ETV Bharat / entertainment

'ಫ್ಯಾಮಿಲಿ ಸ್ಟಾರ್‌' ಟ್ರೇಲರ್ ರಿಲೀಸ್: ಏ.5ಕ್ಕೆ ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್ ಸಿನಿಮಾ ಬಿಡುಗಡೆ - Family Star Trailer - FAMILY STAR TRAILER

ಏಪ್ರಿಲ್ 5ರಂದು ಚಿತ್ರಮಂದಿರ ಪ್ರವೇಶಿಸಲಿರುವ 'ಫ್ಯಾಮಿಲಿ ಸ್ಟಾರ್‌' ಸಿನಿಮಾದ ಟ್ರೇಲರ್ ರಿಲೀಸ್​ ಆಗಿದೆ.

Family Star Trailer
'ಫ್ಯಾಮಿಲಿ ಸ್ಟಾರ್‌' ಟ್ರೇಲರ್
author img

By ETV Bharat Karnataka Team

Published : Mar 28, 2024, 12:43 PM IST

2024ರ ಬಹು ನಿರೀಕ್ಷಿತ ಚಿತ್ರ 'ಫ್ಯಾಮಿಲಿ ಸ್ಟಾರ್‌'ನ ಅಧಿಕೃತ ಟ್ರೇಲರ್​​ ಕೊನೆಗೂ ಹೊರಬಿದ್ದಿದ್ದು, ಸಿನಿಪ್ರಿಯರ ಕಾತರ ಅಂತ್ಯಗೊಂಡಿದೆ. ಪರಶುರಾಮ್ ಪೇಟ್ಲ ನಿರ್ದೇಶನದ 'ಫ್ಯಾಮಿಲಿ ಸ್ಟಾರ್‌' ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಬರುವ ತಿಂಗಳು ಏಪ್ರಿಲ್ 5ರಂದು ಚಿತ್ರಮಂದಿರ ಪ್ರವೇಶಿಸಲಿದ್ದು, ಇಂದು ಅನಾವರಣಗೊಂಡಿರುವ ಟ್ರೇಲರ್ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ​.

ಚಿತ್ರದಲ್ಲಿ ವಿಜಯ್ ದೇವರಕೊಂಡ ಫ್ಯಾಮಿಲಿ ಮ್ಯಾನ್​​ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ತೊಂದರೆಯಾದರೆ, ಹಿಂಸಾಚಾರಕ್ಕೆ ತಿರುಗುವ ವರ್ಕಿಂಗ್​ ಕ್ಲಾಸ್ ಹೀರೋ ಪಾತ್ರದಲ್ಲಿ ವಿಜಯ್​ ನಟಿಸಿದ್ದಾರೆ. 2 ನಿಮಿಷ 26 ಸೆಕೆಂಡ್‌ಗಳ ಈ ಟ್ರೇಲರ್ ನಾಯಕ ನಟ ವಿಜಯ್‌ ದೇವರಕೊಂಡ ಹೋರಾಟದ ಸುತ್ತ ಸುತ್ತುತ್ತದೆ. ನಾಯಕಿ ಮೃಣಾಲ್‌ ಠಾಕೂರ್ ಅವರನ್ನು ಓಲೈಸುವ ಪ್ರಯತ್ನ ಈ ಟ್ರೇಲರ್​ನಲ್ಲಿದೆ. ಇದೇ ಮೊದಲ ಬಾರಿಗೆ ವಿಜಯ್, ಮೃಣಾಲ್​ ತೆರೆ ಹಂಚಿಕೊಂಡಿದ್ದು, ಪ್ರೇಕ್ಷಕರು ಸಿನಿಮಾ ನೋಡುವ ಕುತೂಹಲ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಿಡುಗಡೆ ಆಗಿರುವ ನಂದನದನ, ಕಲ್ಯಾಣಿ ವಚ್ಚಾ ವಚ್ಚಾ ಮತ್ತು ಮಧುರಮು ಕಾಧ ಹಾಡುಗಳು ಸಿನಿಮಾ ಸುತ್ತಲಿರುವ ಕುತೂಹಲ, ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಸಿನಿಮಾ ಸುತ್ತಲಿನ ಕ್ರೇಜ್ ಹೆಚ್ಚಿಸಿದೆ. ಫ್ಯಾಮಿಲಿ ಡ್ರಾಮಾದ ಈ ಟ್ರೇಲರ್ ಆ್ಯಕ್ಷನ್, ಡ್ರಾಮಾ, ಹಾಸ್ಯ ಮತ್ತು ರೊಮ್ಯಾನ್ಸ್ ಎಲ್ಲವನ್ನೂ ಒಳಗೊಂಡಿದೆ.

  • " class="align-text-top noRightClick twitterSection" data="">

ವಿಜಯ್ ದೇವರಕೊಂಡ ಮತ್ತು ಪರಶುರಾಮ್ ಪೇಟ್ಲ ಕಾಂಬಿನೇಶನ್​ನ ಎರಡನೇ ಸಿನಿಮಾವಿದು. 2018ರಲ್ಲಿ ಬಂದ ಗೀತ ಗೋವಿಂದಂ ಚಿತ್ರದಲ್ಲಿ ಮೊದಲ ಬಾರಿ ಕೈ ಜೋಡಿಸಿದ್ದರು. ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ. ಗೀತ ಗೋವಿಂದಂನಲ್ಲಿ ವಿಜಯ್​ಗೆ ಜೋಡಿಯಾಗಿದ್ದ ರಶ್ಮಿಕಾ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಪಾರು ಧಾರವಾಹಿಯ ಆದಿ: 'ಅನಿಮಾ' ಟೈಟಲ್ ಪೋಸ್ಟರ್ ರಿಲೀಸ್ - Anima Poster

'ಫ್ಯಾಮಿಲಿ ಸ್ಟಾರ್‌' ಸಿನಿಮಾವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಕೆ.ಯು ಮೋಹನನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಾರ್ತಾಂಡ್ ಕೆ. ವೆಂಕಟೇಶ್ ಸಂಕಲನದ ಕೆಲಸ ನೋಡಿಕೊಂಡಿದ್ದಾರೆ. ಪರಶುರಾಮ್ ಅವರೇ ಕಥೆ ಬರೆದು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: 'ಹೀರಾಮಂಡಿ' ಕಾರ್ಯಕ್ರಮಕ್ಕೆ ಅದಿತಿ ರಾವ್​ ಹೈದರಿ ಗೈರು; ದೃಢಪಟ್ಟ ಮದುವೆ ವಿಚಾರ - Aditi Skips Heeramandi Event

ಪರಶುರಾಮ್ ಪೇಟ್ಲ ಅವರು ಕೊನೆಯದಾಗಿ 2022ರಲ್ಲಿ ಬಂದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಸರ್ಕಾರ ವಾರಿ ಪಾಠ ಸಿನಿಮಾವನ್ನು ನಿರ್ದೇಶಿಸಿದ್ದರು. ವಿಜಯ್ ದೇವರಕೊಂಡ ಕೊನೆಯದಾಗಿ ಸಮಂತಾ ರುತ್ ಪ್ರಭು ಜೊತೆ ಖುಷಿ ಚಿತ್ರದಲ್ಲಿ ಕಾಣಿಸಿಕೊಂಡರು. ಮತ್ತೊಂದೆಡೆ, ಮೃಣಾಲ್ ಠಾಕೂರ್ ಕೊನೆಯದಾಗಿ ಹಾಯ್ ನಾನ್ನ ಚಿತ್ರದಲ್ಲಿ ನಾನಿ ಜೊತೆ ಕಾಣಿಸಿಕೊಂಡಿದ್ದರು. ಈ ಎಲ್ಲಾ ಚಿತ್ರಗಳು ಯಶಸ್ವಿ ಪ್ರದರ್ಶನ ಕಂಡಿದ್ದವು. ಸದ್ಯ 'ಫ್ಯಾಮಿಲಿ ಸ್ಟಾರ್‌' ಮೇಲೆ ಎಲ್ಲರ ಗಮನ ನೆಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.