ದೇವರಕೊಂಡ.
ಇದನ್ನೂ ಓದಿ: ಸ್ವಂತ ಜೆಟ್ನಲ್ಲಿ ಪ್ರವಾಸ ಕೈಗೊಂಡ ಸೂಪರ್ ಸ್ಟಾರ್ ರಾಮ್ ಚರಣ್ - Ram Charan
ವಿಜಯ್ ಮತ್ತು ರಶ್ಮಿಕಾ, ಡಿಯರ್ ಕಾಮ್ರೇಡ್ ಮತ್ತು ಗೀತಾ ಗೋವಿಂದಂ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಸುಂದರ ಜೋಡಿಯ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿವೆ. ಅಂದಿನಿಂದಲೂ ಇಬ್ಬರೂ ತಮ್ಮ ಸಂಬಂಧದ ಸಲುವಾಗಿ ಸುದ್ದಿಯಲ್ಲಿದ್ದಾರೆ. ಆದ್ರೆ ಈವರೆಗೆ ತಮ್ಮ ಪ್ರೀತಿ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ.